More

    ಗದಗ: ಕೋವಿಡ್ ನಿಯಂತ್ರಣಕ್ಕೆ ಪೂರ್ವಭಾವಿ ಸಭೆ

    ಜಿಲ್ಲೆಯಲ್ಲಿ ಸಂಭವನೀಯ  ಕೋವಿಡ್ 4 ನೇ ಅಲೆ ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕು. ಈ ಕುರಿತು  ಇಲಾಖಾಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕೋವಿಡ್  ಪರಿಷ್ಕೃತ ಮಾರ್ಗಸೂಚಿಯಂತೆ ಕೋವಿಡ್  ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಗೆ ಕಡ್ಡಾಯವಾಗಿ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು.  ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು, ಆಕ್ಸಿಜನ್ ಘಟಕ, ವೆಂಟಿಲೇಟರ್ ಗಳು   ಸಮರ್ಪಕ ರೀತಿಯಲ್ಲಿ ಕೆಲಸ ನಿರ್ವಹಿಸುವದನ್ನು ಪರೀಕ್ಷಿಸಬೇಕು. ಹೊಸ ವರ್ಷಾಚರಣೆಯ ಸಂದರ್ಭದಲ್ಲಿಯೂ ಸರ್ಕಾರದಿಂದ ಹೊರಡಿಸಿದ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.  ಸಂತೆ,  ಬಸ್ ನಿಲ್ದಾಣ , ಚಲನಚಿತ್ರ ಮಂದಿರಗಳು,  ಸಭೆ ಸಮಾರಂಭ ನಡೆಯುವ ಪ್ರದೇಶ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ   ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮತ್ತು ಮಾಸ್ಕ್ ಧಾರಣೆ ಮಾಡುವುದು ಕಡ್ಡಾಯವಾಗಿರುತ್ತದೆ.  ಜನನಿಬಿಡ ಪ್ರದೇಶಗಳಲ್ಲಿ  ಮಾಸ್ಕ್  ಧರಿಸಿದ್ದರೆ ಅಂತಹವರ ಮೇಲೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದರು.    

     ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ತಮ್ಮ ಆರೋಗ್ಯ ಕಾಪಾಡಿಕೊಂಡು ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸುವುದು ಕೂಡ ಅವಶ್ಯಕವಾಗಿದೆ.  1 ನೇ ಡೋಸ್ ಲಸಿಕೆ ಪಡೆದವರು 2 ನೇ ಡೋಸ್ , 2 ನೇ ಡೋಸ್ ಲಸಿಕೆ ಪಡೆದವರು ಬೂಸ್ಟರ್ ಡೋಸ್ ಲಸಿಕೆಯನ್ನು ತಪ್ಪದೇ ಪಡೆಯಬೇಕು ಎಂದರು.  ಇಲಾಖಾಧಿಕಾರಿಗಳು ದೈನಂದಿನ ಸಾರ್ವಜನಿಕ ಸೇವೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ ಧರಿಸಿ ಕಾರ್ಯನಿರ್ವಹಿಸಬೇಕು.

    ಕಂಟೈನ್‍ಮೆಂಟ್ ವಲಯಗಳಿಗೆ ಸಂಬಂಧಿಸಿದಂತೆ  ಮಾತನಾಡಿದ ಜಿಲ್ಲಾಧಿಕಾರಿಗಳು  5 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್  ಪ್ರಕರಣಗಳು  ವರದಿಯಾದಲ್ಲಿ  ಕ್ಲಸ್ಟರ್ ಎಂದು ಪರಿಗಣಿಸಬೆಕು.  ನಗರ ಪ್ರದೇಶಗಳಲ್ಲಿ  ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ  50 ಮೀಟರ್ ವ್ಯಾಪ್ತಿಯಲ್ಲಿ  ಮನೆಗಳು  , ವಸತಿ ಸಮುಚ್ಛಯಗಳಲ್ಲಿ ಪ್ರಕರಣಗಳು ಕಂಡು ಬಂದರೆ ಆಯಾ ಮಹಡಿಗಳು ಅಂತಹ ಪ್ರದೇಶಗಳನ್ನುಮೈಕ್ರೋ ಕಂಟೈನ್‍ಮೆಂಟ್ ವಲಯವೆಂದು ಪರಿಗಣಿಸಬೇಕು ಎಂದರು.  
     ಗ್ರಾಮೀಣ ಪ್ರದೇಶಗಳಲ್ಲಿ ಒಂದು  ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ 50 ಮೀಟರ್ ರೇಡಿಯಸ್‍ನಲ್ಲಿರುವ ಮನೆಗಳು  ಇಂತಹ  ಪ್ರದೇಶಗಳನ್ನು ಮೈಕ್ರೋ ಕಂಟೈನ್ ಮೆಂಟ್ ವಲಯವೆಂದು ಘೋಷಿಸಬೇಕೆಂದರು. 15 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸಬೇಕೆಂದರು.   ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಪ್ರಕರಣಗಳು ವರದಿಯಾದಲ್ಲಿ ಸದರಿ ಸಾಲಿನಲ್ಲಿರುವ ಎಲ್ಲ ಮನೆಗಳು ಅಥವಾ 100ಮೀಟರ್ ರೇಡಿಯಸ್ ನಲ್ಲಿರುವ ಮನೆಗಳು ಅಥವಾ  ವಸತಿ ಸಮುಚ್ಛಯಗಳಲ್ಲಿ ಪ್ರಕರಣಗಳು ಕಂಡು ಬಂದರೆ  ಆಯಾ ಮಹಡಿಗಳು ಅಂತಹ ಪ್ರದೇಶಗಳನ್ನು  ದೊಡ್ಡ ಕ್ಲಸ್ಟರ್  ಎಂದು ಪರಿಗಣಿಸಬೇಕೆಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ ನುಚ್ಚಿನ್ ಮಾತನಾಡಿ   ಕೋವಿಡ್  ಮುಂಜಾಗ್ರತಾ ಕ್ರಮವಾಗಿ  ಜಿಲ್ಲೆಯ  ಸರ್ಕಾರಿ ಆಸ್ಪತ್ರೆಗಳಲ್ಲಿ 873 ಬೆಡ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 302 ಬೆಡ್ ಗಳು ಒಟ್ಟಾರೆಯಾಗಿ 1175 ಬೆಡ್ ಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಲಾಗಿದೆ.  ಜಿಮ್ಸ್ ನಲ್ಲಿ ಮಕ್ಕಳಿಗಾಗಿ 100 ಬೆಡ್ ಗಳನ್ನು, ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ 10,  ಶಿರಹಟ್ಟಿ ತಾಲೂಕಾ ಆಸ್ಪತ್ರೆಯಲ್ಲಿ 5  ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 90 ಬೆಡ್ ಗಳನ್ನು ಹೀಗೆ ಒಟ್ಟಾರೆಯಾಗಿ ಮಕ್ಕಳಿಗಾಗಿ  205 ಬೆಡ್ ಗಳನ್ನು ಮೀಸಲಿರಿಸಲಾಗಿದೆ. ಎಲ್ಲ ಸರ್ಕಾರಿ  ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ  ರೋಗಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts