More

    ಕ್ಷೇತ್ರವನ್ನು ಮಾದರಿ ಮಾಡಲಾಗುವುದು

    ತಿ.ನರಸೀಪುರ: ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಹೇಳಿದರು.

    ತಾಲೂಕಿನ ಕೆಂಡನಕೊಪ್ಪಲು, ಕೋಳಿ ಮಲ್ಲನಹುಂಡಿ,ಬೆನಕನಹಳ್ಳಿ, ಚಿಕ್ಕಬೂಹಳ್ಳಿ, ಹಲವಾರ ನೆರಗ್ಯಾತನಹಳ್ಳಿ, ಎಂ.ಎಲ್. ಹುಂಡಿ, ಮಾಕನಹಳ್ಳಿ ಹಾಗೂ ಕೊಡಗಹಳ್ಳಿ ಗ್ರಾಮಗಳಲ್ಲಿ ಮುಖ್ಯಮಂತ್ರಿ ವಿವೇಚನಾ ಖೋಟಾದಲ್ಲಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ, ಕೆಆರ್‌ಐಡಿಎಲ್ ವತಿಯಿಂದ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಅನುದಾನ ನಿರೀಕ್ಷಿಸುವಂತಿಲ್ಲ. ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೆ ಕ್ಷೇತ್ರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಅನುದಾನ ತರಲು ಸಾಧ್ಯವಾಗುತ್ತಿತ್ತು. ಈಗ ಸರ್ಕಾರ ಶಾಸಕರಿಗೆ ನೀಡುತ್ತಿರುವ ಅಲ್ಪ ಅನುದಾನದಲ್ಲೇ ಅಗತ್ಯ ಇರುವ ಕಡೆ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದೆ ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಕ್ಷೇತ್ರದ ಜನತೆಯ ಮೂಲ ಸೌಕರ್ಯಕ್ಕಾಗಿ ಮತ್ತಷ್ಟು ಹೆಚ್ಚಿನ ಅನುದಾನ ತರಲಾಗುತ್ತದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ನಮಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

    ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾದಲ್ಲಿ ಕ್ಷೇತ್ರ ಅಭಿವೃದ್ಧಿಯಾದಂತೆ ಎಂದ ಶಾಸಕರು ಕ್ಷೇತ್ರವನ್ನು ಗುಡಿಸಲು ಹಾಗೂ ಕಾಂಕ್ರೀಟ್ ರಹಿತ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ಧಾರ್ಥ, ಮಾಜಿ ಸದಸ್ಯ ಜಯಪಾಲ್ ಭರಣಿ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೊರವನಹಳ್ಳಿ ನಾಗರಾಜು, ಕೊಡಗಹಳ್ಳಿ ಗ್ರಾಪಂ ಅಧ್ಯಕ್ಷ ಧನಂಜಯ(ಪಾಪಣ್ಣ), ಬೆನಕನಹಳ್ಳಿ ಗ್ರಾಪಂ ಉಪಾಧ್ಯಕ್ಷ ಮಧುಕುಮಾರ್, ಗ್ರಾಪಂ ಸದಸ್ಯರಾದ ಚಿಕ್ಕಬೂಹಳ್ಳಿ ಮಂಜುಳಾ, ಸಂಭ್ರಮ್, ಮಾದಿಗಹಳ್ಳಿ ರಮೇಶ್, ಅರವಟ್ಟಿಗೆಕೂಪ್ಪಲು ಲಕ್ಷ್ಮೀ ಕೃಷ್ಣ, ಕೆ.ಪಿ. ಶಿವಕುಮಾರ್, ಯಜಮಾನ್ ಚಿಕ್ಕಜವರೇಗೌಡ, ನಾಗರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಲಿಂಗಪ್ಪಾಜಿ, ಸೋಸಲೆ ಧರ್ಮ, ರಾಜಣ್ಣ, ಕೆ ಆರ್ ಐಡಿಎಲ್ ಜೆಇ ಸುಭಾಷ್, ಪಿಡಿಒ ಲಿಂಗರಾಜು, ಕೊಡಗಹಳ್ಳಿ ಗ್ರಾಪಂ ಕಾರ್ಯದರ್ಶಿ ರೇಖಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts