More

    ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕರೂ ಯೋಧರಾಗಿ ಕಾರ್ಯನಿರ್ವಹಿಸಬೇಕು:ಸಚಿವ ಕೆ.ಗೋಪಾಲಯ್ಯ ಮನವಿ

    ಹಾಸನ: ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕರೂ ಯೋಧರಾಗಿ ಕಾರ್ಯನಿರ್ವಹಿಸಬೇಕು. ಯುಗಾದಿವರೆಗೂ ಸಾಲುಸಾಲಾಗಿ ಬರುವ ಹಬ್ಬ, ಜಾತ್ರೆ, ಸುಗ್ಗಿ, ಜಾತ್ರೋತ್ಸವಗಳ ಸಂದರ್ಭದಲ್ಲಿ ಕರೊನಾ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮನವಿ ಮಾಡಿದರು.

    ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ಜೀಪ್‌ನಲ್ಲಿ ಸಂಚರಿಸಿ ಪೊಲೀಸ್ ತಂಡದಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

    ಹಬ್ಬಗಳ ಆಚರಣೆಯ ಸಂಭ್ರಮದಲ್ಲಿ ಎಚ್ಚರ ತಪ್ಪಿದರೆ ಮತ್ತೆ ಕರೊನಾ ಹರಡುವ ಪ್ರಮಾಣ ಹೆಚ್ಚಾಗುತ್ತದೆ. ಸಮಾಜದ ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಹಭಾಗಿಗಳಾಗೋಣ ಎಂದು ಕರೆ ನೀಡಿದರು.

    ಕಳೆದೊಂದು ವರ್ಷದಿಂದ ವಿಶ್ವವನ್ನು ಕಾಡುತ್ತಿರುವ ಹೆಮ್ಮಾರಿ ಕೋವಿಡ್ 19 ದೇಶ ಹಾಗೂ ರಾಜ್ಯಕ್ಕೆ ಕಂಟಕವಾಗಿದೆ. ಜಿಲ್ಲೆಯಲ್ಲಿಯೂ ನಾನೂರಕ್ಕೂ ಅಧಿಕ ಜನರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರೆಲ್ಲರ ಆತ್ಮಗಳಿಗೆ ಚಿರಶಾಂತಿ ಕೋರೋಣ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿವೆ. ಇದಕ್ಕಾಗಿ ಶ್ರಮಿಸಿದ ಎಲ್ಲ ಕೋವಿಡ್ ಯೋಧರು, ಅಧಿಕಾರಿಗಳು, ಸಿಬ್ಬಂದಿಗೆ ಸರ್ಕಾರ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

    ನವೆಂಬರ್ 5ರಿಂದ ನಗರದ ಆಧಿದೇವತೆ ಶ್ರೀ ಹಾಸನಾಂಬೆಯ ದರ್ಶನೋತ್ಸವ ಆರಂಭವಾಗಲಿದೆ. ತಾಯಿ ಹಾಸನಾಂಬೆ ಎಲ್ಲ ಸಂಕಷ್ಟಗಳನ್ನು ಕಳೆದು ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ನೆಮ್ಮದಿ, ಸುಖ, ಶಾಂತಿ, ಯಶಸ್ಸನ್ನು ಕರುಣಿಸಲಿ. ಜನರ ಆರೋಗ್ಯ ರಕ್ಷಣೆ ಉದ್ದೇಶದಿಂದ ಈ ಬಾರಿ ಕೇವಲ ಎಲ್.ಇ.ಡಿ. ಸ್ಕೀನ್ ಮತ್ತು ಆನ್‌ಲೈನ್ ಮೂಲಕ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts