More

    ಕೊರ್ಲಕಟ್ಟಾದಲ್ಲಿ ಹಳ್ಳಿ ಸಂತೆ ಆಯೋಜನೆ

    ವಿಜಯವಾಣಿ ಸುದ್ದಿಜಾಲ ಶಿರಸಿ: ಇಲ್ಲಿನ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬನವಾಸಿಯ ಧಾನ್ ಫೌಂಡೇಷನ್ ಆಶ್ರಯದಲ್ಲಿ ತಾಲೂಕಿನ ಕೊರ್ಲಕಟ್ಟಾ ಗ್ರಾಮದಲ್ಲಿ ಬುಧವಾರ ಹಳ್ಳಿ ಸಂತೆಯನ್ನು ಆಯೋಜಿಸಲಾಗಿತ್ತು.

    ಸಂತೆಯಲ್ಲಿ ಬಂಕನಾಳ, ಕಾಯಗುಡ್ಡೆ ಹಾಗೂ ಸ್ಥಳೀಯವಾಗಿ ಬೆಳೆದ ತರಕಾರಿ, ಹಣ್ಣು, ಅರಿಶಿಣ ಮಾರಾಟಕ್ಕೆ ಇಡಲಾಗಿತ್ತು. ಈ ಸಂತೆಯ ಪ್ರಯೋಜನವನ್ನು ಗ್ರಾಮಸ್ಥರು ಪಡೆದು, ದೂರದ ಶಿರಸಿ, ಬನವಾಸಿ ಪಟ್ಟಣಗಳಿಂದ ತರಕಾರಿ ತರುವ ಸಮಸ್ಯೆಯನ್ನು ಈ ಸಂತೆ ನೀಗಿಸಿದೆ ಎಂದು ತಿಳಿಸಿದರು.

    ಕೇಂದ್ರದ ಮುಖ್ಯಸ್ಥ ಡಾ. ಮಂಜು ಎಂ.ಜೆ. ಅವರು ಮಾತನಾಡಿ, ವಾರಕ್ಕೊಮ್ಮೆ ಈ ಸಂತೆಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು. ಈ ವೇಳೆ ಕೊವಿಡ್-19 ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಹಾಗೂ ದೇಹದ ನಿರೋಧಕ ಶಕ್ತಿ ಹೆಚ್ಚಿಸಲು ಹಣ್ಣು ಮತ್ತು ತರಕಾರಿಗಳು ಪ್ರಮುಖ್ಯತೆ ಬಗ್ಗೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನಪ್ಪ ಗೌಡ, ಡಾ ರೂಪಾ ಎಸ್. ಪಾಟೀಲ ಹಾಗೂ ಧಾನ್ ಫೌಂಡೇಶನ್ ಪದಾಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts