More

    ಕೊನೆಗೂ ಸ್ಥಾಯಿ ಸಮಿತಿ ರಚನೆ, ಅಧ್ಯಕ್ಷರು, ಸದಸ್ಯರ ಅವಿರೋಧ ಆಯ್ಕೆ

    ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಪಂಚಾಯಿತಿ ಮೂವರು ಅಧ್ಯಕ್ಷರನ್ನು ಕಂಡರೂ ಅಸ್ತಿತ್ವಕ್ಕೆ ಬಾರದಿದ್ದ ಸ್ಥಾಯಿ ಸಮಿತಿ ಅಂತೂ ಇಂತೂ ರಚನೆಯಾಗಿದೆ. ಸೋಮವಾರ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

    2016ರಿಂದಲೂ ಸ್ಥಾಯಿ ಸಮಿತಿ ರಚನೆಯಾಗಿರಲಿಲ್ಲ, ಮೊದಲ ಅವಧಿಯಲ್ಲಿ ಜಿಪಂ ಅಧ್ಯಕ್ಷರಾಗಿ ಪಿ.ಎನ್.ಕೇಶವರೆಡ್ಡಿ, ಎರಡನೇ ಅವಧಿಯಲ್ಲಿ ಎಚ್.ವಿ.ಮಂಜುನಾಥ್, ಪ್ರಸ್ತುತ ಎಂ.ಬಿ ಚಿಕ್ಕನರಸಿಂಹಯ್ಯ ಅಧ್ಯಕ್ಷರಾಗಿದ್ದಾರೆ.

    ಜಿಪಂ ಸಭಾಂಗಣದಲ್ಲಿ ಸೋಮವಾರ ಸಿಇಒ ಬಿ.ಫೌಜೀಯಾ ತರನ್ನುಮ್ ಉಸ್ತುವಾರಿಯಲ್ಲಿ ಚುನಾವಣೆ ನಡೆಯಿತು. ಜಿಲ್ಲೆಯ ಶಾಸಕರು, ಸಂಸದರು, ಜಿಪಂ ಸದಸ್ಯರು ಹಾಗೂ ತಾಪಂ ಅಧ್ಯಕ್ಷರು ಸೇರಿ 41 ಮತದಾರರ ಪೈಕಿ 24 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು.
    ಶಾಸಕರು, ಸಂಸದರು ಗೈರಾದರು. ಪರಸ್ಪರ ಒಪ್ಪಂದದಂತೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

    ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಮತ್ತಿತರರು ಇದ್ದರು.

    ಸಾಮಾನ್ಯ ಸ್ಥಾಯಿ ಸಮಿತಿ: ನಿಯಮಾನುಸಾರ ಸಾಮಾನ್ಯ ಸ್ಥಾಯಿ ಸಮಿತಿಗೆ ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ ಜಿ.ಸುಬ್ಬಿರೆಡ್ಡಿ, ಎನ್.ಶ್ರೀನಿವಾಸ್, ಕೆ.ಎಂ.ಮುನೇಗೌಡ, ಬಿ.ಸಿ.ತನುಜಾ, ಗಾಯತ್ರಿ ನಂಜುಂಡಪ್ಪ, ಎಂ. ಆರ್ ವರಲಕ್ಷ್ಮೀ ಅವಿರೋಧ ಆಯ್ಕೆಯಾಗಿದ್ದಾರೆ.

    ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿ: ನಿಯಮಾನುಸಾರ ಜಿಪಂ ಅಧ್ಯಕ್ಷ ಎಂ.ಬಿ ಚಿಕ್ಕನರಸಿಂಹಯ್ಯ ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ ಗಾಯತ್ರಿ ನಂಜುಂಡಪ್ಪ, ವಿ. ನಾರಾಯಣಮ್ಮ ವೆಂಕಟೇಶ್, ಪ್ರಕಾಶ್, ಎಚ್.ವಿ.ಮಂಜುನಾಥ್, ಶಿವಣ್ಣ, ಆರ್.ಭವ್ಯಾ ರಂಗನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.

    ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಕೆ.ಸಿ ರಾಜಾಕಾಂತ್ ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಆರ್.ಭವ್ಯಾ ರಂಗನಾಥ್, ಕಮಲಮ್ಮ, ವಿ.ನಾರಾಯಣಮ್ಮ ವೆಂಕಟೇಶ್, ಎನ್.ಶ್ರೀನಿವಾಸ್, ಸುನಂದಮ್ಮ, ಎಂ.ಆರ್ ವರಲಕ್ಷ್ಮೀ ಅವಿರೋಧ ಆಯ್ಕೆಯಾಗಿದ್ದಾರೆ.

    ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮುನಿಯಪ್ಪ ಮತ್ತು ಸದಸ್ಯರಾಗಿ ಎ.ಅರುಂಧತಿ, ಕಮಲಮ್ಮ, ಜಯರಾಮರೆಡ್ಡಿ, ಪ್ರಕಾಶ್, ಮುನಿಯಪ್ಪ, ಕೆ.ಎಂ ಮುನೇಗೌಡ, ಎಚ್.ವಿ ಮಂಜುನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.

    ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ: ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಅಧ್ಯಕ್ಷೆಯಾಗಿ ಕವಿತಾ ಕೃಷ್ಣಮೂರ್ತಿ ಮತ್ತು ಸದಸ್ಯರಾಗಿ ಜಯರಾಮರೆಡ್ಡಿ, ಶಿವಣ್ಣ, ಪವಿತ್ರ, ಪ್ರಮೀಳ, ಸುಬ್ಬಿರೆಡ್ಡಿ, ಕವಿತಾ, ಸುನಂದಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts