More

    ಕ್ಷೇತ್ರದ ಜನರ ಋಣ ತೀರಿಸುವುದು ಸುಲಭವಲ್ಲ

    ಹುಕ್ಕೇರಿ, ಬೆಳಗಾವಿ: ಕ್ಷೇತ್ರದ ಜನ ಕತ್ತಿ ಸಹೋದರರನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸಿ, ಗೌರವಿಸುತ್ತಾರೆ. ನಮ್ಮ ಕುಟುಂಬ ಸಮಾಜಮುಖಿಯಾಗಿ ಎಷ್ಟೇ ಸೇವೆ ಕೈಗೊಂಡರೂ ಜನರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹಿರಾ ಶುಗರ್ಸ್‌ ಅಧ್ಯಕ್ಷ ನಿಖಿಲ ಉಮೇಶ ಕತ್ತಿ ಹೇಳಿದರು.

    ತಾಲೂಕಿನ ಬೆಳವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಲೋಕೋಪಯೋಗಿ ಇಲಾಖೆಯಡಿ 10.60 ಲಕ್ಷ ರೂ.ವೆಚ್ಚದಲ್ಲಿ ಶಾಲಾ ಕೊಠಡಿ ಹಾಗೂ ಮಲೆನಾಡು ಅಭಿವೃದ್ಧಿ ಅಚ್ಚುಕಟ್ಟು ಪ್ರದೇಶ ಯೋಜನೆಯಡಿ ಮಂಜೂರಾದ 23 ಲಕ್ಷ ರೂ. ವೆಚ್ಚದ 2 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕ್ಷೇತ್ರದಲ್ಲಿ ನಮ್ಮ ತಂದೆ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ಹಲವಾರು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು. ಅವುಗಳನ್ನು ಪೂರ್ಣಗೊಳಿಸಲು ಗಮನ ಹರಿಸುವಂತೆ ಚಿಕ್ಕಪ್ಪ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ನನಗೆ ಮತ್ತು ನನ್ನ ಇನ್ನಿಬ್ಬರು ಸೋದರರಿಗೆ ಸೂಚಿಸಿದ್ದಾರೆ. ಅದಕ್ಕಾಗಿ ಕ್ಷೇತ್ರದ ಜನ ನಮ್ಮ ತಂದೆ ಮತ್ತು ಚಿಕ್ಕಪ್ಪನಿಗೆ ನೀಡಿದ ಸಹಕಾರವನ್ನೂ ನಮಗೂ ನೀಡಬೇಕೆಂದು ವಿನಂತಿಸಿದರು. ಜನರ ಪ್ರೀತಿ, ವಿಶ್ವಾಸದ ಆಶೀರ್ವಾದವೇ ನಮ್ಮ ಕುಟುಂಬಕ್ಕೆ ಶ್ರೀರಕ್ಷೆ ಎಂದರು. ಶಾಲಾ ಸಿಬ್ಬಂದಿ ಡಿಜಿಟಲ್ ಲೈಬ್ರರಿ ಬೇಡಿಕೆ ಮಂಡಿಸಿದಾಗ, ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಜಿಪಂ ಸಿಇಒ ಜತೆಗೆ ಮಾತನಾಡಿ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಬಿಇಒ ಮೋಹನ ದಂಡಿನ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಜಯಶ್ರೀ ಸತ್ಯಾಯಿಗೋಳ ಭೂಮಿಪೂಜೆ ನೆರವೇರಿಸಿದರು. ಪಂಚಾಯಿತಿ ಸದಸ್ಯರು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ನಿಖಿಲ ಕತ್ತಿ ಅವರನ್ನು ಸತ್ಕರಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ, ಹಿರಾ ಶುಗರ್ಸ್‌ ನಿರ್ದೇಶಕ ಬಸವರಾಜ ಮರಡಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರಮೇಶ ಕುಲಕರ್ಣಿ, ತಾಪಂ ಮಾಜಿ ಸದಸ್ಯ ಬಾಳಾಸಾಹೇಬ ನಾಯಿಕ, ಹಿರಾ ಶುಗರ್ಸ್‌ ಎಂಡಿ ಎಸ್.ಆರ್.ಕರ್ಕಿನಾಯಿಕ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಮಗದುಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಖಡಕಬಾವಿ, ಮುಖಂಡರಾದ ಚನ್ನಮಲ್ಲ ನಾಯಿಕ, ಅಪ್ಪಾಸಾಹೇಬ ಸಾರಾಪೂರೆ, ಸಂಜೀವ ನಾಯಿಕ, ಭರತೇಶ ನಾಯಿಕ, ಭೀಮಣ್ಣ ಖೇಮಾಳಿ, ರಾಮಣ್ಣ ತೇರದಾಳಿ ಮತ್ತಿತರರಿದ್ದರು. ಮುಖ್ಯೋಪಾಧ್ಯಾಯ ಬಿ.ಬಿ.ಅಂಗಡಿ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts