More

    ಗದಗ: ಮಹಿಳೆಯರು ಸವಾಲುಗಳನ್ನು ಎದುರಿಸುವ ದುರ್ಗೆಯರಾಗಿ – ವಿಜಯಲಕ್ಷ್ಮಿ ಬಾಳೇಕುಂದ್ರಿ

    ಮಹಿಳೆಯರು ಸವಾಲುಗಳನ್ನು ಎದುರಿಸುವ ದುರ್ಗೆಯರಾಗಿ – ವಿಜಯಲಕ್ಷ್ಮಿ ಬಾಳೇಕುಂದ್ರಿ

    ಗದಗ:
    ಮಹಿಳೆಯರು ಇತಿಹಾಸ ಸೃಷ್ಟಿಸಬೇಕಾದರೆ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ಮಹಿಳೆ ತನ್ನಲ್ಲಿನ ಸಾಮರ್ಥ್ಯದಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮುಂದಾಗಬೇಕು ಎಂದು ಖ್ಯಾತ ಹೃದ್ರೊಗ ತಜ್ಞೆ ಡಾ. ವಿಜಯಲಕ್ಷ್ಮಿಬಾಳೇಕುಂದ್ರಿ ಹೇಳಿದರು.
    ಲಕ್ಕುಂಡಿಯ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ರವಿವಾರ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡಬೇಕು ಎಂಬುದು ಶಿವಾಜಿ ಮಹಾರಾಜರು ಹೇಳಿದ್ದರು.
    ಬೆಳವಡಿ ಮಲ್ಲಮ್ಮ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದಂತಹ ಧೀಮಂತ ಮಹಿಳೆಯಾಗಿದ್ದಾಳೆ. ಶಿವಾಜಿ ಮಹಾರಾಜರ ವಿರುದ್ಧ ತನ್ನ ಹತ್ತು ಜನ?ಮಹಿಳಾ ಸೈನ್ಯದೊಂದಿಗೆ ಶಿವಾಜಿ ಮಹಾರಾಜರ ಮೇಲೆ ಮಿಂಚಿನ ದಾಳಿ ಮಾಡಿದ್ದನ್ನು ಕಂಡು ಬೆರಗಾದ ಶಿವಾಜಿ ಮಹಾರಾಜರು ಮಲ್ಲಮ್ಮನ ಮುಂದೆ ಮಂಡಿಯೂರಿದ್ದನ್ನು ಇತಿಹಾಸದಿಂದ ತಿಳಿದುಕೊಳ್ಳ ಬಹುದಾಗಿದೆ.
    ಮಹಿಳೆ ಪ್ರಕೃತಿ, ಮಹಿಳೆ ಮಾತೃ ರೂಪಿಣಿ. ಎಲ್ಲ ಸದ್ಗುಣಗಳನ್ನು ಹೊಂದಿದಂತಹ ದೈವ ಸ್ವರೂಪಿಣಿ ಮಹಿಳೆ ಯಾಗಿದ್ದಾಳೆ. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯು ಪರುಷ ಸಮಾನ ಎಲ್ಲ ಕೆಲಸಗಳನ್ನು ಮಾಡುತ್ತಾಳೆ ಎಂದರು.
    ಮಹುಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಕೇವಲ ಗಂಡನನ್ನು ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವದೇ ಒಂದು ಸಾಧನೆ ಎಂದು ತಿಳಿದುಕೊಳ್ಳಬಾರದು. ನಾವು ಸವಾರಿ ಮಾಡುವಂತಹ ದುರ್ಗೆಯರಾಗದೆ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಹ ದುರ್ಗೆಯರಾಗಬೇಕು. ಮಹಿಳೆಯರು ತಮ್ಮ ಆತ್ಮ ಬಲವನ್ನು ಬೆಳೆಸಿಕೊಂಡು ಸಾಧಕಿಯರಾಗಬೇಕು ಎಂದು ಬಾಳೆಕುಂದ್ರಿ ಹೇಳಿದರು.
    ಉಪನ್ಯಾಸಕಿ ಸಂಧ್ಯಾ ವಿ ಅವರು ಕರ್ನಾಟಕದ ಇತಿಹಾಸ ಮತ್ತು ಪರಂಪರೆಯಲ್ಲಿ ಮಹಿಳೆ ಕುರಿತು ಮಾತಾನಡಿ, ಮಹಿಳೆಯರ ಕುಶಲತೆ, ಜಾಣ್ಮೆಯನ್ನು ನಮ್ಮ ಜನಪದಗಳಲ್ಲಿ ಕಾಣಬಹುದು. ಎರಡನೇ ಶತಮಾನದಲ್ಲಿಯೇ ಕರ್ನಾಟಕದಲ್ಲಿ ಮಹಿಳೆಯರು ತಮ್ಮನ್ನು ಗುರುತಿಸಿಕೊಂಡಿದ್ದರು. ಆ ಕಾಲದಲ್ಲಿ ಮಹಿಳೆಯರೂ ಕೂಡ ಆಡಳಿತ ವ್ಯವಸ್ಥೆಯಲ್ಲಿದ್ದರು ಎಂಬುದನ್ನು ಶಾಸನಗಳಿಂದ ತಿಳಿದು ಬರುತ್ತದೆ. ದಾನ ಚಿಂತಾಮಣಿ ಎಂಬ ಹೆಸರು ಬಂದಿರುವದೇ ಅತ್ತಿಮಬ್ಬೆಯಿಂದ ಎಂದು ಅಭಿಪ್ರಾಯಪಟ್ಟರು.
    ಆಥಿರ್ಕ ಸಬಲೀಕರಣ ಮತ್ತು ಮಹಿಳೆ ಕುರಿತು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಪಾಟೀಲ ಮಾತನಾಡಿ, ಮಹಿಳೆಯರಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕು. ಮಹಿಳೆಯರು ಎಲ್ಲಾರಂಗಗಳಲ್ಲಿ ಭಾಗವಹಿಸುವ ಮೂಲಕ ಮಹಿಳಾ ಶಕ್ತಿ ಯಾವದಕ್ಕು ಕಡಿಮೆ ಇಲ್ಲ ಎಂಬುದದನ್ನು ಪದೇ ಪದೆ ಸಾಬೀತು ಪಡಿಸಬೇಕು ಎಂದರು.
    ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಗದಗಿನ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಉಪ ವಿಭಾಗಾಧಿಕಾರಿ ಅನ್ನರ್ಪೂಣ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ಡಾ. ರಶ್ಮಿ ಅಂಗಡಿ ಸ್ವಾಗತಿಸಿದರು. ಕ್ಷಮಾ ವಸ್ತ್ರದ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts