More

    ಗದಗ: ‘ಒಗ್ಗಟ್ಟಾಗಿರಿ, ಕಾಲೆಳೆಯಬೇಡಿ’ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಗುಟುರು.

    ಗದಗ : ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಮುಖಂಡರು ಹೌಹಾರಿದ್ದಾರೆ. ಈ ಹಿನ್ನೆಲೆ ಗುರುವಾರ ಜರುಗಿದ ಪ್ರಜಾಧ್ವನಿ ವೇದಿಕೆ ಕಾರ್ಯಕ್ರಮದಲ್ಲೇ ಎಲ್ಲ ಆಕಾಂಕ್ಷಿಗಳಿಗೂ ನೇರವಾಗಿ ಎಚ್ಚರಿಕೆ ಸಂದೇಶ ನೀಡಿದ ರಾಜ್ಯ ಮುಖಂಡರು ‘ಒಟ್ಟಾಗಿರಿ, ಒಬ್ಬರಿಗೊಬ್ಬರು ಕಾಲೆಳೆಯಬೇಡಿ’ ಸೂಕ್ಷ್ಮ ಸಂದೇಶ ರವಾನಿಸಿದ್ದಾರೆ. 

    ಕಳೆದ ಬಾರಿ ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ  ಸೇರಿ ಇಬ್ಬರೇ ಇದ್ದ ಆಕಾಂಕ್ಷಿಗಳ ಸಂಖ್ಯೆ ಈ ಬಾರಿ 14ಕ್ಕೆ ಏರಿಕೆಯಾಗಿದೆ. ಎಸ್ಸಿ ಮೀಸಲು ಕ್ಷೇತ್ರ ಆಗಿದ್ದರಿಂದ ಟಿಕೆಟ್ ಗಾಗಿ ಎಸ್ಸಿ ಸಮುದಾಯದ ಎಡ ಬಲದ ಹೋರಾಟ ಶುರುವಾಗಿದೆ. ಎಡ ದಲ್ಲಿ  ಮಾದಿಗರು, ಸಮಗಾರ, ಮಚ್ಚಿಗಾರ, ಚಲವಾದಿ ಬಲದಲ್ಲಿ ಬಜಂತ್ರಿ, ಬೋವಿ(ಒಡ್ಡರ), ಲಮಾಣಿ ಅಭ್ಯರ್ಥಿಗಳು ಟಿಕೆಟ್ ಪಟ್ಟಿಯಲ್ಲಿದ್ದಾರೆ. 

    ವೇದಿಕೆ ಭಾಷಣದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರ ಮಠ ಅವರು 14 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದು ಪ್ರಸ್ತಾಪಿಸುತ್ತಿದ್ದಂತೆ ಸಿದ್ದರಾಮಯ್ಯ ಆಶ್ಚರ್ಯಗೊಂಡು ಎಚ್.ಕೆ. ಪಾಟೀಲರತ್ತ ನೋಡಿದರು. ಎಚ್.ಕೆ. ಪಾಟೀಲರು ‘ಹೌದು’ ಎಂದು ಪ್ರತಿಕ್ರಿಯಿಸಿದರು. ಇದನ್ನರಿತ ಸಿದ್ದರಾಮಯ್ಯ ತಮ್ಮ ಬಹಿರಂಗ ವೇದಿಕೆ ಭಾಷಣದಲ್ಲೇ ಒಗ್ಗಟ್ಟು ಪ್ರದರ್ಶಿಸಲು  ಆಕಾಂಕ್ಷಿಗಳಿಗೆ ಸೂಚಿಸಿದರು.

    “14 ಜನರಲ್ಲಿ ಟಿಕೆಟ್ ಒಬ್ಬರಿಗೇ ನೀಡಬೇಕು. ಟಿಕೆಟ್ ಸಿಗಲಿಲ್ಲವೆಂದು ಒಬ್ಬರಿಗೊಬ್ಬರು ಕಾಲೆಳೆಯಬೇಡಿ’. ನೀವು ತಪ್ಪು ಎಸಗಿದರೆ ಕಾಂಗ್ರೆಸ್ಸಿಗೇ ನಷ್ಟ. ಒಟ್ಟಾಗಿದ್ದರೆ ರಾಜ್ಯದಲ್ಲಿ ಸರ್ಕಾರ ನಮ್ಮದೇ. ಆಕಾಂಕ್ಷಿಗಳಿಗೆ ಯಾರಿಗೂ ಮಾತನಾಡಲು ಅವಕಾಶ ಕೊಟ್ಟಿಲ್ಲ. ಒಬ್ಬರಿಗೆ ಮಾತನಾಡಲು ಅವಕಾಶ ಕೊಟ್ಟರೆ ಎಲ್ಲರಿಗೂ ಕೋಡಬೇಕಾಗುತ್ತದೆ. ಸಮಯದ ಮಿತಿ ಮತ್ತು ಏಕತೆಯ ಹಿನ್ನೆಲೆ ಯಾರಿಗೂ ಅವಕಾಶ ಕೊಟ್ಟಿಲ್ಲ’ ಎಂದು ಸಿದ್ದರಾಮಯ್ಯ ವೇದಿಕೆ ಮೇಲೆ ಕುಳಿತಿದ್ದ ಆಕಾಂಕ್ಷಿಗಳತ್ತ ನೋಡಿ ಸೂಚಿಸಿದರು. ಒಳಬೇಗುದಿ ಅರಿತ ರಾಜ್ಯ ಮುಖಂಡರು ಎಲ್ಲರನ್ನೂ ಸಮನಾಗಿ ಕಾಣಲು ಪ್ರಯತ್ನಿಸಿದರು.

    *ಆಣೆ ಪ್ರಮಾಣ* 

    ಆಕಾಂಕ್ಷಿಗಳ ಪಟ್ಟಿ ಅಧಿಕವಾಗಿದ್ದು

    ಆಕಾಂಕ್ಷಿಗಳ ಜತೆ ಸಭೆ ನಡೆಸುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಎಲ್ಲ ಆಕಾಂಕ್ಷಿಗಳನ್ನು ಒಟ್ಟುಗೂಡಿಸಿ ಆಣೆ ಪ್ರಮಾಣಕ್ಕೆ ಮುಂದಾಗಿದೆ. ಒಗ್ಗಟ್ಟಿನ ಮಂತ್ರ ಪಠಿಸುತ್ತಿದೆ. ಇತ್ತೀಚೆಗೆ ಶಿರಹಟ್ಟಿಯ ಹೊಳಲಮ್ಮ ದೇವಿ ದೇವಸ್ಥಾನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹಾಗೂ ತಾಲೂಕು ಅಧ್ಯಕ್ಷ ಉಮಾಯನ ಮಾಗಡಿ ನೇತೃತ್ವದಲ್ಲಿ 14 ಜನ ಆಕಾಂಕ್ಷಿಗಳನ್ನೂ ಒಟ್ಟಿಗೆ ಸೇರಿಸಲಾಗಿತ್ತು. ಪರಸ್ಪರ ಆಕಾಂಕ್ಷಿಗಳ ಅಭಿಪ್ರಾಯ ಪಡೆಯಲಾಗಿದ್ದು, ಯಾರಿಗೇ ಟಿಕೆಟ್ ಸಿಕ್ಕರೂ ದ್ವೇಷಿಸದೇ ಒಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತೇವೆ ಎಂದು ದೇವಿ ಸಮಕ್ಷಮದಲ್ಲಿ ಪ್ರಮಾಣ ಮಾಡಿಸಲಾಗಿದೆ. ‘ಪ್ರಮಾಣ’ ಎಂಬ ಭಾವನಾತ್ಮಕ ವಿಚಾರವನ್ನು ಆಕಾಂಕ್ಷಿಗಳ ಮಧ್ಯೆ ಹರಿಬಿಟ್ಟಿರುವ ಜಿಲ್ಲಾ ಮುಖಂಡರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವಿನ ಮಂತ್ರ ಪಠಿಸಿದ್ದಾರೆ.

    *****

    ಕಾಂಗ್ರೆಸ್ ಆಕಾಂಕ್ಷಗಳು:

    ರಾಮಕೃಷ್ಣ ದೊಡ್ಡಮನಿ,

    ಸುಜಾತಾ ದೊಡ್ಡಮನಿ

    ಡಾ. ಬಿ ತಿಪ್ಪೇಸ್ವಾಮಿ

    ದೇವಪ್ಪ ಲಮಾಣಿ

    ರಾಜು ದಾವಣಗೆರೆ

    ಗೋಳಪ್ಪ ಹಳ್ಳಿಗೇರಿ

    ಭರತ್ ನಾಯಕ್

    ಜಯಕ್ಕ ಕಳ್ಳಿ

    ಗುರುಪ್ಪ ಲಮಾಣಿ

    ದೀಪಕ್ ಲಮಾಣಿ,

    ರಾಮಣ್ಣ ಶಿವಪ್ಪ ಲಮಾಣಿ

    ಸುಶಿಲವ್ವ

    ಕೋಟೆಪ್ಪ ವರದಿ

    ======

    ಕೋಟ್:
    ದೇವಿ ಸನ್ನಿಧಿಯಲ್ಲಿ ಒಗ್ಗಟ್ಟಿನ ಸಭೆ ನಡೆಸಿದ್ದು ಗುಣಾತ್ಮಕ ಬೆಳವಣಿಗೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವು ಇರುವ ಕಾರಣ ಸಹಜವಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. 
    – ಎಚ್.ಕೆ. ಪಾಟೀಲ, ಶಾಸಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts