More

    ಕ್ರೀಡಾಂಗಣದಲ್ಲಿ ನಾಡಕಚೇರಿ ನಿರ್ವಣಕ್ಕೆ ವಿರೋಧ

    ಬಾಳೆಹೊನ್ನೂರು: ಇಲ್ಲಿನ ಸರ್ಕಾರಿ ಪ್ರೌಢಶಾಲೆ ಕ್ರೀಡಾಂಗಣದ ಜಾಗದಲ್ಲಿ ನಾಡಕಚೇರಿ ನಿರ್ವಣಕ್ಕೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಶಾಸಕ ಟಿ.ಡಿ.ರಾಜೇಗೌಡ ನಾಡಕಚೇರಿ ನೂತನ ಕಟ್ಟಡ ಶಂಕುಸ್ಥಾಪನೆ ನೆರವೇರಿಸದೆ ವಾಪಸಾಗಿದ್ದಾರೆ. ಕ್ರೀಡಾಂಗಣ ಸಮೀಪದಲ್ಲಿ ನಾಡ ಕಚೇರಿಯಿದ್ದು ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ನೂತನ ಕಟ್ಟಡ ನಿರ್ವಿುಸಿ ಅಟಲ್​ಜೀ ಜನಸ್ನೇಹಿ ಕೇಂದ್ರವಾಗಿ ಪರಿವರ್ತಿಸಲು ಸರ್ಕಾರದಿಂದ 18.90 ಲಕ್ಷ ರೂ. ಅನುದಾನ ಮಂಜೂರಾಗಿದೆ. ನಿರ್ವಣದ ಹೊಣೆಯನ್ನು ನಿರ್ವಿುತಿ ಕೇಂದ್ರಕ್ಕೆ ವಹಿಸಲಾಗಿದೆ. ಮಂಗಳವಾರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಭಾಗವಹಿಸುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕ್ರೀಡಾಪಟುಗಳು ಪಟ್ಟಣದಲ್ಲಿ ಕ್ರೀಡಾಂಗಣದ ಕೊರತೆ ಇದೆ. ಹಾಲಿ ಜಾಗದಲ್ಲಿ ಕಟ್ಟಡ ನಿರ್ವಿುಸಿದರೆ ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ತೊಂದರೆಯಾಗಲಿದೆ ಎಂದು ಅಹವಾಲು ಸಲ್ಲಿಸಿದರು. ನೂತನ ನಾಡಕಚೇರಿಯನ್ನು ಬೇರೆಡೆ ನಿರ್ವಿುಸಬೇಕು ಹಾಗೂ ಕ್ರೀಡಾಂಗಣ ಜಾಗವನ್ನು ನಾಡಕಚೇರಿಗೆ ಮಾಡಿಕೊಟ್ಟಿರುವ ಇ-ಸ್ವತ್ತನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

    ಸ್ಪಂದಿಸಿದ ಟಿ.ಡಿ.ರಾಜೇಗೌಡ, ಕ್ರೀಡಾಂಗಣದ ಜಾಗದಲ್ಲಿ ಕಟ್ಟಡ ನಿರ್ವಿುಸಲು ಒಪ್ಪಿಗೆ ನೀಡುವುದಿಲ್ಲ. ಸಮೀಪದಲ್ಲೇ ತಾಲೂಕು ಪಂಚಾಯಿತಿ ಜಾಗವಿದ್ದು ಅಲ್ಲಿ ಇಒ ಹಾಗೂ ಜಿಪಂ ಸಿಇಒ ಬಳಿ ರ್ಚಚಿಸಲಾಗುವುದು. ತಾಪಂ ಜಾಗದ ಇ-ಸ್ವತ್ತು ಮಾಡಿಕೊಟ್ಟಲ್ಲಿ ಅಲ್ಲಿಯೇ ನಾಡಕಚೇರಿ ನಿರ್ವಿುಸಲಾಗುವುದು ಎಂದು ಭರವಸೆ ನೀಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts