More

    ಗಾನ ನಾದ ಸೌರಭ ಕಾರ್ಯಕ್ರಮ 11ಕ್ಕೆ 

    ದಾವಣಗೆರೆ: ಇಲ್ಲಿನ ಎಸ್‌ಎಸ್ ಬಡಾವಣೆಯ ಗಾನ ಸೌರಭ ಸಂಗೀತ ವಿದ್ಯಾಲಯದ ದಶಮಾನೋತ್ಸವದ ಅಂಗವಾಗಿ ಡಿ.11 ರಂದು ಸಂಜೆ 5ಕ್ಕೆ ನಗರದ ಮೋತಿ ವೀರಪ್ಪ ಪ್ರೌಢಶಾಲೆ ಆವರಣದಲ್ಲಿ ಗಾನ ನಾದ ಸೌರಭ ಕಾರ್ಯಕ್ರಮ ನಡೆಯಲಿದೆ.
    ಅಂದು ಸಂಜೆ 5ಕ್ಕೆ ಎಸ್ಸೆಸ್ ಕೇರ್ ಟ್ರಸ್ಟ್‌ನ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಸ್.ಎ. ರವೀಂದ್ರನಾಥ್ ಪಾಲ್ಗೊಳ್ಳುವರು ಎಂದು ವಿದ್ಯಾಲಯದ ಜಿಲ್ಲಾ ಘಟಕದ ಅಧ್ಯಕ್ಷೆ ಶುಭದಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಂಜೆ 5.30ಕ್ಕೆ ಗಾನ ಸೌರಭ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮವಿದೆ. ವಿದುಷಿ ವಿಜಯಲಕ್ಷ್ಮೀ ರಾಘು ಸಾರಥ್ಯದಲ್ಲಿ ಒಂದೇ ವೇದಿಕೆಯಲ್ಲಿ 40ಕ್ಕೂ ಹೆಚ್ಚು ವೈಣಿಕರಿಂದ ವೀಣಾವಾದನ ನಡೆಯಲಿದೆ.
    ವಿದ್ವಾನ್ ರಾಮಚಂದ್ರ ಅವರು ಭಾಷಾಂತರಿಸಿದ ತ್ಯಾಗರಾಜ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು. 3 ವರ್ಷಗಳಲ್ಲಿ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾದ 14 ಮಂದಿ ಹಾಗೂ ವಿವಿಧ ಕ್ಷೇತ್ರಗಳ 10 ಮಂದಿ ಮಹಿಳಾ ಸಾಧಕರನ್ನು ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
    ಗಾನಸೌರಭದಿಂದ 3ರಿಂದ 70 ವರ್ಷದ ವಯೋಮಾನದವರಿಗೆ ಸಂಗೀತ ಕಲಿಸಲಿದ್ದು, ಪರೀಕ್ಷೆಯನ್ನೂ ನಡೆಸಲಾಗುವುದು. ಮುಂದಿನ ದಿನಗಳಲ್ಲಿ 100 ವೀಣಾ ವಾದಕರನ್ನು ಒಂದೇ ವೇದಿಕೆಗೆ ತರುವ ಉದ್ದೇಶವಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆರ್.ಪ್ರೀತಿ, ಕವಿತಾ ಐನಳ್ಳಿ, ರೋಹಿಣಿ, ಸೀಮಾ, ರಾಜೇಶ್ವರಿ, ಶಕುಂತಲಾ, ಸ್ಮಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts