More

    ಗಿರಿಜನ ಹಾಡಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ

    ಹನಗೋಡು: ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಆದಿವಾಸಿಗಳಿಗೆ ಭೂಮಿ ಹಕ್ಕು ಹಾಗೂ ಗಿರಿಜನ ಹಾಡಿಗಳಿಗೆ ಮೂಲ ಸೌಕರ್ಯ ಒದಗಿಸಿಕೊಡಬೇಕೆಂದು ಕಾಡಂಚಿನ ಆದಿವಾಸಿಗಳು ಶಾಸಕ ಎಚ್.ಪಿ.ಮಂಜನಾಥ್ ಅವರಿಗೆ ಮನವಿ ಮಾಡಿದರು.


    ಹೋಬಳಿಯ ನಾಗಪುರ ಗಿರಿಜನ ಪುರ್ನವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಭೇಟಿ ಮಾಡಿದ ಆದಿವಾಸಿ ಮುಖಂಡರು, ನಾಗರಹೊಳೆ ಉದ್ಯಾನದಿಂದ ಹೊರಬಂದು ವಿವಿಧ ಹಾಡಿಗಳಲ್ಲಿ ಆಶ್ರಯ ಪಡೆದಿರುವ ಆದಿವಾಸಿಗಳು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಭೂಮಿಗಾಗಿ ಅರ್ಜಿ ಸಲ್ಲಿಸಿ ಹನ್ನೆರಡು ವರ್ಷ ಕಳೆದಿದ್ದರೂ ಈವರೆವಿಗೂ ಮಾನ್ಯ ಮಾಡಿರುವುದಿಲ್ಲ. ಕಾಲಮಿತಿಯೊಳಗೆ ವೈಯಕ್ತಿಕ ಮತ್ತು ಸಾಮೂಹಿಕ ಹಕ್ಕುಗಳನ್ನು ನೀಡಬೇಕೆಂದು ಮನವಿ ಮಾಡಿದರು.


    ಆದಿವಾಸಿಗಳ ಮನವಿ ಆಲಿಸಿದ ಶಾಸಕ ಎಚ್ ಪಿ ಮಂಜುನಾಥ್, ಆದಿವಾಸಿಗಳ ಸಮಸ್ಯೆ ಹಾಗೂ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಜಾರಿ ಸಂಬಂಧ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಸಿಸಿಡಿ ಯೋಜನೆಯಡಿ ಮನೆಗಳು ಮಂಜೂರಾಗಿದ್ದು, ಸೂಕ್ತ ದಾಖಲಾತಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿದ್ದೇನೆ. ನಿಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.


    ಗುರುಪುರ ಗ್ರಾ.ಪಂ.ಅಧ್ಯಕ್ಷೆ ರಾಧಾಮ್ಮ, ಉಪಾಧ್ಯಕ್ಷ ಲೋಕೇಶ್, ಪಿಡಿಒ ಯಶೋದಾ, ಆದಿವಾಸಿ ಮುಖಂಡರಾದ ವಸಂತ, ನಾಗರಾಜು, ಮುತ್ತಪ್ಪ, ಸುನೀಲ್, ಅನಿಲ್, ಬೋಜಮ್ಮ, ಸುಶ್ಮಿತಾ, ಲೋಕೇಶ್, ಪ್ರಕಾಶ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts