More

    ಗಿಡ ನೆಟ್ಟು ಪೋಷಣೆಯೂ ಮುಖ್ಯ

    ಹುಲಸೂರು: ಗಿಡ ನೆಟ್ಟರೆ ಸಾಲದು ಜತೆಗೆ ಪೋಷಿಸುವುದು ಮುಖ್ಯ ಎಂದು ಬಸವಕಲ್ಯಾಣದ ಎಚ್ಡಿಎಫ್ಡಿ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ ಸಂಗನಬಟ್ಟೆ ಹೇಳಿದರು. ಮುಚಳಂಬದ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್​ನಿಂದ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡು ಉಳಿಯಬೇಕಾದರೆ ಕಾಡು ಸುರಕ್ಷಿತವಾಗಿ ಇರಬೇಕು. ನಮ್ಮ ಪರಿಸರದಲ್ಲಿ ಪ್ರತಿ ವರ್ಷ ಐದು ಸಸಿಯನ್ನಾದರು ನೆಡಬೇಕು. ಶುದ್ಧಗಾಳಿ, ಸಮಯಕ್ಕೆ ಸರಿಯಾಗಿ ಮಳೆಯಾಗಬೇಕಾದರೆ ಮರಗಳ ರಕ್ಷಣೆ ಅವಶ್ಯ. ವಿನಾಕಾರಣ ಮರಗಳ ನಾಶಮಾಡಬಾರದು ಎಂದರು.
    ನಿವೃತ್ತ ಶಿಕ್ಷಕ ಕೆ.ಕಾಶೀನಾಥ ಮಾತನಾಡಿ, ಬ್ಯಾಂಕ್ನವರು ತಮ್ಮ ಶಾಖೆಯಲ್ಲಿ ಕುಳಿತು ಗ್ರಾಹಕರ ಜತೆ ವ್ಯವಹಾರ ಮಾಡುವ ಜತೆಗೆ ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ಮೂಡಿಸಿ, ಶಾಲಾ ಆವರಣದಲ್ಲಿ ಸಸಿ ನೆಡುತ್ತಿರುವುದು ಉತ್ತಮ ಕಾರ್ಯ ಎಂದರು.
    ಸುಧಿಂದ್ರ ಕುಲಕರ್ಣಿ, ಎಸ್ಡಿಎಂಸಿ ಅಧ್ಯಕ್ಷ ಮನೋಜ ಮಾಶೆಟ್ಟೆ, ದತ್ತು ಬಿರಾದಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಿಥುನ ಮೂಲಗೆ, ಪಿಡಿಒ ಓಂಕಾರ ಬಿರಾದಾರ, ಮುಖ್ಯಗುರು ರವಿ ಬಿರಾದಾರ, ಪ್ರಮುಖರಾದ ಎಚ್.ಕಾಶೀನಾಥ, ಜಗದೀಶ ಶುಕ್ಲಾ, ವಿಜಯಕುಮಾರ ಪಟ್ನೆ ಇತರರಿದ್ದರು. ಶಿವಶಂಕರ ಪತಂಗೆ ಸ್ವಾಗತಿಸಿ, ನಿರೂಪಣೆ ಮಾಡಿದರು. ಮಲ್ಲಿಕ್ಸಾಬ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts