More

    ಗಾಂಜಾ ಸಾಗಿಸುತ್ತಿದ್ದ 8 ಮಂದಿ ಬಂಧನ

    ಶಿವಮೊಗ್ಗ: ಭದ್ರಾವತಿ ಬಿ.ಎಚ್.ರಸ್ತೆಯ ನ್ಯೂ ಸ್ಟಾರ್ ಇಂಜಿನಿಯರಿಂಗ್ ವರ್ಕ್ಸ್ ಹತ್ತಿರ ಸೋಮವಾರ ಓಮಿನಿ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ 8 ಆರೋಪಿಗಳನ್ನು ಬಂಧಿಸಿರುವ ಹಳೇನಗರ ಪೊಲೀಸರು, 2 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

    ಭದ್ರಾವತಿ ಹೊಸಸಿದ್ದಾಪುರದ ವಿಜಯ್ಕುಮಾರ್ (19), ಚಂದನ್ (18), ಲಿಖಿತ್​ಕುಮಾರ್ (21), ಸಂಕ್ಲಿಪುರದ ಕಿರಣ್ (22), ಚೆಲುವಕುಮಾರ್ (23), ಜಟ್​ಪಟ್​ನಗರದ ಕಿರಣ್ (28), ಹಳೇನಗರದ ಮಂಜುನಾಥ್ (27) ಹಾಗೂ ಸಿದ್ದಾಪುರ ತಾಂಡಾದ ಪವನ್ ನಾಯಕ್ (18) ಬಂಧಿತರು.

    ಡಿವೈಎಸ್ಪಿ ಸುಧಾಕರ್ ನಾಯಕ್ ಮಾರ್ಗದರ್ಶನ, ಭದ್ರಾವತಿ ಸಿಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಹಳೇನಗರ ಪಿಎಸ್​ಐ ಶ್ರೀನಿವಾಸ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ. ಬಂಧಿತರಿಂದ 6.400 ಕೆಜಿ ಗಾಂಜಾ ಹಾಗೂ 2.5 ಲಕ್ಷ ರೂ. ಮೌಲ್ಯದ ಓಮಿನಿಯನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts