More

    ಗಣಿತ ಪರೀಕ್ಷೆಗೆ 9983 ವಿದ್ಯಾರ್ಥಿಗಳು ಹಾಜರ್

    ಶಿರಸಿ: ಎಸ್​ಎಸ್​ಎಲ್​ಸಿ ಗಣಿತ ಪರೀಕ್ಷೆಯು ಶಿರಸಿ ಶೈಕ್ಷಣಿಕ ಜಿಲ್ಲೆಯ 35 ಪರೀಕ್ಷೆ ಕೇಂದ್ರಗಳಲ್ಲಿ ಶನಿವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟು 9,983 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

    ಪರೀಕ್ಷೆಗೆ ನೋಂದಣಿಯಾದ ಒಟ್ಟು 10,586 ವಿದ್ಯಾರ್ಥಿಗಳಲ್ಲಿ 603 ವಿದ್ಯಾರ್ಥಿಗಳು ಗೈರಾಗಿದ್ದರು. ಶಿರಸಿ ತಾಲೂಕಿನಲ್ಲಿ ಒಟ್ಟು 3,083 ವಿದ್ಯಾರ್ಥಿಗಳಲ್ಲಿ 179 ಗೈರಾಗಿದ್ದು, 2,904 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಿದ್ದಾಪುರ 13,07ರಲ್ಲಿ 109 ಗೈರು, 1,198 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಲ್ಲಾಪುರ ತಾಲೂಕಿನ ಒಟ್ಟು 1,131 ವಿದ್ಯಾರ್ಥಿಗಳಲ್ಲಿ 102 ಗೈರು, 1,029 ವಿದ್ಯಾರ್ಥಿಗಳು ಹಾಜರಾಗಿದ್ದರು. ಮುಂಡಗೋಡ ತಾಲೂಕಿನಲ್ಲಿ 1,426ವಿದ್ಯಾರ್ಥಿಗಳಲ್ಲಿ 77 ಗೈರಾಗಿದ್ದು, 1,349 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಹಳಿಯಾಳ ತಾಲೂಕಿನ ಒಟ್ಟು 2,839 ವಿದ್ಯಾರ್ಥಿಗಳಲ್ಲಿ 110 ಗೈರು, 2,729 ವಿದ್ಯಾರ್ಥಿಗಳು ಹಾಜರಾಗಿದ್ದರು. ಜೊಯಿಡಾ ತಾಲೂಕಿನ ಒಟ್ಟು 800 ವಿದ್ಯಾರ್ಥಿಗಳಲ್ಲಿ 26 ಗೈರಾಗಿದ್ದು, 774 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

    ಕಂಟೇನ್ಮೆಂಟ್ ಪ್ರದೇಶದಿಂದ ಬಂದಿದ್ದ 20 ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರು. ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಐವರು, ವಲಸೆ ಬಂದ 367 ಮಕ್ಕಳು ಪರೀಕ್ಷೆ ಎದುರಿಸಿದ್ದಾರೆ.

    ಪರೀಕ್ಷೆ ಬರೆದ 9,228 ವಿದ್ಯಾರ್ಥಿಗಳು

    ಕಾರವಾರ: ಎಸ್​ಎಸ್​ಎಲ್​ಸಿ ಗಣಿತ ಪರೀಕ್ಷೆ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಶನಿವಾರ ಸುಲಲಿತವಾಗಿ ನಡೆದಿದೆ. ಒಟ್ಟು 9,584 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಅದರಲ್ಲಿ 4,614 ಗಂಡು ಮಕ್ಕಳು, 4,614 ಹೆಣ್ಣು ಮಕ್ಕಳು ಸೇರಿ 9,228 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಒಟ್ಟು 356 ವಿದ್ಯಾರ್ಥಿಗಳು ಗೈರಾಗಿದ್ದರು. 59 ವಿದ್ಯಾರ್ಥಿಗಳು ಕಂಟೇನ್ಮೆಂಟ್ ಜೋನ್​ಗಳಿಂದ ಬಂದು ಪರೀಕ್ಷೆ ಬರೆದರು. 29 ಅಂಗವಿಕಲ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

    ಗೋವಾದಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ

    ಪಣಜಿ(ವಾಸ್ಕೊ): ಗೋವಾದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಾಸ್ಕೊದಲ್ಲಿ ಎರಡು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

    ಒಟ್ಟು 54 ವಿದ್ಯಾರ್ಥಿಗಳು ಗೋವಾದಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಪರಸ್ಪರ ಅಂತರ, ಮಾಸ್ಕ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಹೀಗೆ ವಿವಿಧ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರೀಕ್ಷೆ ನಡೆಸಲಾಗುತ್ತಿದೆ.

    ವಾಸ್ಕೊ ಝುರಿಯಲ್ಲಿರುವ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಲ್ಲಿ 48 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಮಂಗೊರ್​ಹಿಲ್​ನ ಕಂಟೇನ್ಮೆಂಟ್ ಜೋನ್​ನಲ್ಲಿರುವ 6 ವಿದ್ಯಾರ್ಥಿಗಳಿಗೆ ಸಂತ ಥೆರೇಸಾ ಸ್ಕೂಲ್​ನಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಕೊಠಡಿಯಲ್ಲಿ 9 ಜನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.

    ಗೋವಾದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರತಿವರ್ಷ ಕಾರವಾರದಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಗೋವಾದ ವಿದ್ಯಾರ್ಥಿಗಳಿಗೆ ಗೋವಾದಲ್ಲಿ ಪರೀಕ್ಷೆ ನಡೆಸಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಗೋವಾ ಪರೀಕ್ಷಾ ಮಂಡಳಿಯು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟಿದೆ. ಶನಿವಾರ ಗಣಿತ ಪರೀಕ್ಷೆ ನಡೆಸಲಾಯಿತು.

    ಎಲ್ಲ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನಕ್ಕಾಗಿ ಉತ್ತರ ಪತ್ರಿಕೆಯನ್ನು ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿಗೆ ಹಸ್ತಾಂತರ ಮಾಡಲಾಗುತ್ತದೆ. ಸದ್ಯ ಕಾರವಾರದ ಇಬ್ಬರು ಅಧಿಕಾರಿಗಳು ಗೋವಾ ಪರೀಕ್ಷೆ ಕೇಂದ್ರದಲ್ಲಿ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts