More

    ಗಾಣಗಾಪುರದಲ್ಲಿ ಲೋಕಕಲ್ಯಾಣಾರ್ಥ ಶಿವಪಂಚಾಯತನ ಹೋಮ

    ದೇವಲಗಾಣಗಾಪುರ: ಲೋಕ ಕಲ್ಯಾಣಾರ್ಥವಾಗಿ ಶಕ್ತಿ ಕ್ಷೇತ್ರ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯನ ಸನ್ನಿಧಾನದಲ್ಲಿ ಶಿವಪಂಚಾಯತನ ಹೋಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸಾಲಕಾರಿ ಕಾರ್ಯದರ್ಶಿ ವೃಷಭದೇವ ಪೂಜಾರಿ ತಿಳಿಸಿದರು.

    ಶ್ರೀ ದತ್ತಾತ್ರೇಯ ದೇವಸ್ಥಾನ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವಪಂಚಾಯತನ ವಿಶೇಷ ಹೋಮದ ಮೂರನೇ ದಿನವಾದ ಶನಿವಾರದ ಕಾರ್ಯಕ್ರಮದಲ್ಲಿ ಮಾತನಾಡಿ, ವರುಣದೇವನ ಮುನಿಸಿನಿಂದ ರೈತರ ಬಾಳು ಚಿಂತಾಜನಕವಾಗಿದೆ. ಅನೇಕ ದೇಶಗಳಲ್ಲಿ ಯುದ್ಧಗಳು ಆರಂಭಗೊAಡಿವೆ. ಭಾರತದಲ್ಲೂ ರಾಜಕೀಯ ಪಲ್ಲಟ ನಡೆಯುತ್ತಿದೆ. ಹೀಗಾಗಿ ಎಲ್ಲರೂ ಸಮೃದ್ಧವಾಗಿರಲಿ ಎಂಬ ಉz್ದೆÃಶದಿಂದ ಈ ಹೋಮ ಹಮ್ಮಿಕೊಳ್ಳಲಾಗಿದೆ ಎಂದರು.

    ಶಿವಪAಚಾಯತನ ಎಂದರೆ ಐದು ದೇವತೆಗಳನ್ನು ಆಹ್ವಾನಿಸಿ, ವಿಶೇಷವಾಗಿ ಪೂಜಿಸುವುದಾಗಿದೆ. `ಆದಿತ್ಯಂ ಅಂಬಿಕಾA ವಿಷ್ಣುಂ ಗಣನಾತಂ ಮಹೇಶ್ವರಂ’ ಎಂಬ ಶ್ಲೋಕದಂತೆ ಸೂರ್ಯ, ದೇವಿ, ನಾರಾಯಣ, ಗಜಾನನ ಹಾಗೂ ಶಿವನನ್ನು ಪೂಜಿಸುವುದಾಗಿದೆ. ಸರ್ವೇ ಜನ ಸುಖಿನೋ ಭವಂತು ಎಂಬ ಕಾರಣದಿಂದ ಲೋಕಕಲ್ಯಾಣಾರ್ಥವಾಗಿ ಧಾರವಾಡದ ಅರ್ಚಕರಾದ ರಮೇಶ ಭಟï, ವಿನಾಯಕ ಭಟ್ ಹಾಗೂ ತಂಡದಿAದ ನ.2ರಿಂದ ಹೋಮ ನಡೆಯುತ್ತಿದ್ದು, ಸೋಮವಾರ ಸಮಾರೋಪಗೊಳ್ಳಲಿದೆ ಎಂದರು.

    ಪ್ರಮುಖರಾದ ಘನಶಾಮ ಭಟï ಪೂಜಾರಿ, ಚಿಂತಾಮಣಿ ಭಟ್ ಪೂಜಾರಿ, ಕರುಣಾಕರ ಭಟ್ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts