More

    ಕ್ಷಯರೋಗಮುಕ್ತ ಭಾರತಕ್ಕೆ ಎಲ್ಲರೂ ಶ್ರಮಿಸೋಣ

    ಬೆಳಗಾವಿ: ಕ್ಷಯರೋಗ ನಿರ್ಮೂಲನೆ ಅಡಿಯಲ್ಲಿ ಸರ್ಕಾರವು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವುಗಳನ್ನು ಕೊನೆಯ ವ್ಯಕ್ತಿಗಳಿಗೆ ಮುಟ್ಟಿಸಿ 2025ರ ವೇಳೆಗೆ ಕ್ಷಯಮುಕ್ತ ಭಾರತ ಮಾಡುವ ಗುರಿ ಮುಟ್ಟಲು ಶ್ರಮಿಸಿ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಕರೆ ನೀಡಿದರು.

    ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ವಿಭಾಗ, ರೆಡ್‌ಕ್ರಾಸ್ ಸಂಸ್ಥೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ರಾಜ್ಯಪಾಲ ತಾವರಚೆಂದ ಗೆಹಲೋತ್ ಅವರು ಬೆಳಗಾವಿ ಜಿಲ್ಲೆಯ 10 ಕ್ಷಯರೋಗ ಫಲಾನುಭವಿಗಳನ್ನು ದತ್ತು ಪಡೆದಿದ್ದು, ಅವರಿಗೆ ರೆಡಕ್ರಾಸ್ ಸಂಸ್ಥೆಯ ಮೂಲಕ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿ, ಆರೋಗ್ಯ ಶಿಕ್ಷಣ ಪರಿಕರಗಳನ್ನು ಬಿಡುಗಡೆ ಮಾಡಿದರು. ಬಿಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅನಿಲ ಕೋರಬು ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಕೈಗೊಂಡ ಕ್ರಮಗಳ ಕುರಿತು ತಿಳಿಸಿದರು. ಬಿಮ್ಸ್ ಕ್ಷಯರೋಗ ವಿಭಾಗದ ಮುಖ್ಯಸ್ಥ ಡಾ.ಗಿರೀಶ ದಂಡಗಿ ಮಾತನಾಡಿ, ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕು ಎಂದರು.

    ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೋಳಿ ಮಾತನಾಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುಧಾಕರ್ ಆರ್.ಸಿ., ವೈದ್ಯಕೀಯ ಅಧೀಕ್ಷಕ ಡಾ. ಅಣ್ಣಾಸಾಹೇಬ ಪಾಟೀಲ, ಮನೋ ವೈದ್ಯ ಡಾ.ಚಂದ್ರಶೇಖರ, ಬೆಳಗಾವಿ ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ. ಬಿ.ಎನ್. ತುಕ್ಕಾರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಎಂ.ವಿ. ಕಿವುಡಸಣ್ಣವರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಚಾಂದನಿ ದೇವಡಿ, ಬಿಮ್ಸ್ ಆಸ್ಪತ್ರೆ ಕ್ಷಯರೋಗ ಅಧಿಕಾರಿ ಡಾ.ನಾಗಲೇಕರ್, ರೇಡ್‌ಕ್ರಾಸ್ ಸಂಸ್ಥೆ ಖಜಾಂಚಿ ಪ್ರಿಯಾ ಪುರಾಣಿಕ ಇದ್ದರು.

    ಪ್ರವೀಣ ಬೇಟಿಗಾರ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಪಿ. ಯಲಿಗಾರ ನಿರೂಪಿಸಿದರು. ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಶಿವಾಜಿ ಮಾಳಗೆನ್ನವರ ವಂದಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts