More

    ಖಾಸಗಿ ಆಸ್ಪತ್ರೆ ಸರ್ಜರಿ ವಾರ್ಡ್​ , ಒಪಿಡಿ ಸೀಲ್ಡೌನ್

    ಕಲಬುರಗಿ: ಕರೊನಾ ಸೋಂಕಿತನೊಬ್ಬ ಚಿಕಿತ್ಸೆಗೆ ಸೇರಿದ್ದ ಇಲ್ಲಿಯ ಪ್ರತೀಷ್ಠಿತ ಬಸವೇಶ್ವರ ಆಸ್ಪತ್ರೆಯ ಕೆಲ ವಿಭಾಗಗಳನ್ನು ಸೀಲಡೌನ್ ಮಾಡಲಾಗಿದೆ. ಈ ಕುರಿತಂತೆ ಬೋರ್ಡ ಸಹ ಹಾಕಲಾಗಿದೆ. ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ವ್ಯಕ್ತಿಗೆ ಕರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ದುರ್ದೈವವೆಂದರೆ ಈತ ಜಿಮ್ಸ್ ಆಸ್ಪತ್ರೆಯ ವೈದ್ಯರ ಕಣ್ತಪ್ಪಿಸಿ ಮನೆಗೆ ಹೋಗಿದ್ದ. ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಮರಳಿ ಇಲ್ಲಿಯ ಬಸವೇಶ್ವರ ಆಸ್ಪತ್ರೆಗೆ ಸೇರ್ಪಡೆಯಾಗಿದ್ದ.
    ಈತನನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿ ದಿನವನ್ನು ನಿರ್ಧರಿಸಿದರು. ಈತನ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಜಿಮ್ಸ್ ನವರು ಈತನಿಗೆ ಕರೊನಾ ಸೋಂಕು ಇದೆ ಎಂದು ಹೇಳಿದ್ದರಿಂದ ಈತನನ್ನು ಇಲ್ಲಿಯ ಇಎಸ್ಐ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ ಸೇರಿಸಲಾಗಿತ್ತು.
    ಆಧರೆ ಮುಂಜಾಗೃತಾ ಕ್ರಮವಾಗಿ ಬಸವೇಶ್ವರ ಆಸ್ಪತ್ರೆಯ ಸರ್ಜರಿ ವಾರ್ಡ್​ , ಸರ್ಜರಿ ಒಪಿಡಿ ಹಾಗೂ ಅಲ್ಟ್ರಾ ಸೌಂಡ್, ರೇಡಿಯಾಲಜಿ ವಿಭಾಗದ ಕೋಣೆಗಳನ್ನು ಸ್ಯಾನಿಟೈಜರ್ನಿಂದ ತೊಳೆದು ಈಗ ಸೀಲ್ಡೌನ್ ಮಾಡಲಾಗಿದೆ. ಅಲ್ಲದೆ ಆತನಿಗೆ ಚಿಕಿತ್ಸೆ ನೀಡಿದ ಎಲ್ಲ ವೈದ್ಯರನ್ನು ಹಾಗೂ ಸಿಬ್ಭಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಉಳಿದ ವಾಡರ್್ಗಳಲ್ಲಿ ಮಾಮೂಲಿನಂತೆ ವೈದ್ಯಕೀಯ ಸೇವೆಗಳು
    ಲಭ್ಯವಿವೆ.
    ಬಸವೇಶ್ವರ ಆಸ್ಪತ್ರೆಯಲ್ಲಿ ಈತನಿಗೆ ಅಲ್ಟ್ರಾಸೌಂಡ್ ಸಹ ಮಾಡಲಾಗಿತ್ತು. ಲೀವರ್ ಮತ್ತು ಕಿಡ್ನಿ ಮೇಲೆ ಬಾವು ಬಂದಿರುವುದರ ಜತೆಗೆ ಕರುಳಿನ ಒಂದು ಭಾಗದಲ್ಲಿ ಕೀವು ಸಹ ಆಗಿರುವುದು ಕಂಡು ಬಂದಿತ್ತು. ಹೀಗಾಗಿ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡುವುದು ಅಗತ್ಯವಿದ್ದದರಿಂದ ಆತನನ್ನು ಸರ್ಜರಿ ವಾಡರ್್ನಲ್ಲಿ ದಾಖಲಿಸಿಕೊಳ್ಳಲಾಗಿತ್ತು.
    ಸರ್ಜರಿ ವಿಭಾಗದ 7 ವೈದ್ಯರು, ಜನರಲ್ ಮೆಡಿಸಿನ್ ವಿಭಾಗದ ಮೂವರು ಮತ್ತು ರೇಡಿಯಾಲಜಿ ವಿಭಾಗ ಐವರು ವೈದ್ಯರು, ಪಿಜಿಗಳು, ಟೆಕ್ನಿಷಿಯನ್ಗಳು, ವಾಡರ್್ಬಾಯ್, ನಸಿಂಗ್ ಸಿಬ್ಭಂದಿ ಸೇರಿ ಸುಮಾರು 40 ಜನರನ್ನು ಈಗ ಕ್ವಾರಂಟೈನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts