More

    ಕ್ಷೇತ್ರಕ್ಕೆ ಆರು ಸಾವಿರ ದವಸ ಧಾನ್ಯಗಳ ಕಿಟ್

    ಶಿಗ್ಗಾಂವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈಗಾಗಲೇ ಹಲವಾರು ವೃತ್ತಿಪರರಿಗೆ ವಿಶೇಷ ಪ್ಯಾಕೇಜ್ ಘೊಷಿಸಿದ್ದಾರೆ. ಹಾಗೆಯೇ ಅಸಂಘಟಿತ ವಲಯದ ಕಾರ್ವಿುಕರಿಗೂ ಸಹಾಯ ಮಾಡುವ ಕಾರ್ಯಕ್ರಮ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ವಿುಕ ಇಲಾಖೆಯಿಂದ ನಮ್ಮ ಕ್ಷೇತ್ರಕ್ಕೆ ಆರು ಸಾವಿರ ದವಸ ಧಾನ್ಯಗಳ ಕಿಟ್ ಒದಗಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ತಮ್ಮ ನಿವಾಸದಲ್ಲಿ ಕಾರ್ವಿುಕ ಇಲಾಖೆ ನೀಡಿರುವ ಕಿಟ್ ವಿತರಣೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಶಿಗ್ಗಾಂವಿ-ಸವಣೂರ ಪಟ್ಟಣಕ್ಕೆ ಮೂರು ಸಾವಿರ ಕಿಟ್​ಗಳು ತಲುಪಿದ್ದು, ಭಾನುವಾರ ಸಂಜೆಯೊಳಗೆ ಉಳಿದ ಕಿಟ್​ಗಳು ಪೂರೈಕೆಯಾಗಲಿವೆ. ಎರಡು ತಾಲೂಕಿನ ತಹಸೀಲ್ದಾರರು ರೇಶನ್ ವಂಚಿತರು ಮತ್ತು ಕಾರ್ವಿುಕರಿಗೆ ಕಟ್ಟುನಿಟ್ಟಾಗಿ ಕಿಟ್​ಗಳನ್ನು ವಿತರಿಸಬೇಕು ಎಂದು ಸೂಚಿಸಿದರು.

    ಇಂದು ವಿಶ್ವ ಅಮ್ಮಂದಿರ ದಿನ. ಈಗಾಗಲೇ ನಮ್ಮ ತಾಯಿಯವರ ಟ್ರಸ್ಟ್​ನಿಂದ 10 ಸಾವಿರ ಬಡವರಿಗೆ ಆಹಾರ ಸಾಮಗ್ರಿಯ ಕಿಟ್​ಗಳನ್ನು ವಿತರಿಸಿದ್ದೇನೆ. ಇನ್ನೂ 10 ಸಾವಿರ ಕಿಟ್​ಗಳನ್ನು ಮುಂಬರುವ ದಿನಗಳಲ್ಲಿ ಪಡಿತರ ಚೀಟಿ ಇಲ್ಲದ ಗ್ರಾಮೀಣ ಭಾಗದ ಬಡವರಿಗೆ ವಿತರಿಸುತ್ತೇನೆ ಎಂದರು.

    ಕರೊನಾ ಜತೆಗೆ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಶಿಗ್ಗಾಂವಿ-ಸವಣೂರ ಕ್ಷೇತ್ರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ವಿವಿಧ ಇಲಾಖೆಗಳ ರಸ್ತೆ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ಆರಂಭಗೊಂಡಿವೆ. ಬಹುತೇಕ ಗ್ರಾಮೀಣ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಬೇಸಿಗೆಯೊಳಗೆ ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮುದಾಯ ಭವನ ನಿರ್ವಣಕ್ಕೆ 25 ಕೋಟಿ ರೂ. ಮಂಜೂರಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಶಿಗ್ಗಾಂವಿ ಹಳೇ ತಹಸೀಲ್ದಾರ್ ಕಚೇರಿ ಜಾಗದಲ್ಲಿ ಎಲ್ಲ ಕಚೇರಿಗಳು ಒಂದೇ ಕಡೆ ಮಾಡುವ ಉದ್ದೇಶದಿಂದ ಕಚೇರಿ ಕಾಂಪ್ಲೆಕ್ಸ್ ಕಾಮಗಾರಿಯನ್ನು ತಿಂಗಳ ಕೊನೆಯಲ್ಲಿ ಆರಂಭಿಸಲಾಗುವುದು. 18 ಕೋಟಿ ರೂ. ವೆಚ್ಚದಲ್ಲಿ ಜೇಕಿನಕಟ್ಟಿ ಗ್ರಾಮದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಆರಂಭಿಸಲಾಗಿದೆ. ಈಗಾಗಲೇ ಬಾಡ ಗ್ರಾಮದ ಹತ್ತಿರ 10 ಕೋಟಿ ರೂ. ವೆಚ್ಚದ ವಾಜಪೇಯಿ ವಸತಿ ಶಾಲೆ ಕಾಮಗಾರಿ ಮುಕ್ತಾಯಗೊಂಡಿದೆ. 3.75 ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣ ತೆಗೆದು ಹೊಸ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಟೆಂಡರ್ ಕೆಲಸ ಮಗಿದಿದೆ ಎಂದು ತಿಳಿಸಿದರು.

    ಬಂಕಾಪುರದಲ್ಲಿ 604, ಶಿಗ್ಗಾಂವಿ 176, ಸವಣೂರ 170 ಜಿ+1 ಮನೆಗಳ ಕಟ್ಟಡ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ಕೋವಿಡ್​ನಿಂದ ಎರಡು ತಿಂಗಳ ಕಾಲ ಕ್ಷೇತ್ರದಲ್ಲಿ ಸ್ಥಗಿತಗೊಂಡಿದ್ದ ಎಲ್ಲ ಕಾಮಗಾರಿಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.

    ಬಿಜಿಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ತಾ.ಪಂ. ಸದಸ್ಯ ವಿಶ್ವನಾಥ ಹರವಿ, ಬಸಣ್ಣ ಹೆಸರೂರ ಸೇರಿ ಜನಪ್ರತಿನಿಧಿಗಳು ಹಾಗೂ ಕಾರ್ವಿುಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts