More

    ಕ್ವಾರಂಟೈನ್​ನಲ್ಲಿ ಸೂಕ್ತ ಸೌಲಭ್ಯ ಒದಗಿಸಿ

    ಹುಮನಾಬಾದ್: ಚಿಟಗುಪ್ಪದಲ್ಲಿ ಮೃತ ಪಟ್ಟ ವ್ಯಕ್ತಿಯ ಬಡಾವಣೆ ಸಿಲ್ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳು ಪೂರೈಕೆಗೆ ಕ್ರಮ ಕೈಗೊಳ್ಳಲು ಪಟ್ಟಣದಲ್ಲಿ ಸ್ವಚ್ಛತೆ, ಹೊರ ರಾಜ್ಯದವರ ಮೇಲೆ ನಿಗಾ ಇಡಲಾಗುತ್ತಿದೆ. ದಿನೇ ದಿನೆ ಪ್ರಕರಣ ಹೆಚ್ಚುತ್ತಿದ್ದು, ಕ್ವಾರಂಟೈನ್ನಲ್ಲಿ ಇದ್ದವರಿಗೆ ಸೂಕ್ತ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಶಾಸಕ ರಾಜಶೇಖರ ಪಾಟೀಲ್ ಸೂಚಿಸಿದರು.
    ಕರೊನಾ ದೃಢಪಟ್ಟ ಚಿಟಗುಪ್ಪ ಹಾಗೂ ತಾಲೂಕಿನ ಹುಣಸಗೇರಾ ಕಂಟೇನ್ಮೆಂಟ್ ವಲಯಕ್ಕೆ ಹಾಗೂ ಕೊಂಡಬಲ್ ಮತ್ತು ಮುಸ್ತರಿ ಗ್ರಾಮದ ಕ್ವಾರಂಟೈನ್ ಕೇಂದ್ರಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ, ಮಾತನಾಡಿದರು.
    ಸಾರ್ವಜನಿಕರು ಮನೆಯಿಂದ ಹೊರ ಬರದೆ ಆಡಳಿತಕ್ಕೆ ಸಹಕಾರ ನೀಡಬೇಕು. ಚಿಟಗುಪ್ಪ ಪಟ್ಟಣದಲ್ಲಿ ಸೋಂಕಿತ ವ್ಯಕ್ತಿ ಮೃತ ಪಟ್ಟಿದ್ದು, ತಾಲೂಕಿನ ಹುಣಸಗೇರಾ ಗ್ರಾಮಕ್ಕೆ ಮುಂಬಯಿನಿಂದ ಬಂದ ಮಹಿಳೆಗೆ ಸೋಂಕು ತಗುಲಿದೆ. ಎರಡು ಕಡೆ ಸಾರ್ವಜನಿಕರ ಒಡಾಟ ಸೇರಿ ಅಲ್ಲಿನ ಕೆಲಸ ಕಾರ್ಯ ಬಂದ್ ಮಾಡಲಾಗಿದೆ. ನಿಗದಿತ ಸಮಯದಂತೆ ನಿಯಮ ಪಾಲಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
    ತಾಲೂಕಿನ ವಸತಿ ನಿಲಯಗಳು, ಸರ್ಕಾರಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ರೋಗ ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕರು ಅಂತರ ಕಾಪಾಡಿಕೊಳ್ಳುವುದು ಅವಶ್ಯ ಎಂದರು. ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಸಹಾಯಕ ಆಯುಕ್ತ ಭವರಸಿಂಗ್ ಮೀನಾ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಜಿಯೋದ್ದೀನ್, ಪಶು ಸಂಗೊಪನಾ ಉಪ ನಿದೇರ್ಶಕ ಡಾ.ಗೋವಿಂದ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಅಶೋಕ ಮೈಲಾರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts