More

    ಗದಗ: ಲಕ್ಕುಂಡಿ ಉತ್ಸವ, ‘ಐದೇ ನಿಮಿಷದಲ್ಲಿ ಪ್ರಸ್ತುತ ಪಡಿಸಿ’. ಸಂಘಟಕರ ಪದೇ ಪದೆ ಮಾತಿಗೆ ಬೇಸತ್ತ ಸ್ಥಳೀಯ ಕಲಾವಿದರು.

    • ಡೊಳ್ಳಿನಪದ, ಸುಗ್ಗಿ ಕುಣಿತ, ವಚನ ಸಂಗೀತಕ್ಕೆ ಆಧ್ಯತೆ ನೀಡದ ಉತ್ಸವ?
    • ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ನಿಗದಿ ಬಗ್ಗೆ ಅಪಸ್ವರ
    • ಚಲನಚಿತ್ರ ಗೀತೆ ಹಾಡುವರಿಗೇ ನೀಡಿದಷ್ಟು ಆದ್ಯತೆ ಸ್ಥಳೀಯ ಕಲಾವಿದರಿಗಿಲ್ಲ..

    ಗದಗ

    ಕನ್ನಡ ಮಣ್ಣಿನ ಮೂಲ ಸಂಪ್ರದಾಯ ವ್ಯಕ್ತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ಕಲಾವಿದರ ಪ್ರತಿಭೆ ವ್ಯಕ್ತಪಡಿಸಲು ವೇದಿಕೆಯಾಗಬೇಗಿದ್ದ ಲಕ್ಕುಂಡಿ ಉತ್ಸವದ ವೇದಿಕೆಯಲ್ಲಿ ಕಲಾವಿದರಿಂದ ಅಪಸ್ವರ ಕೇಳಿಬಂದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮವಾಗಿ ಆಯೋಜನೆಗೊಂಡರೂ ಸಮಯ ಮೀಸಲಿಟ್ಟ ವಿಷಯಕ್ಕೆ ಕಲಾವಿದರು ಬೇಸತ್ತಿದ್ದಾರೆ. ಪ್ರತಿ ಕಲಾವಿದನಿಗೂ, ಸಾಂಸ್ಕೃತಿಕ ಕಲಾತಂಡಗಳಿಗೂ ಐದೇ ನಿಮಿಷದಲ್ಲಿ ವೇದಿಕೆ ಕಾರ್ಯಕ್ರಮ ಮುಗಿಸಿ ಎಂದು ಪದೇ ಪದೆ ಹೇಳುತ್ತಿದ್ದ ಸಂಘಟಕರ ನಡೆಯಿಂದ ದೊಡ್ಡಾಟ, ಡೊಳ್ಳಿನ ಪದ, ವಚನ ಸಂಗೀತ ಕಲಾವಿದರು ಬೇಸರ ವ್ಯಕ್ತಪಡಿಸಿದರು.

    ಸ್ಯಾಂಡಲ್ವುಡ್, ಬಾಲಿವುಡ್ ಚಲನಚಿತ್ರಗಳ ಹಿನ್ನಲೆ ಗಾಯಕರಿಗೆ ನೀಡಿದ ಸಮಯದ ಶೇ.1% ಸಮಯವನ್ನೂ ಗೀಗಿಪದ, ಡೊಳ್ಳಿನಪದ, ಸುಗ್ಗಿ ಕುಣಿತ, ವಚನ ಸಂಗೀತ, ಲಾವಣಿ ಪದ ಹೇಳಲು ಸಮಯ ಮೀಸಲಿಟ್ಟಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಉತ್ಸವದ ಆಮಂತ್ರಣ ಪತ್ರಿಕೆ ಗಮನಿಸಿದರೆ ಈ ಆರೋಪ ಸ್ಪಷ್ಟವಾಗುತ್ತದೆ.

    ಶನಿವಾರ ಡೊಳ್ಳಿನ ಪದ ಹೇಳಲು ವೇದಿಕೆಗೆ ಆಗಮಿಸಿದ ರೋಣ ತಾಲೂಕಿನ ಯಾವಗಲ್ ಗ್ರಾಮದ ಶಾಂಭವಿ ದೊಡ್ಡಾಟ ತಂಡಕ್ಕೆ ಈ ಮೊದಲೇ ಸೂಚಿಸಿದಂತೆ 10 ನಿಮಿಷ ನೀಡಲಾಗಿತ್ತು. ಆದರೆ, ವೇದಿಕೆಯಲ್ಲಿ ದೊಡ್ಡಾಟದ ಉಪಕರಣ ಸಿದ್ದಪಡಿಸಿಕೊಳ್ಳಲು ಕನಿಷ್ಠ 10 ರಿಂದ 15 ನಿಮಿಷವಾದರೂ ಬೇಕು ಹಾಗೂ ದೊಡ್ಡಾಟ ಆರಂಭಕ್ಕೂ ಮುನ್ನ ಗಜಾನನ ಸ್ತುತಿ ಹೇಳಲು 15 ನಿಮಿಷ ಅಗತ್ಯವಿದೆ. ಈ ನಡುವೆ ಸಂಘಟಕರು ಕಲಾವಿದರಿಗೆ ತಮ್ಮ ದೊಡ್ಡಾಟ ಬೇಗನೇ ಮುಗಿಸುವಂತೆ ಸೂಚಿಸುತ್ತಿದ್ದರು. ಈ ಸಂದರ್ಭದಲ್ಲಿ ಗಜಾನನ ಸ್ತುತಿ ಮುಗಿಯುತ್ತಿದ್ದಂತೆ ವೇದಿಕೆಗೆ ಆಗಮಿಸಿದ ಸಂಘಟಕರು ದೊಡ್ಡಾಟ ಮುಗಿಸುವಂತೆ ಸೂಚಿಸಿದರು. ಈ ನಡೆಯಿಂದ ಕಲಾವಿದರು ಬೇಸತ್ತು ವೇದಿಕೆಯಿಂದ ಕೆಳಗಿಳಿದರು. ಇಂತಹ ಬೆಳವಣಿಗೆ ಪ್ರತಿ ಸಾಂಸ್ಕೃತಿಕ ಕಾರ್ಯಕ್ರಮದ ಮಧ್ಯೆಯೂ ನಡೆಯುತ್ತಿತ್ತು. 10 ನಿಮಿಷದ ನಂತರ ಮೈಕ್ ಆಫ್ ಮಾಡಿ ಕಾರ್ಯಕ್ರಮ ನಿಲ್ಲಿಸಲು ಸೂಚಿಸಲಾಗುತ್ತಿತ್ತು. ಹೀಗಾಗಿ ಚಲನಚಿತ್ರ ಗೀತೆ ಹಾಡುವರಿಗೆ ಉಪಕರಣ ಸಿದ್ದಪಡಿಸಿಕೊಳ್ಳಲು ವೇದಿಕೆ ಮೇಲೆ 30 ನಿಮಿಷಗಳ ಕಾಲಾವಕಾಶ ನೀಡುತ್ತಾರೆ. ಸ್ಥಳೀಯರಿಗಾದರೆ 15 ನಿಮಿಷದಲ್ಲೇ ಮುಕ್ತಾಯಗೊಳಿಸಿ ಎಂದು ಪದೇ ಪದೆ ಹೇಳುತ್ತಾರೆ ಎಂದು ಕಲಾವಿದರು ತಮ್ಮ ಅಳಲು ತೋಡಿಕೊಂಡರು.

    ಆದ್ಯತೆ ಏಕಿಲ್ಲ:
    ಮಣ್ಣಿನ ಸೊಗಡಿನ ಡೊಳ್ಳಿನ ಪದ, ದೊಡ್ಡಾಟ, ಸುಗ್ಗಿ ಕುಣಿತ, ವಚನ ಸಂಗೀತ ಸೇರಿದಂತೆ ಹಲವು ಕಾರ್ಯಕ್ರಮಕ್ಕೆ ಆಧ್ಯತೆ ನೀಡಿಲ್ಲ. ಪ್ರತಿ ಸಾಂಸ್ಕೃತಿಕ ಕಾರ್ಯಕ್ರಕ್ಕೆ 10 ರಿಂದ 15 ನಿಮಿಷ ನಿಗದಿ ಪಡಿಸಿ ಸ್ಥಳೀಯ ಕಲೆ, ಕಲಾವಿದರನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆರೋಪ ಕೇಳಿ ಬಂತು.

    ವಿಚಾರಗೋಷ್ಠಿ ವಿಳಂಬ:
    ಶನಿವಾರ ಸಂಜೆ ಚಲನಚಿತ್ರ ಗೀತೆಗಳ ಹಿನ್ನೆಲೆ ಗಾಯಕಿ ಅನನ್ಯಭಟ್ ಅವರ ಕಾರ್ಯಕ್ರಮ ಇರುವ ಕಾರಣ ಶನಿವಾರ ಬೆಳಿಗ್ಗೆಯೇ ಸಂಗೀತ ಉಪಕರಣ ಜೋಡಿಸಿಕೊಳ್ಳಲು ವೇದಿಕೆ ಮೇಲೆ 30 ರಿಂದ 1 ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಕಾರಣದಿಂದ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ವಿಚಾರಗೋಷ್ಠಿಗಳು ಒಂದು ಗಂಟೆ ತಡವಾಗಿ ಆರಂಭಗೊಂಡವು. ಈ ಕಾರಣದಿಂದ ಎಲ್ಲ ವೇದಿಕೆ ಕಾರ್ಯಕ್ರಮಗಳು ವಿಳಂಬವಾದವು. ಅವರಿಗೆ ನೀಡುವ ಆಧ್ಯತೆ ನಮಗೇಕಿಲ್ಲ ಎಂಬುದೇ ಕಲಾವಿದರ ಆರೋಪ.

    ಕೋಟ್:
    ದೊಡ್ಡಾಟ, ಯಕ್ಷಗಾನಗಳು ಬೇರೆ ಬೇರೆಯಾದರೂ ಪೌರಾಣಿಕ ಕಥೇಗಳನ್ನು ಹೇಳುವ ವಿಧಾನ ಒಂದೆಯಾಗಿದೆ. ಇಂತಹ ಕಾರ್ಯಕ್ರಗಳಿಗೆ ಕನಿಷ್ಠ 45 ನಿಮಷವಾದರೂ ಜಿಲ್ಲಾಡಳಿತ ಮೀಸಲಿಡಬೇಕಿತ್ತು.

    • ಅಶೋಕ ಸುತಾರ್ – ಶಾಂಭವಿ ದೊಡ್ಡಾಟ ಮೇಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts