More

    ಗಾಳಿ-ಮಳೆಯಿಂದ ಆಸ್ತಿಪಾಸ್ತಿ ನಷ್ಟ

    ಮೂಡಿಗೆರೆ: ತಾಲೂಕಿನಲ್ಲಿ ಗಾಳಿ-ಮಳೆ ಆರ್ಭಟ ಹೆಚ್ಚಾಗಿದ್ದು ಭೂಮಿ, ರಸ್ತೆ, ಮನೆ ಕುಸಿತ ಮುಂದುವರಿದಿದೆ. ಬುಧವಾರ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ತೆರಳಿದ ನಂತರ ರಜೆ ಘೊಷಿಸಿ ಎಡವಟ್ಟು ಮಾಡಿದ್ದರು. ಗುರುವಾರವೂ ಸಹ ಇದೇ ಗೊಂದಲ ಮರುಕಳಿಸಿತು. ಮಳೆ ಹೆಚ್ಚಾಗಿದ್ದರೂ ಗುರುವಾರ ರಜೆ ಘೊಷಣೆ ಮಾಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಳಗ್ಗೆ 9ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್ ಜಾಲತಾಣದಲ್ಲಿ ಸಂದೇಶ ರವಾನಿಸಿ ಆಯಾ ಶಿಕ್ಷಣ ಸಂಸ್ಥೆ ಮತ್ತು ಎಸ್​ಡಿಎಂಸಿ ತೀರ್ವನಿಸಿ ರಜೆ ನೀಡುವಂತೆ ಸೂಚಿಸಿದ ಬಳಿಕ ಎಲ್ಲ ರಜೆ ನೀಡಲಾಯಿತು.

    ಅಂಗಡಿ, ಹೊಸಕೆರೆ, ಉದುಸೆ, ದೇವರುಂದ, ಛತ್ರಮೈದಾನ, ಬಿನ್ನಡಿ, ಕೋಳೂರು, ಫಲ್ಗುಣಿ, ಬಿದರಹಳ್ಳಿ, ಹೆಬ್ರಿಗೆ, ಹೊಯ್ಸಳಲು, ಮಾಕೋನಹಳ್ಳಿ, ಚೇಗು ಗ್ರಾಮದಲ್ಲಿ ಮನೆಗಳು ಹಾನಿಗೀಡಾಗಿವೆ.

    ಕಾರಬೈಲು, ಕಡೇಮಾಡ್ಕಲ್, ಮೂಡಸಸಿ, ಬಿದರಹಳ್ಳಿ, ಹಳೇಕೋಟೆ, ತಮಟೆಬೈಲ್ ಮುಂತಾದೆಡೆ ಭೂಕುಸಿತದಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಗೋಣಿಬೀಡು ಕಮ್ಮರಗೋಡು, ಜನ್ನಾಪುರ, ಮಣ್ಣಿಕೆರೆ, ಚಂದ್ರಾಪುರ ಮಾಕೋನಹಳ್ಳಿ, ನಂದೀಪುರ ಮತ್ತಿತರ ಗ್ರಾಮಗಳ ತೋಟಗಳಲ್ಲಿ ಮರಗಳು ಬಿದ್ದು ಕಾಫಿ ಗಿಡಗಳು ನೆಲಕಚ್ಚಿವೆ.

    ಪಟ್ಟಣದ ಮಾರ್ಕೆಟ್ ರಸ್ತೆಯಿಂದ ಛತ್ರಮೈದಾನ ಬಡಾವಣೆವರೆಗೆ ಎತ್ತರದಲ್ಲಿರುವ 20 ಮನೆಗಳು ಭೂಕುಸಿತದಿಂದ ಹಾನಿಗೀಡಾಗುವ ಆತಂಕ ಎದುರಾಗಿದೆ. ಹಾಗಾಗಿ ತಡೆಗೋಡೆ ನಿರ್ವಿುಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts