More

    ಖಾಸಗಿ ವೈದ್ಯರು ತಪಾಸಣೆ ನಡೆಸುವಂತಿಲ್ಲ

    ಭಟ್ಕಳ: ಪಟ್ಟಣದಲ್ಲಿ ತಾಲೂಕಾಡಳಿದ ಪರವಾನಗಿ ಇಲ್ಲದೆ ಕೆಲವು ಖಾಸಗಿ ವೈದ್ಯರು ಬಂದು ತಪಾಸಣೆ ನಡೆಸಿ ಔಷಧ ನೀಡುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಮೃತಪಟ್ಟ ಕೆಲವು ವ್ಯಕ್ತಿಗಳನ್ನು ಆಡಳಿತದ ಗಮನಕ್ಕೆ ತಾರದೆ ಹೂಳಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ ಎಂದು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರಾಯ್ ಕೇಳಿದರು.

    ಪಟ್ಟಣದಲ್ಲಿ ಧಾರ್ವಿುಕ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ನಮ್ಮ ಗಮನಕ್ಕೆ ತರಬೇಕು. ಒಂದು ವೇಳೆ ಅಂಥ ಘಟನೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಭೆಯಲ್ಲಿದ್ದ ಮುಖಂಡರು ಪಟ್ಟಣದಲ್ಲಿ ಅಂತಹ ಘಟನೆಗಳು ನಡೆಯುತ್ತಿಲ್ಲ. ಮೃತ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಲಾಗುತ್ತಿದೆ ಎಂದರು.

    ಭಟ್ಕಳ ಕಂಟೈನ್ಮೆಂಟ್ ವಲಯ ಆಗಿದ್ದು, ಹೊರಗಿನಿಂದ ಭಟ್ಕಳಕ್ಕೆ ಅಥವಾ ಭಟ್ಕಳದಿಂದ ಹೊರಗೆ ಹೋಗಲು ಸದ್ಯದ ಮಟ್ಟಿಗೆ ಅವಕಾಶವಿಲ್ಲ. ಆದರೆ, ಈಗಾಗಲೆ 2-3 ಬಸ್​ಗಳಲ್ಲಿ ಜನರು ಪಟ್ಟಣಕ್ಕೆ ಬಂದಿರುವ ಕುರಿತು ಮಾಹಿತಿ ಲಭಿಸಿದೆ. ಸದ್ಯದ ಮಟ್ಟಿಗೆ ಭಟ್ಕಳಕ್ಕೆ ಬರುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಐಜಿಪಿ ಹೇಳಿದರು.

    ಎಸ್​ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಪಟ್ಟಣದಲ್ಲಿ ಹೆಲ್ತ್ ಸರ್ವೆ ಆರಂಭಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು. ಇಲ್ಲದಿದ್ದರೆ ಬಲವಂತವಾಗಿ ಈ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನಿಮ್ಮ ಮನೆಯ ಬಳಿ ಹೊರಗಿನಿಂದ ಬಂದರೆ ಅಥವಾ ಇಲ್ಲಿನ ವ್ಯಕ್ತಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಗೆ ಹೋಗಿ ಬಂದರೆ ದೂರು ನೀಡಬೇಕು. ಇದು ಸರ್ಕಾರದ ವಿರುದ್ಧ ಹೋಗುವ, ಲಾಕ್​ಡೌನ್ ಉಲ್ಲಂಘಿಸುವ ಸಮಯವಲ್ಲ ಎಂದರು.

    ಎಸಿ ಎಸ್. ಭರತ, ಡಿವೈಎಸ್​ಪಿ ಗೌತಮ ಕೆ.ಸಿ, ಪಿಎಸ್​ಐ ಶಾಹಿಲ್ ಬಾಗ್ಲಾ, ಶರತ ಕುಮಾರ, ಡಾ. ಸವಿತಾ ಕಾಮತ, ಇನಾಯಿತುಲ್ಲಾ ಶಾಬಂದ್ರಿ, ಶಾಂತರಾಮ ಭಟ್ಕಳ, ಶಿವಾನಿ ಶಾಂತಾರಾಮ, ಶ್ರೀಧರ ನಾಯ್ಕ, ಎಂ.ಆರ್. ಮಾನ್ವಿ, ಇಮ್ರಾನ್ ಲಂಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts