More

    ಕೋಮು ಸೌಹಾರ್ದತೆ ಸಾರಿದ ಆಯನೂರಿನ ವಿಘ್ನೇಶ್ವರ: ವಿಸರ್ಜನಾ ಮೆರವಣಿಗೆಯಲ್ಲಿ ಹಿಂದು- ಮುಸ್ಲಿಮರು ಭಾಗಿ

    ಆಯನೂರು: ವಿನಾಯಕ ವೃತ್ತದಲ್ಲಿ ಶ್ರೀ ಸರ್ವಸಿದ್ಧಿ ವಿನಾಯಕ ಸ್ವಾಮಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ 56ನೇ ವರ್ಷದ ಸಾರ್ವಜನಿಕ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಶನಿವಾರ ಹಿಂದು-ಮುಸ್ಲಿಮರು ಭಾಗವಹಿಸುವ ಮೂಲಕ ಸೌಹಾರ್ದತೆಯಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.
    ಮೆರವಣಿಗೆಯಲ್ಲಿ ಆಯನೂರು ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಪಾಲ್ಗೊಂಡಿದ್ದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋಟೆಯ ತಾವರೆಕೆರೆಯಲ್ಲಿ ಶನಿವಾರ ಬೆಳಗಿನ ಜಾವ ವಿಸರ್ಜಿಸಲಾಯಿತು. ಸುರಿಯುವ ಮಳೆಯಲ್ಲೂ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
    ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಅದೇ ಮಾರ್ಗವಾಗಿ ಚಾಮುಂಡಿಪುರ, ಸಾಗರ ರಸ್ತೆ, ತಾಂಡಾ, ದುರ್ಗಮ್ಮನ ದೇವಸ್ಥಾನ, ಸಾಮಿಲ್ ರಸ್ತೆ ಮುಖಾಂತರ ಸಾಗಿ ಮತ್ತೆ ಬಸ್ ನಿಲ್ದಾಣಕ್ಕೆ ಬಂದು ಹಾರನಹಳ್ಳಿ ರಸ್ತೆಯ ಮಾರ್ಗವಾಗಿ ಕೊನೆಗೆ ತಾವರೆಕೆರೆಯಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
    ಆಯನೂರಿನ ಸಂತೋಷ್ ಒಂದು 1.25 ಕ್ವಿಂಟಾಲ್ ಸೇಬಿನ ಹಾರ ಹಾಗೂ ವಿನಾಯಕ ಫ್ಲವರ್ ಸ್ಟಾಲ್‌ನಿಂದ ಒಂದೂವರೆ ಕ್ವಿಂಟಾಲ್ ಸೇವಂತಿಗೆ ಹಾರವನ್ನು ಸ್ವಾಮಿಗೆ ಹಾಕಿದರು. ಜಾಮಿಯಾ ಮಸೀದಿಯಿಂದ ಗಣಪತಿ ಮೂರ್ತಿಗೆ ಬೃಹದಾಕಾರದ ತುಳಸಿಹಾರ ಸಮರ್ಪಿಸಲಾಯಿತು. ಮೆರವಣಿಗೆ ಉದ್ದಕ್ಕೂ ಮಹಿಳೆಯರು ಮನೆಯ ಮುಂಭಾಗ ರಸ್ತೆಗೆ ನೀರು ಮತ್ತು ರಂಗೋಲಿ ಹಾಕಿ ಸ್ವಾಗತಿಸಿದರು. ಪ್ರಸಾದ, ಲಡ್ಡು, ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಹಲಗೆ, ಡೊಳ್ಳು ಸೆಟ್ಟು, ಮಂಗಳವಾದ್ಯ, ಹುಲಿ ವೇಷ ಮೆರವಣಿಗೆಗೆ ಮೆರುಗು ನೀಡಿದವು. ಡಿಜೆಗೆ ಅನುಮತಿ ಸಿಕ್ಕಿದ್ದರಿಂದ ಯುವಕರ ನೃತ್ಯ ಕಣ್ಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts