More

    ಕೊನೆಗೂ ಕೂಡಿ ಬಂದ ಮುಹೂರ್ತ

    ಕಕ್ಕೇರಾ : ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ೫೫ ಲಕ್ಷ ರೂ. ವೆಚ್ಚದ ಮಳಿಗೆಗಳನ್ನು ೩೫ ತಿಂಗಳ ಬಳಿಕ ಶುಕ್ರವಾರ ಹರಾಜು ಮೂಲಕ ಹಂಚಿಕೆ ಮಾಡಿದ್ದು, ಅನಾಥಪ್ರಜ್ಞೆ ಎದುರಿಸುತ್ತಿದ್ದ ಅಂಗಡಿಗಳಿಗೆ ಕೊನೆಗೂ ವಹಿವಾಟು ನಡೆಸಲು ಮುಹೂರ್ತ ಕೂಡಿ ಬಂದAತಾಗಿದೆ.

    ೨೦೧೯-೨೦ರ ನಗರೋತ್ಥಾನದ ಮೂರನೇ ಹಂತ, ಎಸ್‌ಎಫ್‌ಸಿ ಮತ್ತು ೧೪ನೇ ಹಣಕಾಸು ಯೋಜನೆಯಡಿ ವಾರ್ಡ್ ೮ರಲ್ಲಿ ವಾಲ್ಮೀಕಿ ವೃತ್ತದ ಬಳಿ ೫೫ ಲಕ್ಷ ರೂ. ವೆಚ್ಚದ ೧೮ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ೨೦೨೧ರ ಜ.೭ರಂದು ಆಗಿನ ಶಾಸಕ ನರಸಿಂಹ ನಾಯಕ (ರಾಜುಗೌಡ) ಉದ್ಘಾಟನೆ ಮಾಡಿ ಕೂಡಲೇ ಸಾಮಾನ್ಯ ಸಭೆ ಕರೆದು ಸರ್ಕಾರದ ನಿರ್ದೇಶನದಂತೆ ಹರಾಜು ಹಾಕಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಆದರೆ ಕೆಲ ತಾಂತ್ರಿಕ ಕಾರಣ ಮತ್ತು ೨೦೨೧ರ ಡಿಸೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಿದ್ದರಿಂದ ಹರಾಜು ಪ್ರಕ್ರಿಯೆ ಮುಂದೂಡಲಾಗಿತ್ತು.

    ೩೫ ತಿಂಗಳ ಬಳಿಕವಾದರೂ ಎಚ್ಚೆತ್ತುಕೊಂಡ ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಶುಕ್ರವಾರ ಜಿಲ್ಲಾಡಳಿತದ ಗಮನಕ್ಕೆ ತಂದು ಸರ್ಕಾರದ ನಿರ್ದೇಶನದಂತೆ ಹರಾಜು ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಮಳಿಗೆಗಳ ನಿರ್ಮಾಣಕ್ಕೆ ಮುನ್ನ ಇದ್ದವರು, ಗ್ರಾಮ ಪಂಚಾಯಿತಿಯಲ್ಲಿ ಬಾಕಿ ಉಳಿಸಿಕೊಂಡವರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಬ್ಯಾಂಕ್‌ನಲ್ಲಿ ಡಿಡಿ ಕಟ್ಟಿದವರಿಗೆ ಮಾತ್ರ ಅವಕಾಶ ನೀಡಲಾಗುವುದು. ಸರ್ಕಾರದ ಸವಾಲಿಗಿಂತ ಹೆಚ್ಚಿನ ಬೇಡಿಕೆ ಇಟ್ಟವರಿಗೆ ಸರದಿ ಪ್ರಕಾರ ಮಳಿಗೆ ಹರಾಜು ಮಾಡಲಾಗುವುದು ಎಂದು ತಿಳಿಸಿದರು.

    ಪುರಸಭೆ ಸದಸ್ಯರಾದ ವೆಂಕಟೇಶ ನಾಯಕ ಜಹಾಗೀರದಾರ್, ಪರಮಣ್ಣ ಕಮತಗಿ, ಸಿದ್ದಣ್ಣ ದೇಸಾಯಿ, ಸೋಮನಾಥ ಸೋಲಾಪುರ, ನಿಂಗಪ್ಪ ನಾಯ್ಕ್, ಪರಶುರಾಮ ಗೋವಿಂದರ್, ಸದ್ದಾಂ ಹುಸೇನ್, ಅಮರೇಶ ದೊರೆ, ಜೆಟ್ಟೆಪ್ಪ ದಳಾ, ಬಸಪ್ಪ ಕಟ್ಟಿಮನಿ, ಪ್ರಮುಖರಾದ ಗುಂಡಪ್ಪ ಸೋಲಾಪುರ, ನಿಂಗಯ್ಯ ಬೂದಗುಂಪಿ, ಲಕ್ಷö್ಮಣ ಲಿಂಗದಳ್ಳಿ, ಬಸಯ್ಯ ಸ್ವಾಮಿ, ಪರಮಣ್ಣ ತೇರಿನ್, ಚಂದ್ರು ವಜ್ಜಲ್, ಶರಣಕುಮಾರ ಸೋಲಾಪುರ, ಮಲ್ಲು ಹುಲಿಕೇರಿ, ಲಕ್ಕಪ್ಪ ಮೇಲಾ ಇತರರಿದ್ದರು.

    ಈ ಮಳಿಗೆಗಳಿಂದ ಪುರಸಭೆಗೆ ಬರಬೇಕಿದ್ದ ಆದಾಯ ಮೂರು ವರ್ಷದಿಂದ ಖೋತಾ ಆಗಿತ್ತು. ಆದರೀಗ ಹರಾಜು ಆಗಿದ್ದರಿಂದ ಆದಾಯ ಹೆಚ್ಚಳ ನಿರೀಕ್ಷಿಸಬಹುದಾಗಿದೆ. ಒಟ್ಟಾರೆ ಪುಂಡ-ಪೋಕರಿಗಳ ಅಡ್ಡೆಯಾಗಿದ್ದ ಮಳಿಗೆಗಳು ಇನ್ಮುಂದೆ ವ್ಯಾಪಾರ-ವಹಿವಾಟಿನ ಪ್ರಮುಖ ಕೇಂದ್ರವಾಗಲಿವೆ. ೧೮ ಮಳಿಗೆ ಪಡೆಯಲು ೮೫ ಆಕಾಂಕ್ಷಿಗಳಿದ್ದರು. ಯಾವುದೇ ತೊಂದರೆ ಆಗದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts