More

    ಗದಗದಲ್ಲಿ ಕರೊನಾ ಬಂದೋಬಸ್ತ್

    ಗದಗ: ನಗರದ ರಂಗನವಾಡಿ ಗಲ್ಲಿ ಪ್ರದೇಶದ ಸುತ್ತಮುತ್ತಲಿನ 500 ಮೀಟರ್ ಪ್ರದೇಶವನ್ನು ಜಿಲ್ಲಾಡಳಿತ ಕಂಟೇನ್​ವೆುಂಟ್ ಪ್ರದೇಶ ಎಂದು ಘೊಷಿಸಿ, ಬಿಗಿ ಪಹರೆ ನಿಯೋಜಿಸಿದ್ದು, ಗದಗದಲ್ಲಿಯೂ ಕರೊನಾ ಸೋಂಕು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.

    ಏಪ್ರಿಲ್ 4ರಂದು 80 ವರ್ಷದ ವೃದ್ಧೆಯೊಬ್ಬರು ಕರೊನಾ ಶಂಕೆಯ ಮೇಲೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೃದ್ಧೆಯ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಮಂಗಳವಾರ ವೃದ್ಧೆಯ ವೈದ್ಯಕೀಯ ವರದಿ ಜಿಲ್ಲಾಡಳಿತದ ಕೈಗೆ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ರಂಗನವಾಡಿ ಪ್ರದೇಶವನ್ನು ಕಂಟೇನ್​ವೆುಂಟ್ ಏರಿಯಾ ಎಂದು ಗುರುತಿಸಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

    ವೃದ್ಧೆಯ ಮನೆಯ ಸುತ್ತಮುತ್ತಲಿನ ಮನೆಗಳ ಜನರಿಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದ್ದು, ಅವರನ್ನು ‘ಕ್ವಾರಂಟೈನ್’ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

    ರಂಗನವಾಡಿ ಗಲ್ಲಿ ಪ್ರದೇಶವನ್ನು ಕಂಟೇನ್​ವೆುಂಟ್ ಪ್ರದೇಶ ಎಂದು ಗುರುತಿಸಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗದಗದಲ್ಲಿ ಕರೊನಾ ಪಾಸಿಟಿವ್ ದೃಢ ಎಂಬ ಸಂದೇಶಗಳೂ ಹರಿದಾಡುತ್ತಿವೆ.

    ರಂಗನವಾಡಿ ಗಲ್ಲಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರಿಗೆ ಮನೆ ಮನೆ ಸರ್ವೆ ನಡೆಸಲು ಆದೇಶಸಿದ್ದಾರೆ. ಪೊಲೀಸ್ ಅಧಿಕಾರಿಗಳ ಬಂದೋಬಸ್ತ್​ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

    ಅಸಹಾಯಕರಿಗೆ ಆಹಾರ ವಿತರಣೆ: ದೇಶಾದ್ಯಂತ ಕರೊನಾ ಮಾರಿ ಹರಡದಂತೆ ಕೇಂದ್ರ ಸರ್ಕಾರ ಲಾಕ್​ಡೌನ್ ಘೊಷಿಸಿರುವ ಹಿನ್ನೆಲೆಯಲ್ಲಿ ನಗರದ ತೋಂಟದಾರ್ಯ ಮಠದ ದಾಸೋಹ ಸಮಿತಿಯು ಅಸಹಾಯಕ ಪರಿಸ್ಥಿತಿಯಲ್ಲಿರುವವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವ ಕಾರ್ಯವನ್ನು ಆರಂಭಿಸಿದೆ.

    ಕಳೆದ 7 ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ನಿರ್ಗತಿಕರಿಗೆ, ಕೂಲಿಕಾರ್ವಿುಕರಿಗೆ ಹಾಗೂ ಲಾಕ್​ಡೌನ್ ಯಶಸ್ಸಿಗೆ ನಿರಂತರ ಶ್ರಮ ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಆಹಾರವನ್ನು ಪೂರೈಸಲಾಗುತ್ತಿದೆೆ.

    ಲಾಕ್​ಡೌನ್ ಹಿನ್ನೆಲೆ ಯಲ್ಲಿ ಶ್ರೀಮಠದಲ್ಲಿ ದಾಸೋಹ ಸ್ಥಗಿತಗೊಳಿಸಲಾಗಿದ್ದು, ಆದರೂ ಸಹ ಪುಲಾವ್, ಚಿತ್ರಾನ್ನ, ಉಪ್ಪಿಟ್ಟು ಹೀಗೆ ವಿವಿಧ ಬಗೆಯ ಆಹಾರ ತಯಾರಿಸಿ ಪೊಟ್ಟಣಗಳಲ್ಲಿ ಹಾಕಿ ಹಸಿದವರಿಗೆ ನೀಡಲಾಗುತ್ತಿದೆ.

    ಈ ಕಾರ್ಯದಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಶ್ರೀಮಠದ ಭಕ್ತರಾದ ಶೇಖಣ್ಣ ಕಳಸಾಪೂರಶೆಟ್ರ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಪ್ರಕಾಶ ಕಬಾಡಿ, ವೀರಣ್ಣ ಜ್ಯೋತಿ, ತುಳಸಿ ರಾಮ ಅವರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಚಪ್ಪರಬಂದ್ ಸಮಾಜ: ಬೆಟಗೇರಿಯ ಸೆಟ್ಲಮೆಂಟ್ ಪ್ರದೇಶದಲ್ಲಿ ಚಪ್ಪರಬಂದ್ ಹಾಗೂ ಇತರೆ ಸಮಾಜದ ಬಡವರಿಗೆ ಕರ್ನಾಟಕ ರಾಜ್ಯ ಚಪ್ಪರಬಂದ್ ಸಮಾಜ ಸಂಘದ ಪದಾಧಿಕಾರಿಗಳು, ಸದಸ್ಯರು ಅಗತ್ಯ ಆಹಾರ ಸಾಮಗ್ರಿ ವಿತರಣೆ ಮಾಡಿದರು.

    ರವೆ, ಎಣ್ಣೆ, ಬೇಳೆ ಸಹಿತ ಅಗತ್ಯ ದಿನಬಳಕೆ ವಸ್ತುಗಳ 150 ಪ್ಯಾಕೆಟ್​ಗಳನ್ನು ಬಡವರ ಮನೆ ಮನೆಗೆ ತೆರಳಿ ವಿತರಣೆ ಮಾಡಲಾಯಿತು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜನಜಾಗೃತಿ ಮೂಡಿಸಲಾಯಿತು. ಕರೊನಾ ಎದುರಿಸಲು ಲಾಕ್​ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಮಾಜದ ಜನ ಉದ್ಯೋಗ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಚಪ್ಪರಬಂದ್ ಸೇರಿ ಇತರೆ ಸಮಾಜದ ಬಡವರಿಗೂ ನೆರವಾಗುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಚಪ್ಪರಬಂದ್ ಸಮಾಜದ ಮುಖಂಡ ರಾದ ಗೌಸುಸಾಬ್ ರಾಜನಾಳ, ಇಮಾಮ್ಾಬ್ ಹುಲ್ಲೂರು, ಹುಸೇನಸಾಬ್ ಚಪ್ಪರಬಂದ್, ರಾಜೇಸಾಬ್ ಚಪ್ಪರಬಂದ್ ತಿಳಿಸಿದ್ದಾರೆ.

    ಪಾಲನೆ ಆಗದ ನಿಯಮ

    ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರೂ ಜನರು ಕೇಳುತ್ತಿಲ್ಲ. ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ನಗರದ ಟ್ಯಾಗೋರ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿ ಮುಂದೆ ಆಹಾರ ಧಾನ್ಯಕ್ಕಾಗಿ ಜನರು ಸೇರಿದ್ದರು. ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಕಂಡುಬಂದಿತು. ಲಾಕ್​ಡೌನ್ ಆಗಿದ್ದರಿಂದ ನಗರದ ಕೆಲ ಸಲೂನ್ ಅಂಗಡಿಗಳು ಬಂದ್ ಆಗಿವೆ. ಆದರೆ, ಕೆಲವರು ಮನೆಮನೆಗೆ ತೆರಳಿ ಕಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ, ನಗರದ ಹೊರವಲಯದ ಸಣ್ಣ ಸಣ್ಣ ಕಟಿಂಗ್ ಶಾಪ್​ಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಕಟಿಂಗ್ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts