More

    ಗದಗ: ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಮತದಾನ ಮಹತ್ವ: ವೈಶಾಲಿ ಎಂ.ಎಲ್​

    ಗದಗ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಎಲ್ಲರೂ ಮತದಾನ ಮಾಡುವದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಹೇಳಿದರು.
    ನಗರದ ಹೊಸ ಬಸ್​ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಶುಕ್ರವಾರ ಜರುಗಿದ ಸಂಸ್ಥೆಯ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ವಿದ್ಯುನ್ಮಾನ ಮತಯಂತ್ರದ ತರಬೇತಿ ಪ್ರಾತ್ಯಕ್ಷತೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಸಾರಿಗೆ ನೌಕರರು ಚಾಲಕ, ನಿರ್ವಾಹಕರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.
    ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅವರು ವಿದ್ಯುನ್ಮಾನ್​ ಮತಯಂತ್ರ ಬಳಕೆಯ ಪ್ರಾತ್ಯಕ್ಷಿಕೆಯನ್ನು ವಿವರಿಸುವ ಮೂಲಕ ಕರ್ತವ್ಯ ಮೇಲೆ ಇರುವ ನೌಕರರು ಮತದಾನ ಮಾಡುವ ರೀತಿಯನ್ನು ವಿವರಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ವಹಿಸಿ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಮತದಾನ ಮಾಡುವದು ಪವಿತ್ರವಾದ ಕೆಲಸ. ನಮ್ಮ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗದೇ ತಪ್ಪದೇ ಮತದಾನ ಮಾಡುವಂತೆ ವಿನಂತಿಸಿದರು.
    ಜಿಲ್ಲಾ ಯೋಜನಾಧಿಕಾರಿ ಮಾರುತಿ, ಪಿ.ವೈ ಗಡೇದ, ರೀಟಾ ಮಿರಜಕರ, ಬಿ. ಎಲ್​. ಗೆಣ್ಣೂರರವರು, ಆರ್​.ಎಸ್​. ಕಾಶೀಗೌಡ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts