More

    ಗದಗ: ಸಹಕಾರ ಸಂಘಗಳ ಅಧ್ಯಕ್ಷ/ಕಾರ್ಯ ನಿರ್ವಾಹಕರಿಗೆ ಒಂದು ದಿನದ ತರಬೇತಿ ಶಿಬಿರ

    ಗದಗ:
    ಕಾನೂನಿನ ಚೌಕ್ಕಟಿನಲ್ಲಿ ಸಂದ ವ್ಯವಹಾರ ನಡೆಸಬೇಕು. ಪ್ರತಿ ವರ್ಷ ನಿಗದಿತ ಅವಧಿಯೊಳಗೆ ಲೆಕ್ಕ ಪರಿಶೋಧನೆಯನ್ನು ಮಾಡಿಸಿ ಸಮರ್ಪಕ ವ್ಯವಹಾರದಿಂದ ಸದಸ್ಯರ ಗಮನ ಸಂಘದತ್ತ ಸೆಳೆಯುವುದು ಅವಶ್ಯಕವಾಗಿದೆ ಎಂದು ಸಂಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಆರ್​. ಸಿ. ಯಕ್ಕುಂಡಿ ಹೇಳಿದರು.
    ಸಹಕಾರ ಮಹಾಮಂಡಳ ವತಿಯಿಂದ ನಗರದ ರೋಟರಿ ಕಮ್ಯುನಿಟಿ ಕೇರ್​ ಸೆಂಟರ್​ ನಲ್ಲಿ ಶುಕ್ರವಾರ ಜರುಗಿದ ಜಿಲ್ಲೆಯ ಎಲ್ಲಾ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ಅಧ್ಯರ ಹಾಗೂ ಮುಖ್ಯ ಕಾರ್ಯನಿರ್ವಾಹಕರ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಗಳು ಸಹಕಾರ ತತ್ವದಡಿ ಕೆಲಸ ಮಾಡುವುದರ ಜತೆಗೆ ಲಾಭವನ್ನೂ ಗಳಿಸಬೇಕಿದೆ. ಈ ಹಿನ್ನೆಲೆ ಜನರ ವಿಶ್ವಾಸ ಗಳಿಸಬೇಕು. ಹಾಗಾಗಿ ಲೆಕ್ಕಪರಿಶೋಧನೆ ಅಗತ್ಯವಿದೆ ಎಂದು ತಿಳಿಸಿದರು.
    ನಿವೃತ್ತ ಸಹಾಯಕ ನಿಬಂಧಕ ಬಿ. ಎಂ. ಬಿಳೆಯಲಿ ಮಾತನಾಡಿ, ಸಹಕಾರ ಚಳವಳಿ, ಸಹಕಾರ ತತ್ವ, ಸಹಕಾರ ವ್ಯವಸ್ಥೆ ಅಗತ್ಯವಷ್ಠೇ ಅಲ್ಲ ಅನಿವಾರ್ಯವೂ ಆಗಿದೆ. ಜನಸಾಮಾನ್ಯರ ಆಥಿರ್ಕ ಬೆಳವಣಿಗೆಗೆ, ಸಹನೀಯ ಬದುಕನ್ನು ಸೃಷ್ಠಿಸುವುದಕ್ಕೆ ಸಹಕಾರ ವ್ಯವಸ್ಥೆ ಮಾತ್ರವೇ ಪರಿಣಾಮಕಾರಿ ಎಂದು ತಿಳಿಸಿದರು.
    ಗದಗ ಸಹಕಾರ ಸಂಗಳ ಸಹಾಯಕ ನಿಬಂಧಕಿ ಎನ್​. ಎನ್​. ಸರಾ್​ ಮಾತನಾಡಿ, ಸಹಕಾರ ೇತ್ರದ ಎಲ್ಲ ವಲಯಗಳ ಬಲವರ್ಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಹತ್ವ ನೀಡುತ್ತಿವೆ. ನೂತನ ರಾಷ್ಟ್ರೀಯ ಸಹಕಾರ ನೀತಿ ಶ್ರೀವೇ ಅನುಷ್ಠಾನಗೊಳ್ಳುವ ಭರವಸೆ ಇದೆ. ಸಹಕಾರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಚಿಂತನೆಗಳು ನಡೆದಿದ್ದು, ರಾಜ್ಯದ ಸಹಕಾರ ಚಳವಳಿ ಸಮಗ್ರವಾಗಿ ಬೆಳೆಯಬೇಕೆಂಬ ಧನಾತ್ಮಕ ಭಾವನೆ ಎಲ್ಲ ಸಂಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
    ಸಿ. ಎಂ. ಪಾಟೀಲ ಅಧ್ಯತೆ ವಹಿಸಿದ್ದರು. ಬಿ. ಆರ್​. ನಿಡಗುಂದಿ, ಪ್ರಕಾಶ ನವಲಗುಂದ, ಶಾಂತಾ ಎಚ್​. ಎಂ. ಇತರರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ, ಸಂಕಲ್ಪ, ಸಮೃದ್ಧಿ ಹಾಗೂ ಸಂತೃಪ್ತಿ, ಜೀವನ ಶೈಲಿ, ಸಹಕಾರ ಕಾಯಿದೆ ವಿಷಯಗಳ ಕುರಿತು ಉಪನ್ಯಾಸ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts