More

    ಕೋದಂಡರಾಮ ದೇವರ ಬ್ರಹ್ಮಮಹಾರಥೋತ್ಸವ

    ಬನ್ನೂರು: ಪಟ್ಟಣದಲ್ಲಿ ಶ್ರೀ ಕೋದಂಡರಾಮ ದೇವರ ಬ್ರಹ್ಮಮಹಾರಥೋತ್ಸವ ಶನಿವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ಮುಂಜಾನೆ 6 ಗಂಟೆ ವೇಳೆಗೆ ಕೋದಂಡರಾಮ ದೇವರ ತೀರ್ಥವನ್ನು ಹಾಕುವ ಮೂಲಕ ರಸ್ತೆಯನ್ನು ಪರಿಶುದ್ಧಿಗೊಳಿಸಲಾಯಿತು. ನಂತರ ಬಣ್ಣಬಣ್ಣದ ಪತಾಕೆಯಿಂದ ಕಂಗೊಳಿಸುತ್ತಿದ್ದ ರಥದಲ್ಲಿ ಕಳಸ ಪ್ರತಿಷ್ಠಾಪಿಸಿ ಮಂಗಳ ವಾದ್ಯದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಮಾಡಿ ರಥದೊಳಗೆ ಪ್ರತಿಷ್ಠಾಪಿಸಲಾಯಿತು. ನಂತರ ನೆರೆದಿದ್ದ ಭಕ್ತರು ಚಪ್ಪಾಳೆ ತಟ್ಟಿದರು. ಜೈ ಶ್ರೀರಾಮ್, ಜೈ ಹನುಮಾನ್ ಎಂದು ಕೂಗುತ್ತ ರಥೋತ್ಸವಕ್ಕೆ ಚಾಲನೆ ದೊರೆಯಿತು.

    ರಥೋತ್ಸವ ಸಾಗುತ್ತಿದ್ದ ಮಾರ್ಗದಲ್ಲಿ ಯುವಕರು ನೃತ್ಯ ಮಾಡಿದರು. ತೇರಿನ ಬೀದಿ ಮೂಲಕ ಹೊರಟ ರಥ ಸುಮಾರು 12 ಗಂಟೆಯ ವೇಳೆಗೆ ದೊಡ್ಡಂಗಡಿ ಬೀದಿ ಮಾರ್ಗವಾಗಿ ಸಾಗಿ ದೇವಾಲಯದ ಸ್ವಸ್ಥಾನ ಸೇರಿತು. ವಿವಿಧ ಸಂಘದ ವತಿಯಿಂದ ಮಜ್ಜಿಗೆ ಪಾನಕವನ್ನು ಅಲ್ಲಲ್ಲಿ ವಿತರಿಸಲಾಯಿತು.

    ಪೋಲಿಸರು ಬಿಗಿ ಬಂದೋ ಬಸ್ತ್ ಕಲ್ಪಿಸಿದ್ದರು. ರಸ್ತೆಯ ಮಧ್ಯದಲ್ಲಿ ಹಾದು ಹೋದ ವಿದ್ಯುತ್‌ತಂತಿ, ಕೇಬಲ್ ವೈರ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಥ ಸಾಗಿದ ನಂತರ ಮರುಜೋಡಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts