More

    ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ

    ಕಲಬುರಗಿ: ತೆಲಂಗಾಣದಲ್ಲಿ ಟೆಕ್ಕಿಗೆ ಕಂಡು ಬಂದಿರುವ ಮಹಾಮಾರಿ ಕರೊನಾ ವೈರಸ್ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಭಯ ಮೂಡಿಸಿದೆ. ಈ ಮಹಾಮಾರಿ ಸೋಂಕು ಗಡಿ ಜಿಲ್ಲೆಗಳಿಗೆ ಬರದಂತೆ ಎಲ್ಲ ಅಗತ್ಯ ಕ್ರಮಗಳನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ.
    ಕರೊನಾ ಸೋಂಕು ಕಲ್ಯಾಣ ಕರ್ನಾಟಕದಲ್ಲಿ ಕಂಡು ಬಂದಿಲ್ಲವಾದರೂ ತೆಲಂಗಾಣದ ಟೆಕ್ಕಿಗೆ ತಗುಲಿದ್ದರಿಂದ ಗಡಿಗೆ ಹೊಂದಿಕೊಂಡಿರುವ ನಮ್ಮಲ್ಲೂ ಭಯ ಆವರಿಸಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿದ್ದು, ಪಕ್ಕದ ರಾಜ್ಯಗಳಲ್ಲಿನ ಬೆಳವಣಿಗೆ ಪರಿಣಾಮ ಮೊದಲು ನಮ್ಮ ಭಾಗದವರ ಮೇಲೆ ಆಗುತ್ತದೆ.
    ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಐಸೋಲೇಟೆಡ್ ವಿಶೇಷ ವಾಡರ್್ಗಳನ್ನು ಸಿದ್ಧಪಡಿಸಲಾಗಿದೆ. ಕೆಲವೆಡೆ ಕರೊನಾ ವೈರಸ್ ತಡೆ ವಾರ್ಡ ಎಂದು ನಾಮಫಲಕ ಹಾಕಲಾಗಿದೆ. ತೆಲಂಗಾಣದ ಟೆಕ್ಕಿಗೆ ಕರೊನಾ ವೈರಸ್ ಕಂಡು ಬಂದ ಪರಿಣಾಮವಾಗಿ ಆ ರಾಜ್ಯದ ಜತೆಗಿರುವ ಸಂಬಂಧ ಹೇಗೆ ಮುಂದುವರಿಸಬೇಕು ಎಂಬ ಹಿನ್ನೆಲೆಯಲ್ಲಿ ಚರ್ಚೆ ಸಹ ನಡೆದಿದೆ.
    ಕಲಬುರಗಿ ಜಿಲ್ಲೆಯಿಂದ ಹೈದರಾಬಾದ್ಗೆ ಪ್ರತಿದಿನ 96 ಬಸ್ ಸಂಚರಿಸುತ್ತವೆ. ರೈಲುಗಳ ಮೂಲಕವೂ ಸಹ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಜನತೆ ತೆಲಂಗಾಣಕ್ಕೆ ಪ್ರತಿನಿತ್ಯ ಹೋಗುತ್ತಾರೆ. ಕರೊನಾ ಭೀತಿ ಪ್ರಯಾಣಿಕರನ್ನು ನಲುಗುವಂತೆ ಮಾಡಿದ್ದಂತೂ ಖರೆ.
    ಸಾರಿಗೆ ವ್ಯವಸ್ಥೆಯನ್ನು ಸದ್ಯದ ಮಟ್ಟಿಗೆ ಮುಂದುವರಿಸಬೇಕೆ ಇಲ್ಲವೇ ಎಂಬ ಬಗ್ಗೆ ಈಶಾನ್ಯ ಸಾರಿಗೆ ಸಂಸ್ಥೆ ಇಂದು ಸಂಜೆ ಇಲ್ಲವೇ ಬುಧವಾರ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

    ಕಲಬುರಗಿ ಜಿಲ್ಲಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಐದು ಬೆಡ್ ಮತ್ತು ತಾಲೂಕು ಕೇಂದ್ರಗಳಲ್ಲಿ ತಲಾ ಎರಡು ಬೆಡ್ಗಳ ವಿಶೇಷ ವಾರ್ಡ ವ್ಯವಸ್ಥೆ ಮಾಡಲಾಗಿದೆ. ನಮ್ಮಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ. ಹೀಗಾಗಿ ಸದ್ಯಕ್ಕೆ ಜನರಲ್ಲಿ ಭಯ ಬೇಡ.
    | ಡಾ.ಎಂ.ಎ. ಜಬ್ಬಾರ್
    ಜಿಲ್ಲಾ ಆರೋಗ್ಯಾಧಿಕಾರಿ ಕಲಬುರಗಿ

    ಕೈ ಮಿಲಾಯಿಸಲು ಬೈ ನಮಸ್ಕಾರಕ್ಕೆ ಜೈ
    ಸೋಂಕಿತ ವ್ಯಕ್ತಿ ಜತೆಗೆ ಹಸ್ತಲಾಘವ ಮಾಡಿದರೂ ವೈರಸ್ ದಾಳಿ ಮಾಡಲಿದೆ. ಹೀಗಾಗಿ ಯಾರಿಗಾದರೂ ಕೈ ಮಿಲಾಯಿಸಿ ವಿಷ್ ಮಾಡಲು ಸಹ ಭಯಪಡುವಂತಾಗಿದೆ. ಅನೇಕರು ಕೈ ಮಿಲಾಯಿಸುವುದಕ್ಕೆ ಬೈ ಹೇಳಿ, ಭಾರತೀಯ ಪರಂಪರೆಯಂತೆ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತಿದ್ದಾರೆ. ಶ್ವಾಸಕೋಶ ಹಾಗೂ ಉಸಿರಾಟಕ್ಕೆ ಕರೊನಾ ವೈರಸ್ ತೊಂದರೆ ಮಾಡುತ್ತದೆ. ಈ ವೈರಸ್ ಚೀನಾದಲ್ಲಿ ಮೊದಲಿಗೆ ಪತ್ತೆಯಾಗಿದ್ದು, ಭಾರತ ಸೇರಿ ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವಿಸ್ತರಿಸಿ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ. ರೋಗಕ್ಕೆ ಪೀಡಿತರಾದವರು, ಇವರಿಗೆ ಚಿಕಿತ್ಸೆ ನೀಡುವ ಸಿಬ್ಬಂದಿ ಕಡ್ಡಾಯ ಎನ್-95 ಮಾಸ್ಕ್ ಧರಿಸಬೇಕಾಗುತ್ತದೆ. ಸಾಮಾನ್ಯ ಜನರು ಮುಂಜಾಗ್ರತಾ ಹೆಜ್ಜೆಯಾಗಿ ಸಾಧಾರಣ ಡಿಸ್ಪೋಸಲ್ ಮಾಸ್ಕ್ ಧರಿಸಬೇಕು.

    ಹೀಗಿದೆ ರೋಗ ಲಕ್ಷಣ
    ಜ್ವರ, ತಲೆನೋವು, ನೆಗಡಿ, ಕೆಮ್ಮು, ಮೂಗಿನಿಂದ ನೀರು ಸೋರುವಿಕೆ, ಉಸಿರಾಟ ತೊಂದರೆ, ಭೇದಿ ಮುಂತಾದವು ಕರೊನಾ ರೋಗದ ಲಕ್ಷಣಗಳು. ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುತ್ತದೆ. ಸೋಂಕಿತ ವ್ಯಕ್ತಿ ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿ ಜತೆ ನಿಕಟ ಸಂಪರ್ಕದಲ್ಲಿದ್ದರೆ, ಹಸ್ತಲಾಘವ ಮತ್ತು ಸ್ಪರ್ಶ, ಸೋಂಕಿತರು ಬಳಸಿದ ವಸ್ತುಗಳನ್ನು ಬಳಸಿದಾಗ, ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿ ಮುಟ್ಟುವುದರ ಮೂಲಕ ರೋಗವು ಮನುಷ್ಯರಿಂದ ಮನುಷ್ಯರಿಗೆ ಹಾಗೂ ಪ್ರಾಣಿಗಳಿಂದಲೂ ಮನುಷ್ಯರಿಗೆ ಹರಡುತ್ತದೆ. ರೋಗದ ಲಕ್ಷಣ ಕಂಡರೆ ತಕ್ಷಣ ವೈದ್ಯರನ್ನು ಸಂಪಕರ್ಿಸಬೇಕು. ಲಭ್ಯ ಔಷಧೋಪಚಾರ ಮೂಲಕ ಸೂಕ್ತ ಚಿಕಿತ್ಸೆ ನೀಡಿ ರೋಗ ನಿಯಂತ್ರಣಕ್ಕೆ ತರಬಹುದು. ಆದರೆ ಇದಕ್ಕಾಗಿಯೇ ವಿಶೇಷ ಔಷಧ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts