More

    ಗಾಂಧಿ ಮನೆತನದ ವಿರುದ್ಧ ಸೇಡಿನ ರಾಜಕೀಯ


    ಯಾದಗಿರಿ: ನ್ಯಾಷನಲ್ ಹೇರಾಲ್ಡ್ ಪತ್ರಿಕೆಗೆ ಸಂಬಂಸಿದಂತೆ ಕಾಂಗ್ರೆಸ್ನ ಅನಾಯಕಿ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ನಿಂದ ಶುಕ್ರವಾರ ನಗರದ ಗಾಂವೃತ್ತದಲ್ಲಿನ ಪಂಪ ಮಹಾಕವಿ ಮಂಟಪದ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಮಾತನಾಡಿ, ಕಳೆದ ಹತ್ತು ವರ್ಷದ ಹಿಂದೆ ಸ್ಥಗಿತಗೊಂಡ ಪತ್ರಿಕೆಯ ವ್ಯವಹಾರಕ್ಕೆ ಸಂಬಂಸಿದಂತೆ ಕೇಂದ್ರ ಸರ್ಕಾರ, ಗಾಂಧಿ ಮನೆತನದ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿದೆ. ದೇಶದ ಜನತೆಗೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಈಡೇರಿಸಲು ಆಗದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ದೇಶದಲ್ಲಿ ಬಿಜೆಪಿ ಕೇವಲ ಸೇಡಿನ ರಾಜಕೀಯ ಮಾಡುತ್ತಿದೆ. ಮತಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಸುಳ್ಳು ಕೇಸ್ ದಾಖಲಿಸಲಾಗುತ್ತಿದ್ದು, ಪೊಲೀಸರು ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತನೆ ಮಾಡುತ್ತಿದ್ದಾರೆ. ಬಿಜೆಪಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

    ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರ, ಚೆನ್ನಾರಡ್ಡಿ ತುನ್ನೂರ, ವಿಧಾನಸಭೆ ಮಾಜಿ ಉಪ ಸಭಾಪತಿ ಡೇವಿಡ್ ಸಿವಿಯೋನ್, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರಡ್ಡಿ ಕಂದಕೂರ, ಜಿಪಂ ಮಾಜಿ ಉಪಾಧ್ಯಕ್ಷ ಶರಣಿಕುಮಾರ ದೋಕಾ, ಹನಮೇಗೌಡ ಮರಕಲ್, ಪ್ರಮುಖರಾದ ವಿಶ್ವನಾಥ ನೀಲಹಳ್ಳಿ, ಸುದರ್ಶನ ನಾಯಕ, ಮಂಜೂಳಾ ಗೂಳಿ, ಡಾ.ಭೀಮಣ್ಣ ಮೇಟಿ, ಚನ್ನಕೇಶವಗೌಡ ಬಾಣತಿಹಾಳ, ಮರೆಪ್ಪ ಬಿಳಾರ, ಸ್ಯಾಮಸನ್ ಮಾಳಿಕೇರಿ, ಸೋಮು ಮಸ್ಕನಳ್ಳಿ, ವಿಶ್ವನಾಥರಡ್ಡಿ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts