More

    ಕೋಟಿ ಒಡೆಯ ದೊಡ್ಡಗೌಡರ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ

    ಹಾಸನ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಆಸ್ತಿ ವಿವರ ಸಲ್ಲಿಕೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದ ಹುಟ್ಟಿಸಿದ್ದು, ಅದರ ನಡುವೆ ಇದೀಗ ಲೋಕಸಭಾ ಚುನಾವಣೆಗೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೋಟಿ ಒಡೆಯರಾಗಿದ್ದಾರೆ.
    ದೊಡ್ಡಗೌಡರ ಮೊಮ್ಮಗ 5.44 ಕೋಟಿ ಚರ ಹಾಗೂ 35.40 ಕೋಟಿ ಸ್ಥಿರ ಆಸ್ತಿ ಸೇರಿ ಒಟ್ಟು 40.94 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಪ್ರಜ್ವಲ್ ರೇವಣ್ಣ ಘೋಷಿಸಿಕೊಂಡಿದ್ದಾರೆ. ಸದ್ಯ 9.29 ಲಕ್ಷ ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ನಗದು ಇದೆ.
    ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ಆದಾಯಗಳಿಸಿರುವುದಾಗಿ ಹೇಳಿಕೊಂಡಿರುವ ಪ್ರಜ್ವಲ್, ಕೃಷಿಯೇತರ ಮೂಲದಿಂದ 1.33 ಕೋಟಿ ಆದಾಯ ಗಳಿಕೆ ಮಾಡಿದ್ದೇನೆ ಎಂದಿದ್ದಾರೆ. ಹಾಗೆಯೇ 31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ ಹೊಂದಿರುವ ಪ್ರಜ್ವಲ್ ರೇವಣ್ಣ, ಬೆಂಗಳೂರು ಮೈಸೂರು ಸೇರಿ ವಿವಿಧೆಡೆೆ ವಾಣಿಜ್ಯ ಕಟ್ಟಡ, ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವುದನ್ನು ಬಹಿರಂಗ ಪಡಿಸಿದ್ದಾರೆ.
    ಪ್ರಜ್ವಲ್ ಕೆಜಿಗಟ್ಟಲೆ ಚಿನ್ನ ಮತ್ತು ಬೆಳ್ಳಿ ಹೊಂದಿದ್ದಾರೆ. 67 ಲಕ್ಷ ರೂ. ಮೌಲ್ಯದ 1 ಕೆಜಿ, 100 ಗ್ರಾಂ ಚಿನ್ನ ಮತ್ತು 17.48 ಲಕ್ಷ ರೂ. ಮೌಲ್ಯದ 23 ಕೆಜಿ ಬೆಳ್ಳಿ ಹಾಗೂ 1.90 ಲಕ್ಷ ಮೌಲ್ಯದ ವಜ್ರದ ಆಭರಣ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.

    ಕೋಟಿ ಕೋಟಿ ಸಾಲ:

    ಕೋಟಿ ಒಡೆಯ ಪ್ರಜ್ವಲ್ ಕೋಟಿ ಕೋಟಿ ಸಾಲ ಮಾಡಿದ್ದಾರೆ. ಅವರ ಅತ್ತೆ ಅನುಸೂಯ ಅವರಿಂದ 22 ಲಕ್ಷ, ಮತ್ತೊಬ್ಬ ಅತ್ತೆ ಶೈಲಜಾ ಅವರಿಂದ 10 ಲಕ್ಷ, ತಂದೆ ರೇವಣ್ಣ ಅವರಿಂದ 86 ಲಕ್ಷ ಹಾಗೂ ಸಹೋದರ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರಿಂದ 1ಕೋಟಿ, ಅಜ್ಜಿ ಚನ್ನಮ್ಮರಿಂದ23ಲಕ್ಷ , ಕುಪೇಂದ್ರ ರೆಡ್ಡಿಯಿಂದ 1ಲಕ್ಷ ಸಾಲದ ಪಡೆದಿದ್ದು, ಒಟ್ಟು 4.48 ಕೋಟಿ ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ.
    ಈ ನಡುವೆ ಸರ್ಕಾರಕ್ಕೆ 3.04 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts