More

    ಗಣಪತಿ ಪೆಂಡಾಲ್ ತೆರವಿಗೆ ವಿರೋಧ

    ತರೀಕೆರೆ: ಜಂಬದಹಳ್ಳ ಜಲಾಶಯ ಹಿನ್ನೀರು ಪ್ರದೇಶದಲ್ಲಿರುವ ಗೌಳಿಗರ ಕ್ಯಾಂಪ್​ನಲ್ಲಿ ಗ್ರಾಮಸ್ಥರು ಗಣಪತಿ ಪ್ರತಿಷ್ಠಾಪಿಸಲು ನಿರ್ವಿುಸಿದ್ದ ಪೆಂಡಾಲ್ ಅನ್ನು ಬುಧವಾರ ತೆರವುಗೊಳಿಸಲು ಮುಂದಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

    ಕ್ಯಾಂಪ್​ನಲ್ಲಿ ಗಣಪತಿ ಪ್ರತಿಷ್ಠಾಪಿಸಲು ತಾತ್ಕಾಲಿಕವಾಗಿ ನಿರ್ವಿುಸಿದ್ದ ಪೆಂಡಾಲ್ ಅನ್ನು ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಸಿಬ್ಬಂದಿ ತೆರವುಗೊಳಿಸಲು ಮುಂದಾಗಿದ್ದರು. ಆದರೆ ಗ್ರಾಮಸ್ಥರು ವಾಗ್ವಾದಕ್ಕಿಳಿದು ವಿರೋಧಿಸಿದ ಹಿನ್ನೆಲೆಯಲ್ಲಿ ತೆರವುಗೊಳಿಸುವ ಕಾರ್ಯದಿಂದ ಹಿಂದೆ ಸರಿದರು.

    ಪೆಂಡಾಲ್ ಜಾಗ ಅರಣ್ಯ ಪ್ರದೇಶ ವ್ಯಾಪ್ತಿಗೊಳಪಡುತ್ತದೆ ಎಂಬ ಉದ್ದೇಶದಿಂದ ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರತಿರೋಧ ವ್ಯಕ್ತವಾಗಿದ್ದರಿಂದ ಮೇಲ್ಛಾವಣಿಯನ್ನಷ್ಟೇ ತೆಗೆದು ಕಾರ್ಯಾಚರಣೆ ಮೊಟಕುಗೊಳಿಸಿದರು. ಹೈನುಗಾರಿಕೆಯನ್ನೇ ಮೂಲ ಕಸಬು ಮಾಡಿಕೊಂಡಿರುವ ಗೌಳಿಗ ಸಮುದಾಯ ಪೂರ್ವಜರ ಕಾಲದಿಂದಲೂ ಅರಣ್ಯ ಪ್ರದೇಶದಲ್ಲಿ ನಿರ್ವಿುಸಿಕೊಂಡಿರುವ ಸೂರುಗಳಲ್ಲಿ ಬದುಕು ಕಟ್ಟಿಕೊಂಡಿದೆ. ಹತ್ತಾರು ಕುಟುಂಬಗಳು ನೆಲೆಸಿರುವ ಊರಲ್ಲಿ ತಾತ್ಕಾಲಿಕ ಪೆಂಡಾಲ್ ನಿರ್ವಿುಸಿ ಮೊದಲ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜಿಸಲಾಗಿದೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಕಿರಿಕಿರಿ ಮಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts