More

    ಕೋಡಿ ಬಿದ್ದ ವಿಷ್ಣುಸಮುದ್ರ ಕೆರೆ

    ಕಡೂರು: ಜಿಲ್ಲೆಯ ಅತಿದೊಡ್ಡ ಕೆರೆಯಾದ ಹೇಮಗಿರಿಯ ವಿಷ್ಣು ಸಮುದ್ರಕೆರೆ ಗುರುವಾರ ಬೆಳಗಿನ ಜಾವ ಕೋಡಿ ಬಿದ್ದಿತು. ಸತತ 14 ವರ್ಷಗಳ ನಂತರ ಕೆರೆ ಮೈದುಂಬಿ ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

    2008-09ರ ಆಸುಪಾಸಿನಲ್ಲಿ ವಿಷ್ಣು ಸಮುದ್ರ ಕೆರೆಯು ತುಂಬಿ ಕೋಡಿ ಹರಿದಿರುವುದು ಬಿಟ್ಟರೆ, ನಂತರದ ವರ್ಷಗಳಲ್ಲಿ ಭರ್ತಿಯಾಗಲೇ ಇಲ್ಲ. ಪ್ರಸಕ್ತ ವರ್ಷ ಮಳೆ ಆರ್ಭಟದಿಂದಾಗಿ ವಿಷ್ಣುಸಮುದ್ರ ಕೆರೆಯು ತಾಲೂಕಿನ ಕಸಬಾ, ಸಿಂಗಟಗೆರೆ, ಯಗಟಿ ಮತ್ತು ಪಂಚನಹಳ್ಳಿ ಹೋಬಳಿಗಳ ಅಚ್ಚುಕಟ್ಟು ಪ್ರದೇಶಗಳಿಗೆ ಆಸರೆಯಾದಂತಾಗಿದೆ.

    ಯಗಟಿ, ಮಲ್ಲಾಘಟ್ಟ, ಚಟ್ನಳ್ಳಿ ಕೆರೆಗಳಿಗೆ ನೀರುಣಿಸುವ ವಿಷ್ಣು ಸಮುದ್ರಕೆರೆ 554 ಹೆಕ್ಟೇರ್ ವಿಸ್ತೀರ್ಣದಲ್ಲಿದೆ. ದೇವನೂರು ಕೆರೆ ತುಂಬಿ ಹರಿದರೆ, ದುದ್ದ, ಹಾರನಹಳ್ಳಿ ಕಡೆ ಮಳೆ ಹೆಚ್ಚಾದರೆ ವಿಷ್ಣುಸಮುದ್ರ ಕೆರೆಗೆ ನೀರು ಹರಿದು ಬರುತ್ತದೆ. ಅಯ್ಯನಕೆರೆ ಮತ್ತು ಮದಗದಕೆರೆಗಳ ವಿಸ್ತೀರ್ಣದ ಎರಡು ಪಟ್ಟು ಹೆಚ್ಚಾಗಿರುವ ವಿಷ್ಣುಸಮುದ್ರ ಕೆರೆ ಗುರುವಾರ ಬೆಳಗಿನ ಜಾವ ಕೋಡಿಬಿದ್ದಿರುವುದು ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನೀರು ಹರಿಯುವುದನ್ನು ನೋಡಲು ಆಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts