More

    ಹುತಾತ್ಮ ಯೋಧ ಗುರು ಪುಣ್ಯಸ್ಮರಣೆ

    ಕೆ.ಎಂ.ದೊಡ್ಡಿ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಗುಡಿಗೆರೆ ಕಾಲನಿ ಗ್ರಾಮದ ಯೋಧ ಎಚ್.ಗುರು ಅವರ 5ನೇ ವರ್ಷದ ಪುಣ್ಯ ಸ್ಮರಣೆ ಬುಧವಾರ ನಡೆಯಿತು.

    ಸಮೀಪದ ಮೆಳ್ಳಹಳ್ಳಿ ಸಮೀಪದ ಮದ್ದೂರು-ಮಳವಳ್ಳಿ ಹೆದ್ದಾರಿ ಬಳಿ ಇರುವ ಸಮಾಧಿಗೆ ಯೋಧನ ತಂದೆ ಹೊನ್ನಯ್ಯ, ತಾಯಿ ಚಿಕ್ಕ ತಾಯಮ್ಮ, ಪತ್ನಿ ಕಲಾವತಿ, ಸಹೋದರರಾದ ಎಚ್.ಆನಂದ, ಮಧು, ಅತ್ತೆ, ಮಾವ, ಭಾವ ಮೈದುನ ಅರವಿಂದ್ ಸೇರಿದಂತೆ ಬಂಧುಬಳಗ ಹಾಗೂ ನೂರಾರು ಜನರು ಪ್ರತ್ಯೇಕವಾಗಿ ಪಾಲ್ಗೊಂಡು ನಮಿಸಿದರು.

    ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಸಿಪಾಯಿ ಶ್ರೀನಿವಾಸ್ ಮಾತನಾಡಿ, ದೇಶಕ್ಕಾಗಿ ಪುಲ್ವಾಮ ದಾಳಿಯಲ್ಲಿ ತನ್ನ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧ ಎಚ್.ಗುರು ಅವರ ಸ್ಮರಣೆ ನಿರಂತರವಾಗಿದ್ದು, ನಿವೃತ್ತ ಯೋಧರು ಅವರಿಗೆ ನಮನ ಸಲ್ಲಿಸುತ್ತಿದ್ದೇವೆ. ಹುತಾತ್ಮ ಯೋಧ ಎಚ್.ಗುರು ಯುವಕರಿಗೆ ಸ್ಫೂರ್ತಿದಾಯಕವಾಗಿರಲಿ, ಯುವಕರು ಸೇನೆ ಸೇರುವ ಮೂಲಕ ದೇಶದ ಸೇವೆ ಮಾಡುವಂತೆ ಕರೆ ನೀಡಿದರು.

    ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಿ.ಕೆ.ರಮೇಶ್, ಡಾ.ಶಿವಣ್ಣ, ಜಿಲ್ಲಾಧ್ಯಕ್ಷ ಮಲ್ಲರಾಜು ಸೇರಿದಂತೆ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts