More

    ಕೊಳೆ ರೋಗದಿಂದ ಅಡಕೆ ಬೆಳೆ ಶೇ.80 ನಾಶ: ಪ್ರತಿ ಹೆಕ್ಟೇರ್‌ಗೆ 56 ಸಾವಿರ ರೂ. ಪರಿಹಾರ ನೀಡಿ

    ಸಾಗರ: ವಿಪರೀತ ಮಳೆಯಿಂದ ಶೇ.80ಕ್ಕೂ ಹೆಚ್ಚು ಭಾಗ ಅಡಕೆ ಕೊಳೆ ರೋಗದಿಂದ ಉದುರಿ ಹೋಗಿದೆ. ಸರ್ಕಾರ ತಕ್ಷಣ ಪ್ರಕೃತಿ ವಿಕೋಪ ನಿಧಿಯಿಂದ ಪ್ರತಿ ಹೆಕ್ಟೇರ್‌ಗೆ ತಲಾ 56 ಸಾವಿರ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ಗುರುವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಸಂಘದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಮಲೆನಾಡು ಭಾಗದ ಎಲ್ಲ ಅಡಕೆ ತೋಟಗಳಲ್ಲೂ ಶೇ.80ಕ್ಕೂ ಹೆಚ್ಚು ಭಾಗ ಕೊಳೆ ರೋಗದಿಂದ ನಷ್ಟವಾಗಿದೆ. ಮಲೆನಾಡಿನಲ್ಲಿ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರು ಶೇ.90ರಷ್ಟು ಇದ್ದಾರೆ. ಅಡಕೆಯನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಬೆಳೆಗಾರರು ಇದೀಗ ತೀವ್ರ ಸಂಕಷ್ಟ ಎದುರಿಸುವಂತೆ ಆಗಿದೆ. ಮಲೆನಾಡಿನ ಜೀವನಾಡಿ ಅಡಕೆ ಬೆಳೆಗಾರರ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
    2013-14ರಲ್ಲಿ ರೈತರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಿ ಪ್ರತಿ ಹೆಕ್ಟೇರ್‌ಗೆ 28 ಸಾವಿರ ರೂ. ಪರಿಹಾರ ನೀಡಿತ್ತು. ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಕೊಳೆ ರೋಗದಿಂದ ಹಾನಿಗೊಳಗಾದ ಪ್ರದೇಶಕ್ಕೆ 28 ಸಾವಿರ ರೂ. ಕೊಡಲು ಸಾಧ್ಯವಿದೆ. ಆದರೆ, ಈ ಪರಿಹಾರ ತೀರ ಕಡಿಮೆಯಾಗುತ್ತಿದ್ದು, ಸರ್ಕಾರ 28,000 ರೂ. ಜತೆಗೆ ಹೆಚ್ಚುವರಿಯಾಗಿ 28 ಸಾವಿರ ರೂ. ಸೇರಿಸಿ ಒಟ್ಟು 56 ಸಾವಿರ ರೂ. ಪರಿಹಾರ ನೀಡಬೇಕು. ಇದರ ಜೊತೆಗೆ ತಕ್ಷಣ ಎಲ್ಲ ಅಡಕೆ ಬೆಳೆಗಾರರಿಂದ ಅರ್ಜಿಗಳನ್ನು ಅಧಿಕಾರಿಗಳು ಸ್ವೀಕರಿಸಿ ಅದನ್ನು ಸರ್ಕಾರಕ್ಕೆ ಕಳಿಸಿ, ವಿಳಂಬ ಮಾಡದೇ ಪರಿಹಾರವನ್ನು ಕೂಡಲೇ ಮಂಜೂರು ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts