More

    ಗದಗ: ಜಿಲ್ಲೆಯಲ್ಲಿ ಶಿವರಾತ್ರಿ ಸಂಭ್ರಮ

    ಗದಗ: ಜಿಲ್ಲೆಯಾದ್ಯಂತ ಶನಿವಾರ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯಲ್ಲಿನ ವಿವಿಧ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ, ಮಂಗಳಾರತಿ ಹಾಗೂ ಲಲಿತಾ ಸಹಸ್ರನಾಮ ಪಾರಾಯಣವು ಭಕ್ತರನ್ನು ಆಕಷಿರ್ಸಿದವು.
    ಭಕ್ತರು ದೇವಾಲಯಗಳತ್ತ ಹೆಜ್ಜೆ ಹಾಕಿ ಶಿವನನ್ನು ಆರಾಧನೆ ಮತ್ತು ಮಂತ್ರ ಪಠಿಸುತ್ತ, ರುದ್ರಾಕ್ಷಿ ಮಾಲೆಯನ್ನು ಪೂಜಿಸಿ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಡೀ ದಿನ ಶಿವನನ್ನು ಜಪಿಸಿದರು. ಮಹಾಶಿವರಾತ್ರಿ ಪ್ರಯುಕ್ತವಾಗಿ ಭಕ್ತರು ಬೆಳಗ್ಗೆಯಿಂದಲೇ ನಿರಾಹಾರಿ ಉಪವಾಸ ಮಾಡಿದರು. ಕೆಲವರು ಅಲ್ಪೋಪಹಾರ, ಹಣ್ಣುಗಳನ್ನು ಸೇವಿಸುತ್ತ ಶಿವನ ಧ್ಯಾನ ಮಾಡಿ ತಮ್ಮ ಇಷ್ಠಾರ್ಥಗಳನ್ನು ಬೇಡಿಕೊಳ್ಳುವ ಜೊತೆಗೆ ಶಿವನಾಮ ಸ್ಮರಣೆ ಕೈಗೊಂಡರು.
    ತ್ರಿಕೂಟೇಶ್ವರ ದೇವಸ್ಥಾನ, ಬೆಟಗೇರಿ ರಂಗಪ್ಪಜ್ಜನ ಮಠದ ಹತ್ತಿರದ ಅಮರೇಶ್ವರ ದೇವಸ್ಥಾನ, ವಿವಿಧೆಡೆ ಇರುವ ಈಶ್ವರ ದೇವಸ್ಥಾನ, ಶಹಪೂರಪೇಟೆಯ ಶಂಕರಲಿಂಗ ದೇವಸ್ಥಾನ, ಸರಾಫ್​ ಬಜಾರ್​ ರಸ್ತೆಯ ಪಂಚಲಿಗೇಶ್ವರ ದೇವಸ್ಥಾನ, ಸಂಭಾಪೂರ ರಸ್ತೆಯ ಕಾಶೀ ವಿಶ್ವನಾಥ ದೇವಸ್ಥಾನ ಸೇರಿದಂತೆ ವಿವಿಧೆಡೆ ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಎಳನೀರು ಅಭಿಷೇಕ ಪೂಜೆ ನಡೆಯಿತು. ಇತಿಹಾಸ ಪ್ರಸಿದ್ಧವಾದ ಕೃತಪುರ ನಿವಾಸಿ ತ್ರಿಕೂಟೇಶ್ವರ ಹಾಗೂ ಭಲ್ಲೇಶ್ವರ ದೇವಸ್ಥಾನದಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮಗಳಾದ ರುದ್ರಾಭಿಷೇಕ, ಬಿಲ್ವಾರ್ಚಣೆ ಹಾಗೂ ಮಂಗಳಾರತಿ ಜರುಗಿತು.
    ನಗರದ ತ್ರಿಕೂಟೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದ ಮಹಾ ಶಿವರಾತ್ರಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ತ್ರಿಕೂಟೇಶ್ವರ ದೇವಸ್ಥಾನ ಐತಿಹಾಸಿಕವಾಗಿದ್ದು, ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರು ಲಿಂಗುಗಳು ಒಂದೇ ಗರ್ಭಗುಡಿಯಲ್ಲಿ, ಒಂದೆ ಪ್ರಾಣ ಬಟ್ಬಲದಲ್ಲಿರುವುದು ಇಲ್ಲಿಯ ವಿಶೇಷವಾಗಿದೆ. ಹೀಗಾಗಿ ವಿಶೇಷ ಉಳ್ಳ ದೇವಸ್ಥಾನಕ್ಕೆ ಸಾಕಷ್ಟು ಭಕ್ತರ ಹರಿದು ಬರುತ್ತಾರೆ. ಗದಗ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮ, ಜಿಲ್ಲೆಗಳಿಂದಲೂ ಭಕ್ತರು ಶಿವರಾತ್ರಿ ಪೂಜೆಗೆ ಆಗಮಿಸುತ್ತಾರೆ. ಇಲ್ಲಿ ವಿಶೇಷವಾಗಿ ಲು ರುದ್ರಾಭಿಷೇಕ, ಕ್ರೀರಾಭಿಷೇಕ, ಹೋಮ ಹೀಗೆ ಅನೇಕ ಪೂಜಗಳು ಜರುಗಿದವರು. ಭಜನೆ, ಜಾಗರಣೆ ನಡೆದವರು. ಭಕ್ತರು ಸಾಮೂಹಿಕ ಮಂತ್ರಪಠಣ ಮಾಡುವುದರ ಜೊತೆಗೆ ಭಕ್ತಿಗೆ ಪಾತ್ರರಾದರು. ಭಕ್ತರು ಬೆಳಗಿನಿಂದ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನಿತರಾದರು. ಸನಾತನ ಸಂಸ್ಥೆ ವತಿಯಿಂದ ದೇವಸ್ಥಾನಕ್ಕೆ ಬಂದಿದ ಭಕ್ತಾದಿಗಳಿಗೆ ಶಿವನ ಮಹತ್ವ “ಓಂ ನಮಃ ಶಿವಾಯ’ ಮಂತ್ರವನ್ನು ಸಾಮೂಹಿಕವಾಗಿ ನಾಮಜಪ ಮಾಡಿಸಲಾಯಿತು. ಹಾಗೆಯೇ ಸಂಸ್ಥೆಯ ಸಾತ್ವಿಕ ವಸ್ತುಗಳ ಮತ್ತು ಗ್ರಂಥಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

    ಬಾಕ್ಸ್​:
    ಭಕ್ತರಿಗೆ ಶರಬತ್ತು ವಿತರಣೆ
    ಶಿವರಾತ್ರಿ ಅಂಗವಾಗಿ ನಗರದ ತ್ರಿಕೋಟೇಶ್ವರ ದೇವಸ್ಥಾನದಲ್ಲಿ ಶಿವನ ದರ್ಶನಕ್ಕೆ ಆಗಮಿಸಿದ ಭಕ್ತರು ಶರಬತ್ತು ವಿತರಣೆ ಮಾಡಲಾಯಿತು. ನಗರದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸರದಿಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು. ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಭಕ್ತರಿಗೆ ಶರಬತ್ತು ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts