More

    ಕ್ರಿಮ್ಸ್​ನಲ್ಲಿ 15 ವೆಂಟಿಲೇಟರ್

    ಕಾರವಾರ: ಇಲ್ಲಿನ ಕ್ರಿಮ್್ಸ ಆಸ್ಪತ್ರೆಗೆ ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಒಂದು ವೆಂಟಿಲೇಶನ್ ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ಕ್ರಿಮ್್ಸ ನಿರ್ದೇಶಕ ಡಾ. ಗಜಾನನ ನಾಯಕ ಯಂತ್ರಕ್ಕೆ ಇತ್ತೀಚೆಗೆ ಚಾಲನೆ ನೀಡಿದರು. ಈ ಮೊದಲು ಆಸ್ಪತ್ರೆಯಲ್ಲಿ ಕೇವಲ 3 ವೆಂಟಿಲೇಟರ್​ಗಳಿದ್ದವು. ಜಿಲ್ಲಾಡಳಿತ 5 ವೆಂಟಿಲೇಟರ್ ವ್ಯವಸ್ಥೆ ಮಾಡಿದೆ. ಇನ್ಪೋಸಿಸ್ ಫೌಂಡೇಷನ್ 3 ವೆಂಟಿಲೇಟರ್ ಒದಗಿಸಿದೆ. ವೈದ್ಯಕೀಯ ನಿರ್ದೇಶನಾಲಯ ಕೂಡ 3 ವೆಂಟಿಲೇಟರ್ ನೀಡಿದೆ ಎಂದು ಡಾ. ನಾಯಕ್ ವಿವರಿಸಿದರು. ಈ ವೇಳೆ ಡಾ. ಶಿವಾನಂದ ಕುಡ್ತಲಕರ್, ಡಾ. ಶಿವಕುಮಾರ ಜಿ.ಎಲ್., ಡಾ. ವೆಂಕಟೇಶ, ಡಾ. ಮಂಜುನಾಥ ಭಟ್, ಡಾ. ಮಧುಕರ ಕೆ.ಟಿ.ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts