More

    ಗದಗ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

    ಗದಗ
    ಕನ್ನಡ ಕಲಿಕೆಗೆ ಪ್ರಥಮ ಆದ್ಯತೆ ನೀಡಬೇಕು. ಕನ್ನಡವು ಮಾತೃಭಾಷೆ ಅಷ್ಟೇ ಅಲ್ಲದೇ ನಮ್ಮ ಹೃದಯದ ಭಾಷೆಯಾಗಿ ಎಲ್ಲೆಡೆ ಮೊಳಗಲಿ. ಇಂಗ್ಲೀಷ ವ್ಯಾಮೋಹದಲ್ಲಿ ಕನ್ನಡ ಭಾಷೆಯ ಬಳಕೆ ಕುಸಿಯದಿರಲಿ ಎಂದು ಸಮ್ಮೇಳನದ ಸರ್ವಾಧ್ಯೆ ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ ಅಸುಂಡಿ ಹೇಳಿದರು.
    ತಾಲೂಕಿನ ಹರ್ತಿ ಗ್ರಾಮದ ಹತಿರ್ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಟಕದಿಂದ ಕನ್ನಡ ಸಾಹಿತ್ಯ ಪರಿಷತ್ತಿನ 4ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯತೆ ವಹಿಸಿ ಮಾತನಾಡಿದರು.
    ನೆಲ ಜಲ ಗಡಿ ಸಮಸ್ಯೆಗಳು ತಲೆದೊರಿದಾಗ ನಾವೆಲ್ಲರೂ ಕನ್ನಡಿಗರು ಒಗ್ಗಟ್ಟಾಗಿ ಹೋರಾಡೋಣ. ಕನ್ನಡ ನಾಡು ನುಡಿಗಾಗಿ ಅಪಾರ ಸಾಹಿತ್ಯ ಕೃಷಿಗೈದ ಮಹನೀರನ್ನು ನಾವೆಲ್ಲರೂ ಗೌರವಿಸೋಣ. ಕನ್ನಡವನ್ನು, ಕನ್ನಡತನವನ್ನು ಉಳಿಸಿ ಬೆಳಸೋಣ. ಎಲ್ಲರೂ ಕನ್ನಡಮ್ಮನ ಮಕ್ಕಳು ಎನ್ನುವ ಏಕತೆಯ ಭಾವನೆ ಪ್ರತಿಯೊಬ್ಬರ ಮನದಲ್ಲಿ ಗಟ್ಟಿಗೊಳ್ಳಲಿ ಎಂದು ಸಲಹೆ ನೀಡಿದರು.
    ಕನ್ನಡ ಭಾಷೆಯ ಉಳಿವಿಗಾಗಿ ದಣದಲ್ಲಿ ಯಕ್ಷಗಾನ ಉತ್ತರ ಕರ್ನಾಟಕದಲ್ಲಿ ಮೂಡಲಪಾಯ, ಮೊಳಗಲುಪಾಯ, ಗೀಗಿ ಪದ, ಜಾನಪದ, ಕೃಷ್ಣ ಪಾರಿಜಾತ, ದೊಡ್ಡಾಟ, ಸಣ್ಣಾಟ ಇಂತಹ ಅನೇಕ ವಿಭಾಗದಲ್ಲಿ ಕನ್ನಡ ರಣೆಯಾಗಿದೆ. ಜೋಗುಳ ಪದ ಸೋಬಾನ ಪದ ಬೀಸುವ ಹಾಡು ಹೀಗೆ ಹಲವು ರೀತಿಯಲ್ಲಿ ಕನ್ನಡದ ಪದ ಭಂಡಾರ ಶ್ರೀಮಂತಗೊಂಡಿದೆ ಎಂದು ಹೇಳಿದರು.
    ಪ್ರೊ. ಚಂದ್ರಶೇಖರ ವಸ್ತ್ರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡೂ ಕನ್ನಡ ಜನಪದ ಸಾಹಿತ್ಯ, ಗದಗ ತಾಲೂಕು ದರ್ಶನ, ತಣಧಾನ್ಯದಿಂದ ಆರೋಗ್ಯ ಸಂವರ್ಧನೆ ವಿಷಯಗಳ ಕುರಿತು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು.
    ಕವಿ ನಯಸೇನ ವೇದಿಕೆಯಲ್ಲಿ ಧ್ವಜಾರೋಹಣವನ್ನು ಹತಿರ್ ಗ್ರಾಪಂ ಅಧ್ಯ ಸೋಮರಡ್ಡಿ ನಡವೂರ, ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಪರಿಷತ್ತಿನ ಧ್ವಜ, ತಾಲೂಕು ಕಸಾಪ ಅಧ್ಯೆ ಡಾ.ರಶ್ಮಿ ಅಂಗಡಿ ಕನ್ನಡಧ್ವಜ ನೆರವೇರಿಸಿದರು. ಸದಾಶಿವಾನಂದ ಭಾರತಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕೆ.ಎಚ್.ಬೇಲೂರ, ತಾಲೂಕು ಕಸಾಪ ಅಧ್ಯೆ ಡಾ.ರಶ್ಮಿ ಅಂಗಡಿ, ಪಾರ್ವತೆಮ್ಮ ಕುರ್ತಕೋಟಿ, ಐ.ಎ.ಗಾಡಗೊಳಿ, ಅಂದಾನಪ್ಪ ಕೊಟ್ಟೂರಶೆಟ್ಟರ, ಭೋಜರಾಜ ನಾವಳ್ಳಿ, ಜಿ.ಎಸ್.ಸಿಂದಗಿ ಇದ್ದರು.

    Advertisement  

    ಕೋಟ್:
    ಸಮ್ಮೇಳನಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಜನಪದ ಸಾಹಿತ್ಯ ಸತ್ವವನ್ನು ಸಾರುತ್ತವೆ. ಗ್ರಾಮೀಣ ಭಾಗದಲ್ಲಿ ಇಂತಹ ಸಮ್ಮೇಳನವನ್ನು ಹತಿರ್ಯಲ್ಲಿ ಆಯೋಜಿಸುವುದು ಸಂತಸ ತಂದಿದೆ. ನಯಸೇನ, ಹುಯಿಲಗೋಳ ನಾರಾಯಣರಾಯರು, ಚನ್ನವಿರ ಕಣವಿ ಹೀಗೆ ಹಲವಾರು ಕವಿ ಮಹನೀಯರು ನಮ್ಮ ಕನ್ನಡದ ಆಸ್ತಿ. ವಚನ ಸಾಹಿತ್ಯದ ಮೂಲಕ ಮನುಷ್ಯನ ಬೌದ್ಧಿಕತೆಯನ್ನು ಹಾಗೂ ಸಾತ್ವಿಕ ಬದುಕಿನ ಸತ್ವವನ್ನು ಸಾರಿದ್ದಾರೆ. ಅಂತಹ ಸಾಹಿತ್ಯ ಸಾರ್ವಕಾಲಿಕವಾಗಿದೆ.
    – ಪ್ರೊ. ಚಂದ್ರಶೇಖರ ವಸ್ತ್ರದ, ಹಿರಿಯ ಸಾಹಿತಿ

    ಬಾಕ್ಸ್:
    ಹತಿರ್ಯ ಮುಖ್ಯದ್ವಾರದಿಂದ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯರ ಮೆರವಣಿಗೆ, ಡೊಳ್ಳು ಕುಣಿತ, ಕಂಸಾಳೆ ಹಾಗೂ ಕನ್ನಡಾಭಿಮಾನಿ ಮಲ್ಲಿಕಾರ್ಜುನ ಖಂಡಮ್ಮನವರ ಕನ್ನಡದ ಛದ್ಮವೇಷ ಜನಮನ ಸೆಳೆಯಿತು. ಹಲವಾರು ವಿವಿಧ ವಾದ್ಯಗ ಮೂಲಕ ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts