More

    ಕ್ರೀಡೆ ವಿದ್ಯಾಭ್ಯಾಸದ ಅವಿಭಾಜ್ಯ ಅಂಗವಾಗಲಿ

    ಧಾರವಾಡ: ಎಲ್ಲ ಶಿಕ್ಷಣ ಸಂಸ್ಥೆಗಳು ಇಂದಿನ ವಿದ್ಯಾರ್ಥಿಗಳಿಗೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ದೇಶದ ಉತ್ತಮ ಕ್ರೀಡಾಪಟುಗಳಾಗಿ ರೂಪಿಸುವಲ್ಲಿ ಸಹಕರಿಸಬೇಕು. ಕ್ರೀಡೆ ವಿದ್ಯಾಭ್ಯಾಸದ ಅವಿಭಾಜ್ಯ ಅಂಗವಾದಾಗ ಮಾತ್ರ ದೇಶವನ್ನು ಕ್ರೀಡೆಯಲ್ಲಿ ಉನ್ನತ ದರ್ಜೆಗೆ ಕೊಂಡೊಯ್ಯಬಹುದು ಎಂದು ಡಾ. ಅಜಿತ ಪ್ರಸಾದ ಹೇಳಿದರು.

    ನಗರದ ವಿದ್ಯಾಗಿರಿಯ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಭಾರತೀಯ ಹಾಕಿ ಕ್ರೀಡೆಯನ್ನು ಯಶಸ್ಸಿನ ಶಿಖರಕ್ಕೊಯ್ದ ದ್ಯಾನ್​ಚಂದ್​ಗೆ ಇಂದು ಭಾರತೀಯರೆಲ್ಲರೂ ನಮನ ಸಲ್ಲಿಸುತ್ತಿದ್ದಾರೆ. ಅವರು 1928ರಿಂದ ಸತತವಾಗಿ 3 ಒಲಿಂಪಿಕ್ ಕ್ರೀಡೆಯಲ್ಲಿ 3 ಬಾರಿ ಚಿನ್ನದ ಪದಕ ಗೆದ್ದ ತಂಡದ ಮಹಾನ್ ಆಟಗಾರರು ಎಂದು ಬಣ್ಣಿಸಿದರು.

    ಧ್ಯಾನಚಂದ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ 3 ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ 12 ಪಂದ್ಯಗಳಿಂದ 33 ಗೋಲು ಗಳಿಸಿದ್ದ ದಾಖಲೆ ಇನ್ನೂ ದಾಖಲೆಯಾಗೆ ಉಳಿದಿದೆ. ಅವರ ಈ ಸಾಧನೆಯಿಂದ ಭಾರತದಲ್ಲಷ್ಟೆ ಅಲ್ಲದೆ, ವಿಶ್ವಾದ್ಯಂತ ಹಾಕಿ ಆಟ ಪ್ರಸಿದ್ಧಿ ಪಡೆದಿದ್ದು ಎಂದರೆ ತಪ್ಪಾಗಲಾರದು. ಈ ಕಾರಣಕ್ಕಾಗಿ ದ್ಯಾನಚಂದ್ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಘೊಷಣೆ ಮಾಡಲಾಗಿದೆ ಎಂದರು.

    ಜೆಎಸ್​ಎಸ್ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್ ಜೈನ್, ಗಣೇಶ ನಾಯಕ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts