More

    ಗದಗ: ಕೃಷಿ, ಶಿಣ, ಆರೋಗ್ಯಕ್ಕೆ ಹೆಚ್ಚು ಅಧ್ಯತೆಯ ಬಜೆಟ್​- ಎಸ್​.ವಿ. ಸಂಕನೂರು

    ಗದಗ

    ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಶಿಣಕ್ಕೆ ಶೇ. 12, ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಶೇ.5, ಕೃಷಿ ಮತ್ತು ತೋಟಗಾರಿಕೆಗೆ ಶೇ. 3, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಗೆ ಶೇ. 6, ಸಮಾಜ ಕಲ್ಯಾಣ ಇಲಾಖೆಗೆ ಶೇ. 4, ಲೋಕೋಪಯೋಗಿ ಇಲಾಖೆಗೆ ಶೇ.3 ರಷ್ಟು ಅನುದಾನ ಹಂಚಿಕೆ ಮಾಡುವುದರ ಮೂಲಕ ಶಿಣ, ಆರೋಗ್ಯ, ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅಧ್ಯತೆ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು ರೈತರಿಗೆ ನೀಡುತ್ತಿದ್ದ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲದಿಂದ 5 ಲಕ್ಕೆ ಹೆಚ್ಚಿಸಿರುವುದು, “ಭೂ ಸಿರಿ’ ನೂತನ ಯೋಜನೆಯಡಿ 10 ಸಾವಿರ ಹೆಚ್ಚುವರಿ ಸಹಾಯಧನ, ಸಣ್ಣ ಅತೀ ಸಣ್ಣ ರೈತರ ಕುಟುಂಬಗಳಿಗೆ ”ಜೀವನಜ್ಯೋತಿ” ವಿಮಾ ಯೋಜನೆಗಳನ್ನು ಜಾರಿಗೆ ತಂದಿರುವುದು ಸಂತೋಷದ ವಿಷಯ. ಪ್ರತಿ ಹಳ್ಳಿಯಲ್ಲಿ ಪ್ರತಿ ವರ್ಷ 2 ಬಾರಿ ಆರೋಗ್ಯ ಶಿಬಿರ ಏರ್ಪಡಿಸುವುದು ಮತ್ತು ಕ್ಯಾನ್ಸರ್​ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು “ಜೀವಸುಧೆ’ ಎಂಬ ವ್ಯಾಪಕ ತಪಾಸಣೆ ಶಿಬಿರ, ಕಡಿಮೆ ದರದಲ್ಲಿ 129 ತಾಲ್ಲೂಕುಗಳಲ್ಲಿ ಪ್ರಯೋಗಾಲಯಗಳ ಸೇವೆ ಮತ್ತು ಬೆಂಗಳೂರು ನಗರದಲ್ಲಿ ಅಂಗಾಂಗ ಜೋಡಣೆಗೆ ದೇಶದಲ್ಲೇ ಪ್ರಥಮ ಸಾರ್ವಜನಿಕ ಆಸ್ಪತ್ರೆ ಕ್ರಮ ಕೈಗೊಂಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. “ಮುಖ್ಯಮಂತ್ರಿ ವಿದ್ಯಾಶಕ್ತಿ” ಯೋಜನೆ ಪ್ರಾರಂಭಿಸಿ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಉಚಿತವಾಗಿ ಶಿಣ ನೀಡುವ ಯೋಜನೆ ಜಾರಿಗೆ ತಂದಿರುವುದು ಐತಿಹಾಸಿಕ ನಿರ್ಣಯವಾಗಿದೆ. ಶಾಲಾ ಕಾಲೇಜು ವಿದ್ಯಾಥಿರ್ಗಳಿಗೆ ಸಾರಿಗೆ ಸೇವೆ ನೀಡಲು “ಮಕ್ಕಳ ಬಸ್ಸು’ ಎಂಬ ಯೋಜನೆಗೆ 100 ಕೋಟಿ ನೀಡಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ ಎಂದು ಸಂಕನೂರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts