More

    ಕೋಟ್ಯಂತರ ರೂ. ವಂಚಿಸಿದ ವ್ಯಕ್ತಿಯ ಬಂಧನ

    ಬೆಳಗಾವಿ: ತನ್ನ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ, ಜನರಿಂದ ಕೋಟ್ಯಂತರ ರೂ. ಹೂಡಿಕೆ ಪಡೆದು ಹೆಂಡತಿ ಮತ್ತು ಮಕ್ಕಳೊಂದಿಗೆ ವಿದೇಶದಲ್ಲಿ ಮೋಜು, ಮಸ್ತಿ ಮಾಡುತ್ತಿದ್ದ ವಂಚಕನನ್ನು ಜೈಲಿಗಟ್ಟುವಲ್ಲಿ ಬೆಳಗಾವಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
    ಮಹಾರಾಷ್ಟ್ರದ ಇಚಲಕರಂಜಿಯ ಶಿವಾನಂದ ದಾದು ಕುಂಬಾರ(46) ವಂಚಕ. ಬಂಧಿತ ಹಾಗೂ ಆತನ ಕುಟುಂಬಸ್ಥರ ಚರಾಸ್ತಿ ಹಾಗೂ ಆತನ ಸ್ನೇಹಿತರಿಂದ ವಂಚನೆಗೆ ಸಂಬಂಧಪಟ್ಟ 20 ಲಕ್ಷ ರೂ. ನಗದು ಜಪ್ತಿ ಪಡಿಸಿಕೊಂಡು ಎಲ್ಲ ಆಸ್ತಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಹಾಗೂ ಬಂಧಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಿವಾನಂದ ಬೆಳಗಾವಿಯ ಅರ್ಜುನ ಕಲ್ಲಪ್ಪ ಪಾಟೀಲ ಎಂಬುವರಿಂದ, ಯಲ್ಲಪ್ಪ ಮನಗುತಕರ ಎಂಬುವರ ಮೂಲಕ ಸಿಮೆಂಟ್ ಹಾಗೂ ಸ್ಟೀಲ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ಲಭಿಸಲಿದೆ ಎಂದು ಆಸೆ ತೋರಿಸಿ 75 ಲಕ್ಷ ರೂ. ಹಣ ಪಡೆದಿದ್ದ. ಅಲ್ಲದೇ, ಎಪಿಎಂಸಿಯಲ್ಲಿ ವ್ಯಾಪಾರ ನಡೆಸುವ ಹಲವು ವರ್ತಕರಿಂದಲೂ ಲಕ್ಷಾಂತರ ರೂ. ಹೂಡಿಕೆಯಾಗಿ ಪಡೆದು, ಕೋಟ್ಯಂತರ ರೂ. ವಂಚಿಸಿದ್ದ. ವಂಚನೆ ಸಂಬಂಧ ಅರ್ಜುನ ಪಾಟೀಲ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ 2021ರ ಆ.10 ರಂದು ಪ್ರಕರಣ ದಾಖಲಿಸಿದ್ದರು. ಆದರೆ, ವಂಚಕ ಮಾಲ್ಡಿವ್ಸ್, ಈಜಿಪ್ತ್, ದುಬೈನಲ್ಲಿ ಕುಟುಂಬದ ಸದಸ್ಯರೊಂದಿಗೆ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಪ್ರಕರಣದ ಗಂಭೀರತೆ ಅರಿತು ಕಲಂ 21(2)(3) ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019ಅಡಿ ತನಿಖೆ ಆರಂಭಿಸಿದ್ದರು. ಸಿಪಿಐ ಬಿ.ಆರ್.ಗಡ್ಡೇಕರ್ ಬಳಿಕ ಎಸಿಪಿ ನಾರಾಯಣ ಬರಮನಿ ಅವರನ್ನು ತನಿಖಾಧಿಕಾರಿಯನ್ನಾಗಿಸಿ ವಂಚಕನ ಬಂಧನಕ್ಕೆ ಬಲೆ ಬೀಸಲಾಗಿತ್ತು. ಹಣಕಾಸಿನ ವ್ಯವಹಾರಕ್ಕೆ ಭಾರತಕ್ಕೆ ಮರಳಿದ್ದ ವಂಚಕನನ್ನು ನೇಪಾಳ ಪೊಲೀಸರ ಸಹಕಾರದಿಂದ ಕಳೆದ ವಾರ ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದರು. ಬೆಳಗಾವಿ ನಗರ ಪೊಲೀಸರು ಭೇದಿಸಿದ ಬಡ್ಸ್ ಕಾಯ್ದೆಯ ಮೊದಲ ಪ್ರಕರಣ ಇದಾಗಿದೆ. ಕಾರ್ಯಾಚರಣೆಯಲ್ಲಿ ಎಸಿಪಿ ನಾರಾಯಣ ಬರಮನಿ, ಸಿಪಿಐ ನಿಂಗನಗೌಡ ಪಾಟೀಲ, ಸಿಬ್ಬಂದಿ ಕಾಡಯ್ಯ ಚರಲಿಂಗಮಠ, ಮಹೇಶ ಒಡೆಯರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts