More

    ಕ್ಯಾರೆಟ್ ಬೆಳೆಯನ್ನು ರಸ್ತೆಗೆ ಸುರಿದ ಬೆಳೆಗಾರ, ತರಕಾರಿಗಳನ್ನು ಕೇಳುವವರೇ ಇಲ್ಲ

    ನಂದಗುಡಿ: ಬೇಡಿಕೆ ಇಲ್ಲದೆ ಟೊಮ್ಯಾಟೊವನ್ನು ಹೊಂಡದಲ್ಲಿ ಸುರಿಯುತ್ತಿರುವ ನಡುವೆಯೇ ಇದೀಗ ಕ್ಯಾರೆಟ್ ಬೆಳೆಗಾರರೂ ಬೆಲೆ ಸಿಗದೆ ಬೆಳೆಯನ್ನು ರಸ್ತೆ ಬದಿ ಸುರಿಯುತ್ತಿದ್ದಾರೆ.

    ಕಸಬಾ ಹೋಬಳಿಯ ಉಪ್ಪಾರಹಳ್ಳಿ ಹೊರವಲಯದಲ್ಲಿ ರೈತರೊಬ್ಬರು ರಸ್ತೆ ಬದಿಯಲ್ಲಿ ಕ್ಯಾರೆಟ್ ಸುರಿದಿದ್ದಾರೆ. ಇದನ್ನು ಕಂಡ ದಾರಿಹೋಕರು ಉತ್ತಮ ಕ್ಯಾರೆಟ್‌ಗಳನ್ನು ಆಯ್ದುಕೊಂಡು ಹೋಗುತ್ತಿದ್ದಾರೆ.

    12 ದಿನಗಳಿಂದ ಲಾಕ್‌ಡೌನ್ ಇರುವ ಕಾರಣ ತರಕಾರಿಗಳನ್ನು ಕೇಳುವವರೇ ಇಲ್ಲವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಮಾರುಕಟ್ಟೆಗೆ ಕೊಂಡೊಯ್ದ ಖರ್ಚೂ ಸಿಗದಂತೆ ಆಗಿದ್ದು, ಬೇಸತ್ತ ರೈತರು ರಸ್ತೆ ಬದಿ ಸುರಿದು ಹೋಗುತ್ತಿದ್ದಾರೆ.

    25 ಸಾವಿರ ರೂ. ಪರಿಹಾರ ಬೇಕು: ತೋಟಗಾರಿಕೆ ಬೆಳೆಗಳಿಗೆ ಎಕರೆಗೆ 10 ಸಾವಿರ ರೂ. ಪರಿಹಾರಧನ ಒದಗಿಸುವುದಾಗಿ ಸರ್ಕಾರ ೋಷಿಸಿದೆ. ಆದರೆ, ಕ್ಯಾರೆಟ್ ಬೆಳೆಯಲು ಗೊಬ್ಬರ, ಔಷಧ ಮತ್ತಿತರ ವೆಚ್ಚ ಸೇರಿ ಎಕರೆಗೆ 50 ಸಾವಿರ ರೂ. ಖರ್ಚು ಬರುತ್ತದೆ. ಆದ್ದರಿಂದ, ಸರ್ಕಾರ ಕ್ಯಾರೆಟ್ ಬೆಳೆದವರಿಗೆ ಕನಿಷ್ಠ ಎಕರೆಗೆ 25 ಸಾವಿರ ರೂ. ಪರಿಹಾರಧನ ೋಷಿಸಬೇಕು ಎಂದು ಹಲವು ರೈತರು ಮನವಿ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts