More

    ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ

    ಚಿಂಚೋಳಿ: ಕರೊನಾ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಹೋರಾಡಬೇಕಿದೆ. ಅಲ್ಲದೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಶಾಸಕ ಡಾ. ಅವಿನಾಶ ಜಾಧವ್ ಕೋರಿದರು.
    ಪೋಲಕಪಳ್ಳಿಯಲ್ಲಿ ಆದರ್ಶ ವಿದ್ಯಾಲಯಕ್ಕೆ ಕೆಕೆಆರ್ಡಿಬಿ ಯೋಜನೆಯಡಿ 56 ಲಕ್ಷ ರೂ. ವೆಚ್ಚದಲ್ಲಿ ಸುತ್ತುಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಕರೊನಾ ನಿಯಂತ್ರಿಸುವಲ್ಲಿ ಹಗಲಿರುಳು ಶ್ರಮಿಸುತ್ತಿದೆ. ಜತೆಗೆ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಅನುದಾನ ತಂದು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
    ರೋಡ್ ಕಲ್ಲೂರಿನಲ್ಲಿ ಶಾಸಕರ ಅನುದಾನದಡಿ 25 ಲಕ್ಷ ಹಾಗೂ ಅರವಿಂದ ಲಿಂಬಾವಳಿ ಅವರ ಅನುದಾನ 25 ಲಕ್ಷ ಸೇರಿ 50 ಲಕ್ಷ ರೂ. ವೆಚ್ಚದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣವಾಗಲಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದ್ದು, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
    ಗಂಗುನಾಯಕ ತಾಂಡಾದಲ್ಲಿ 42 ಲಕ್ಷ ಅನುದಾನದಲ್ಲಿ 4 ಸುಸಜ್ಜಿತ ಶಾಲೆ ಕೋಣೆ, ವಾರ್ಡ್​ 18, 19, 22ರಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ 5 ಹೈಮಾಸ್ಟ್ ದೀಪಗಳನ್ನು ಉದ್ಘಾಟಿಸಲಾಯಿತು.
    ಬಿಜೆಪಿ ತಾಲೂಕು ಅಧ್ಯಕ್ಷ ಸಂತೋಷ ಗಡಂತಿ, ಪ್ರಮುಖರಾದ ಭೀಮಶೆಟ್ಟಿ ಮುಕ್ಕಾ, ಶ್ರೀಮಂತ ಕಟ್ಟಿಮನಿ, ಅನೀಲಕುಮಾರ ಕಂಟ್ಲಿ, ಕಿರಣರೆಡ್ಡಿ ಮಿರಿಯಾಣ, ಶಾಂತರೆಡ್ಡಿ ನರನಾಳ, ಡಾ. ಬಿರಪ್ಪ ಪೂಜಾರಿ, ಅನೀಲಕುಮಾರ ರಾಠೋಡ್, ಅಗ್ನಿಹೋತ್ರಿ, ಮಹ್ಮದ್ ಹುಸೇನ್, ಲಲಿತಾಬಾಯಿ ಪಾಟೀಲ್, ಲಕ್ಷ್ಮಣ ಅವಂಟಿ, ನಾಗೇಶ ಭದ್ರಶೆಟ್ಟಿ, ಶಂಕರಜೀ ಹಿಪ್ಪರಗಿ, ಅಂಬರೀಶ ಗೋಣಿ, ಶಿವಕುಮಾರ ಪೋಚಾಲಿ, ಮಾಹದೇವಪ್ಪ, ವೀರಣ್ಣ ಭೋವಿ, ಉಮೇಶ ಬೇಳಕೇರಿ, ದೊಡ್ಡಪ್ಪ ಕೋಡ್ಲಿ, ಜಗದೀಶಸಿಂಗ್ ಠಾಕೂರ್, ಬಸವರಾಜ ನೇಕಾರ, ಗುರುರಾಜ ಕುಲಕರ್ಣಿ , ಅಜೀತ ಪಾಟೀಲ್, ಡಾ. ರಾಜಶೇಖರ ಮಾಲಿ, ಪವನಕುಮಾರ ಗೋಪನಪಳ್ಳಿ, ಮಹ್ಮದ್ ಜುನೇದ್, ಡಾ. ಸಂಜಯ ಗೋಳೆ, ಡಾ. ಸಂತೋಷ ಪಾಟೀಲ್, ರಾಜು ಪವಾರ್, ಅಶೋಕ ಚವ್ಹಾಣ್, ಭೀಮರಾವ ರಾಠೋಡ್, ಸುರೇಶ ಸಂದಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts