More

    ಖಿಳೇಗಾಂವ ನೀರಾವರಿ ಯೋಜನೆ ಬಹುತೇಕ ಪೂರ್ಣ

    ಸಂಬರಗಿ: ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಮಲಾಬಾದ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಕಸ ವಿಲೇವಾರಿ ಘಟಕ ಉದ್ಘಾಟಿಸಿ, ವಿದ್ಯುತ್ ಕಾರ್ಯ ಮತ್ತು ಕಾಲುವೆ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ನೀರಾವರಿ ಸೌಲಭ್ಯವಿರದ ಗ್ರಾಮಗಳಲ್ಲಿ ಕೆರೆ ತುಂಬುವ ಕಾಮಗಾರಿಗೂ ಮುಖ್ಯಂತ್ರಿಗಳು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು. ಜಿಲ್ಲಾ ಪಂಚಾಯಿತಿ ಉಪವಿಭಾಗದ ಅಭಿಯಂತ ವೀರಣ್ಣ ವಾಲಿ ಮಾತನಾಡಿ, ಇಲ್ಲಿನ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುವುದು ಎಂದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಬೀರಪ್ಪ ಉಗಾರೆ ಅಧ್ಯಕ್ಷತೆ ವಹಿಸಿದ್ದರು. ಹಣಮಾಪುರದ ಸಿದ್ಧಸಿರಿ ಆಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ನಿಂಗಪ್ಪ ಖೋಕಲೆ, ಜಿಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಪಿಡಿಒ ವಿದ್ಯಾ ಸೂರ್ಯವಂಶಿ, ಜಿಪಂ ಮಾಜಿ ಸದಸ್ಯ ದಾದಾ ಶಿಂಧೆ, ಶಿರೂರ ಗ್ರಾಪಂ ಅಧ್ಯಕ್ಷ ಬಾಳು ಹಜಾರೆ, ಕೃಷಿ ಅಧಿಕಾರಿ ರವಿ ಬಂಗಾರಿ, ಧುರೀಣರಾದ ಶಿವಾನಂದ ಗೋಲಭಾವಿ, ಚನ್ನಪ್ಪ ಚೌಗಲಾ, ಸಿದ್ಧಾರೂಢ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts