More

    ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್​

    ಕಲಬುರಗಿ: ಕರೊನಾ ಸೋಂಕು ಹರಡುವುದನ್ನು ತಪ್ಪಿಸಲು ಹೋಮ್ ಕ್ವಾರಂಟೈನ್ದಲ್ಲಿರಬೇಕಾಗಿದ್ದ ಶಂಕಿತರು ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಿಂದ ಓಡಾಡಲು ಹೊರಗೆ ಬಂದ ಎಂಟು ಜನರ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಹಿಂದೆಯೂ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದ್ದವು.
    ನಿಯಮ ಉಲ್ಲಂಘನೆ ಮಾಡಿ ಹೋಮ್ ಕ್ವಾರಂಟೈನ್ದಿಂದ ಹೊರ ಬಂದಿದ್ದ ಆರೋಪದ ಹಿನ್ನೆಲೆಯಲ್ಲಿ ಚೌಕ್ ಪೊಲೀಸ್ ಠಾಣೆಯಲ್ಲಿ ಮೂವರು, ರಾಘವೇಂದ್ರ ನಗರ ಠಾಣೆಯಲ್ಲಿ ಮೂವರು ಹಾಗೂ ರೋಜಾ ಮತ್ತು ಎಂ.ಬಿ.ನಗರ ಠಾಣೆಯಲ್ಲಿ ತಲಾ ಒಬ್ಬರ ವಿರುದ್ಧ ಸೇರಿ ಒಟ್ಟು ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸತೀಶಕುಮಾರ ಎನ್ ತಿಳಿಸಿದ್ದಾರೆ.
    ಹೋಮ್ ಕ್ವಾರಂಟೈನ್ದಲ್ಲಿರುವವರು ಕಡ್ಡಾಯವಾಗಿ ಸಕರ್ಾರದ ಆದೇಶ ಪಾಲನೆ ಮಾಡಬೇಕು, ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರುವಂತಿಲ್ಲ. ಬಂದರೆ, ಅಂತವರ ವಿರುದ್ಧ ನಿಧರ್ಾಕ್ಷಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
    ಹೋಮ್ ಕ್ವಾರಂಟೈನ್ದಲ್ಲಿರುವರು ಮನೆಯಿಂದ ಹೊರಗಡೆ ಬರಲೇಬಾರದು. ಅಂತಹವರು ಕಂಡು ಬಂದಲ್ಲಿ ಸಾರ್ವಜನಿಕರು ಸಹ ಪೊಲೀಸರಿಗೆ ಇಲ್ಲವೇ ಆರೋಗ್ಯ ಇಲಾಖೆಗೆ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts