More

    ಖಾತೆಗೆ ಜಮೆಯಾಗದ ಸಹಾಯಧನ

    ಮುಂಡರಗಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಕಾರ್ವಿುಕರಿಗೆ ಘೊಷಣೆ ಮಾಡಿದ ಸಹಾಯಧನ ವಿತರಣೆ ಕುರಿತು ಶನಿವಾರ ಕಾರ್ವಿುಕ ನಿರೀಕ್ಷಕಿ ಎಸ್.ಎಂ. ಹಿರಿಯಾಳ ಹಾಗೂ ಕೆಲವು ಕಾರ್ವಿುಕರ ಮಧ್ಯೆ ವಾಗ್ವಾದ ನಡೆಯಿತು.

    ‘ಬಹುತೇಕ ಕಾರ್ವಿುಕರು ಅನಕ್ಷರಸ್ಥರಿದ್ದಾರೆ. ಸಹಾಯಧನ ಪಡೆಯಲು ಯಾವ ದಾಖಲಾತಿಗಳನ್ನು ಸಲ್ಲಿಸಬೇಕು ಎನ್ನುವುದು ಗೊತ್ತಿರುವುದಿಲ್ಲ. ಈ ಕುರಿತು ಮಾಹಿತಿ ಕೇಳಲು ಬಂದರೆ ಕಾರ್ವಿುಕ ನಿರೀಕ್ಷಕರೇ ಸಿಗುವುದಿಲ್ಲ. ಸಿಬ್ಬಂದಿ ಸಹ ಸರಿಯಾಗಿ ಸ್ಪಂದಿಸುವುದಿಲ್ಲ. ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಕಾರ್ವಿುಕರ ಮುಖಂಡರಾದ ಗ್ಯಾಣಪ್ಪ ಶೀರಿ, ನಾಗರಾಜ ಕೊರ್ಲಹಳ್ಳಿ, ರಾಜಾಬಕ್ಷೀ ಬೆಟಗೇರಿ, ಮತ್ತಿತರರು ಕಾರ್ವಿುಕ ನಿರೀಕ್ಷಕರನ್ನು ಪ್ರಶ್ನಿಸಿದರು.

    ಸರ್ಕಾರ ಕಾರ್ವಿುಕರಿಗೆ ನೀಡಿರುವ ಸಹಾಯಧನ ಇದುವರೆಗೂ ಬಂದಿಲ್ಲ. ಮೊದಲನೇ ಹಂತದ ಸಹಾಯಧನ ಬೆರಳೆಣಿಕೆಯಷ್ಟು ಕಾರ್ವಿುಕರಿಗೆ ಬಂದಿದೆ. 2944 ನೋಂದಣಿ ಮಾಡಿಸಿದ ಕಾರ್ವಿುಕರಿದ್ದಾರೆ. ಈ ಪೈಕಿ 565 ಕಾರ್ವಿುಕರ ಖಾತೆಗೆ ಸಹಾಯಧನ ಜಮೆಯಾಗಿದೆ ಎಂದು ಗೋಡೆ ಮೇಲೆ ಯಾದಿ ಹಚ್ಚಲಾಗಿದೆ. ಆದರೆ, ಅದರಲ್ಲಿರುವ ಕೆಲವರಿಗೆ ಇನ್ನು ಸಹಾಯಧನವೇ ಜಮೆಯಾಗಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಕಾರ್ವಿುಕರ ಇಲಾಖೆ ನಿರೀಕ್ಷಕಿ ಎಸ್.ಎಂ.ಹಿರಿಯಾಳ, ಒಟ್ಟು 2944 ಕಾರ್ವಿುಕರು ನೋಂದಣಿ ಹೊಂದಿದ್ದಾರೆ. ಈ ಪೈಕಿ 1644 ಕಾರ್ವಿುಕರು ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಇನ್ನುಳಿದವರು ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸುವಂತೆ ಅವರಿಗೆ ತಿಳಿಸುತ್ತೇವೆ. ಈಗ ಅರ್ಜಿ ಸಲ್ಲಿಸಿದವರ ಪೈಕಿ ಕೆಲವರಿಗೆ ಸಹಾಯಧನ ಜಮೆಯಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದವರಿಗೆ ಜಮೆಯಾಗಿರಲಿಕ್ಕಿಲ್ಲ. ಈ ಕುರಿತು ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇವೆ. ಕಾರ್ವಿುಕರು ಸಹಕಾರ ನೀಡಬೇಕು’ ಎಂದರು.

    ಕಾರ್ವಿುಕರಾದ ಕೃಷ್ಣ ರಾಮೇನಹಳ್ಳಿ, ಹನುಮಂತ ದೊಡ್ಡಮನಿ, ಮಹೇಶ ಅಬ್ಬಿಗೇರಿ, ಬಾಷುಸಾಬ್ ನಾಯ್ಕರ್, ದಾವಲಸಾಬ್ ನಾನಪ್ಪನವರ, ರವಿ ಬಡಿಗೇರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts