More

    ಗದುಗಿನ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಡಾ.ಪುಟ್ಟರಾಜ ಗವಾಯಿ ಅವರಿಗೆ ಸಲ್ಲುತ್ತದೆ.

    ಗದಗ : ಸಂಗೀತ ಸೇವೆಯಿಂದ ಗದುಗಿನ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಡಾ.ಪುಟ್ಟರಾಜ ಗವಾಯಿ ಅವರಿಗೆ ಸಲ್ಲುತ್ತದೆ. ಸಮಾಜದಲ್ಲಿ ಜೋಳಿಗೆಯನ್ನು ಹಿಡಿದು ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅವರು ನಿಜವಾದ ದೇವರಾಗಿದ್ದಾರೆ ಎಂದು ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ ಹೇಳಿದರು.
    ಮುಂಡರಗಿಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿಯು ಶುಕ್ರವಾರ ಹಮ್ಮಿಕೊಂಡಿದ್ದ ಲಿಂ.ಪಂಡಿತ್ ಪುಟ್ಟರಾಜ ಗವಾಯಿಗಳ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸರ್ಕಾರಿ ಪಿಯು ಕಾಲೇಜ್‍ನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಇಟಗಿ, ವೈದ್ಯ ಡಾ.ಪ್ರಕಾಶ ಹೊಸಮನಿ, ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವು ಹಡಪದ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮುಧೋಳ, ಜಿಲ್ಲಾ ಸಂಚಾಲಕ ಶಿವು ವಾಲಿಕಾರ ಮತ್ತಿತರರು ಮಾತನಾಡಿದರು. ನಂತರ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು.
    ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಅಶೋಕ ಚೂರಿ, ದೇವಪ್ಪ ಇಟಗಿ, ಚಂದ್ರು ನಾವಿ, ಯಲ್ಲಪ್ಪ ಗಣಾಚಾರಿ, ನಾಗರಾಜ ಮುರಡಿ, ನಾಗರಾಜ ಮುಖೆ, ರಂಗಪ್ಪ ಹೊಸಮನಿ, ಶರಣಪ್ಪ ಹೊಸಮನಿ, ಸುನಂದಾ, ಈರಣ್ಣ ಹಡಪದ, ಗುರುನಾಥ ಲಕ್ಕುಂಡಿ, ಹನುಮಂತಪ್ಪ ವಾಲಿಕಾರ, ರಮೇಶ ಹೊಸಮನಿ, ವಿನಾಯಕ ಕರಿಬಿಷ್ಠಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts