ಕ್ರೀಡೆಯಲ್ಲಿ ಕಲ್ಲಹಳ್ಳಿ ಸರಕಾರಿ ಶಾಲೆಗೆ ಬಹುಮಾನ

ಕ್ರೀಡೆಯಲ್ಲಿ ಕಲ್ಲಹಳ್ಳಿ ಸರಕಾರಿ ಶಾಲೆಗೆ ಬಹುಮಾನ
Published on

ಹಾಸನ: ತಾಲೂಕಿ ದಕ್ಷಿಣ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೂ ಪ್ರಥಮ ಸ್ಥಾನಗಳನ್ನು ಗಳಿಸಿ ಬಹುಮಾನ ತಂದಿರುವುದಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಎನ್.ಮೋಹನಕುಮಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಕೆ ಸಿ ರಘು, ಶಾಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕಾಂಚನ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತ ದ್ವೀತಿಯ, ಭರ್ಜಿ ಎಸೆತ ದ್ವೀತಿಯ, ತನುಶ್ರೀ ತ್ರಿಬಲ್ ಜಂಪ್ ಪ್ರಥಮ, ಲಾಂಗ್ ಜಂಪ್ ದ್ವೀತಿಯ, ಧನಲಲಕ್ಷ್ಮೀ 800 ಮೀ ಓಟ ದ್ವೀತಿಯ, 3000 ಓಟ ತೃತೀಯ, ಕುಶಾಂತ್ 800ಮೀ ಓಟ ದ್ವೀತಿಯ, 1500ಮೀ ಓಟ ತೃತೀಯ, 3000ಮೀ ಓಟ ತೃತೀಯ, ಜನ್ಯ 3000ಮೀ ಓಟ ದ್ವೀತಿಯ, 1500ಮೀ ತೃತೀಯ, ದುಶ್ಯಂತ್ ತ್ರಿಬಲ್ ಜಂಪ್ ತೃತೀಯ, ರಾಕೇಶ್ 400 ಮೀ ಓಟ ತೃತೀಯ, ಅಂಜಲಿ 100 ಮೀ ಒಟ ತೃತೀಯ ಸ್ಥಾನಗಳನ್ನು ಪಡೆದು ಕಲ್ಲಹಳ್ಳಿ ಪ್ರೌಢಶಾಲೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net