More

    ಗದ್ದಲ ಮಾಡದೆ ಬೀಜ ಪಡೆಯಿರಿ

    ಹುಲಸೂರು: ಕರೊನಾ ವೈರಸ್ ನಗರವಲ್ಲದೆ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಯಾವುದೇ ಕಾರಣಕ್ಕೂ ಭಯಪಡದೆ ಸರ್ಕಾರದ ನಿಯಮ ಪಾಲನೆ ಮಾಡಬೇಕು. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಕೊರತೆ ಆಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾ ಪಂಚಾಯಿತಿ ಪ್ರತಿಪಕ್ಷ ನಾಯಕ ಸುಧೀರ ಕಾಡಾದಿ ಹೇಳಿದರು.
    ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ವಿವಿಧ ನಮೂನೆಯ ಬೀಜ ವಿತರಣೆಗೆ ಚಾಲನೆ ನೀಡಿದ ಅವರು, ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಯಾ, ಉದ್ದು, ಹೆಸರು, ತೊಗರಿ ಹಾಗೂ ಹೈಬ್ರಿಡ್ ಜೋಳದ ಬೀಜಗಳ ದಾಸ್ತಾನು ಮಾಡಲಾಗಿದ್ದು, ರೈತರು ಯಾವುದೇ ಕಾರಣಕ್ಕೂ ಗದ್ದಲ ಮಾಡದೆ ಬೀಜ ಪಡೆಯಬೇಕು ಎಂದು ಕೋರಿದರು.
    ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೈಹಿಕ ಅಂತರ ಕಾಯ್ದುಕೊಂಡು ಸರದಿಯಂತೆ ಖರೀದಿ ಕೇಂದ್ರಕ್ಕೆ ಬಂದು ಬೀಜ ಪಡೆಯಬೇಕು. ಈ ವರ್ಷದಿಂದ ಪ್ರತ್ಯೇಕವಾಗಿ ಮಿರಕಲ್, ಗೋರ್ಟಾ, ಬೇಲೂರ, ಮುಚಳಂಬ ಗ್ರಾಮಗಳಲ್ಲಿ ತಾತ್ಕಾಲಿಕ ಬೀಜ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಆಯಾ ಗ್ರಾಮಗಳಲ್ಲಿ ಜೂನ್ 1ರಂದು ಬೀಜ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
    ಕೃಷಿ ಅಧಿಕಾರಿ ಮನಿಶಾ ಬಿರಾದಾರ ಮಾತನಾಡಿ, ಹುಲಸೂರು ಸೇರಿ ಮುಚಳಂಬ, ಗೋರ್ಟಾ, ಮಿರಕಲ್ ಹಾಗೂ ಬೇಲೂರಗಳಲ್ಲಿ ಸೋಯಾ ಬೀಜ ಸಿಗಲಿವೆ. ಕರೊನಾ ಹರಡುವಿಕೆ ತಡೆಗಟ್ಟಲು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ರೈತರು ವಾಸಿಸುವ ಗ್ರಾಮಗಳಲ್ಲೇ ಬೀಜ ವಿತರಿಸಲಾಗುವುದು ಎಂದು ತಿಳಿಸಿದರು.
    ತಾಪಂ ಸದಸ್ಯರಾದ ಸಿದ್ರಾಮಪ್ಪ ಕಾಮಣ್ಣ, ಮಲ್ಲಮ್ಮ ಧಬಾಲೆ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಪ್ರಮುಖರಾದ ರಣಜೀತ ಗಾಯಕವಾಡ, ಬಸವರಾಜ ಜಡಗೆ, ಶಾಂತಕುಮಾರ ಹಾರಕೂಡೆ, ದೇವಿಂದ್ರ ಪವಾರ್, ಆಕಾಶ ಬಿರಾದಾರ, ರಜನಿ ಕುರೆ, ದತ್ತು ಕಾಕನಾಳೆ, ಸಂಗಪ್ಪ ಹಲಿಂಗೆ, ಸತ್ಯವಾನ, ಸುನೀಲ ಭುಜಂಗೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts