More

    ಕೊಡುಗೈ ದಾನಿ ಹೆಸರಲ್ಲಿ ಶಾಶ್ವತ ದತ್ತಿ

    ಹುಬ್ಬಳ್ಳಿ: ಉದ್ಯಮ ಕ್ಷೇತ್ರದಲ್ಲಿ ಸಾಹಸ ಮಾಡಿ, ದುಡಿಮೆಯಲ್ಲಿ ಹೆಚ್ಚಿನದನ್ನು ಸಮಾಜಕ್ಕೆ ಕೊಟ್ಟು, ಕಾಲಿಟ್ಟ ಪ್ರತಿ ಕ್ಷೇತ್ರದಲ್ಲಿಯೂ ಉತ್ಕೃಷ್ಟ ಸಾಧನೆ ಮೂಲಕ ಇತಿಹಾಸ ಸೃಷ್ಟಿಸಿ, ಇತ್ತೀಚೆಗೆ ಮರೆಯಾದ ಚೇತನ ಆರ್.ಎನ್. ಶೆಟ್ಟಿ ಅವರ ಹೆಸರು ಅವರ ಹಲವು ಕಾರ್ಯ- ಕೊಡುಗೆಗಳೊಂದಿಗೆ ‘ದತ್ತಿ’ಯೊಂದರ ಮೂಲಕವೂ ಚಿರಸ್ಥಾಯಿಯಾಗಲಿದೆ.

    ಡಿ. 17ರಂದು ಇಹಲೋಕ ತ್ಯಜಿಸಿದ ಆರ್.ಎನ್. ಶೆಟ್ಟಿಯವರಿಗೆ ಅವರ ಕರ್ಮಭೂಮಿ ಹುಬ್ಬಳ್ಳಿಯಲ್ಲಿ ನುಡಿನಮನ ಸಲ್ಲಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಬಂಟರ ಸಮಾಜದ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದತ್ತಿ ಪ್ರಾರಂಭಿಸುವ ಘೊಷಣೆ ಮಾಡಲಾಯಿತು.

    ಅಲ್ಲಿ ಸೇರಿದ್ದ, ಸರ್ವ ಸಮಾದವರ ಆಶಯಕ್ಕೆ ಪೂರಕವಾಗಿ ಕಾರ್ಯಕ್ರಮದ ಕೊನೆಯಲ್ಲಿ ಬಂಟರ ಸಂಘದ ಕಾರ್ಯಾಧ್ಯಕ್ಷ ಎಸ್. ಸುಭಾಶ್ಚಂದ್ರ ಶೆಟ್ಟಿ ದತ್ತಿ ಘೊಷಣೆ ಮಾಡಿದರು.

    ಕಲ್ಯಾಣ ಮಂಟಪದ ವೇದಿಕೆ ವಿಶಿಷ್ಟವಾಗಿತ್ತು. ಆರ್.ಎನ್. ಶೆಟ್ಟಿಯವರ ಸವೋತ್ಕೃಷ್ಟ ಕೊಡುಗೆಯಾದ ಮುರ್ಡೆಶ್ವರ ದೇವಸ್ಥಾನದ ವರ್ಣಮಯ ಚಿತ್ರ, ಅದರ ಪಕ್ಕದಲ್ಲೇ ಗೋಪುರದ ಪ್ರತಿಕೃತಿ ಇಟ್ಟು, ಅದರ ಮಧ್ಯ ಭಾಗದಲ್ಲಿ ಆರ್​ಎನ್​ಎಸ್ ಅವರ ಭಾವಚಿತ್ರ ಅಳವಡಿಸಲಾಗಿತ್ತು. ನುಡಿನಮನ ಸಲ್ಲಿಸುವವರಲ್ಲಿ ಒಂದು ಸಲಕ್ಕೆ ಒಬ್ಬರಿಗೆ ಮಾತ್ರ ವೇದಿಕೆ ಏರಲು ಅವಕಾಶ ಕಲ್ಪಿಸಲಾಗಿತ್ತು.

    ಬಂಟರ ಸಂಘದ ಮಾಜಿ ಉಪಾಧ್ಯಕ್ಷ, ಸೀತಾರಾಮ ಶೆಟ್ಟಿ , ಶಾಸಕ ಅರವಿಂದ ಬೆಲ್ಲದ, ಮಾಜಿ ಸಂಸದ ಐ.ಜಿ. ಸನದಿ, ಪಾಲಿಕೆ ಮಾಜಿ ಸದಸ್ಯರಾದ ದೀಪಕ ಚಿಂಚೋರೆ, ರಾಜಣ್ಣ ಕೊರವಿ, ರೋಟರಿ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ರಾಜಾ ದೇಸಾಯಿ, ಎಸ್​ಎಸ್​ಕೆ ಸಮಾಜದ ಅಧ್ಯಕ್ಷ ನೀಲಕಂಠ ಜಡಿ, ದ.ಕ. ದ್ರಾವಿಡ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅನಂತರಾಜ ಭಟ್ಟ, ಜೈನ ಸಮಾಜದ ಪರ ಮಹೇಂದ್ರ ಸಿಂಘಿ, ನ್ಯಾಯವಾದಿ ಬಿ.ಡಿ. ಹೆಗಡೆ, ಪ್ರಮುಖರಾದ ಎನ್.ಎಂ. ಮೆಹರವಾಡೆ, ಸುರೇಂದ್ರ ಸಿಂಗ್, ಟಿ.ಎಂ. ಮೆಹರವಾಡೆ, ಸುರೇಂದ್ರ ಸಿಂಗ್, ಇತರರು ಮಾತನಾಡಿದರು.

    ವಿವೇಕ ಸಂಗೀತ ಶಾಲೆ ವಿದ್ಯಾರ್ಥಿಗಳು ಗೀತ ನಮನ ಸಲ್ಲಿಸಿದರು.

    ಹು-ಧಾ ಬಂಟರ ಸಂಘ, ಆರ್.ಎನ್. ಶೆಟ್ಟಿ ಅಭಿಮಾನಿಗಳು, ಮಾತೃಭೂಮಿ ಚಾರಿಟೇಬಲ್ ಟ್ರಸ್ಟ್, ಆರ್​ಎನ್​ಎಸ್ ವಿದ್ಯಾನಕೇತನ ಸಂಸ್ಥೆ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ಬಂಟರ ಸಂಘದ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಜತೆ ಕಾರ್ಯದರ್ಶಿ ವೀರೇಂದ್ರ ಶೆಟ್ಟಿ, ಕೋಶಾಧ್ಯಕ್ಷ ಹರ್ಷಕುಮಾರ ಶೆಟ್ಟಿ, ಉಪಾಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸತೀಶ ಶೆಟ್ಟಿ, ಎಸ್.ಬಿ. ಶೆಟ್ಟಿ, ದಿನೇಶ ಶೆಟ್ಟಿ, ಭುಜಂಗ ಶೆಟ್ಟಿ, ಮಹೇಶ ಶೆಟ್ಟಿ, ಪ್ರಮುಖರಾದ ರಾಜೇಂದ್ರ ಶೆಟ್ಟಿ, ಸುಧೀರ ಶೆಟ್ಟಿ, ಪುರಂಧರ ರೈ, ಪ್ರದೀಪ ಪಕ್ಕಲ, ಶ್ರೀನಿವಾಸ ಶೆಟ್ಟಿ, ರತ್ನಾಕರ ಶೆಟ್ಟಿ, ಡಾ. ಧನಪಾಲ ಹೆಗಡೆ, ಡಾ. ವಿಎಸ್​ವಿ ಪ್ರಸಾದ, ಚಂದ್ರಹಾಸ ಶೆಟ್ಟಿ ಬಂಟ್ವಾಳ, ವೀರಭದ್ರಪ್ಪ ಹಾಲಹರವಿ, ಮಲ್ಲಿಕಾರ್ಜುನ ಸಾವಕಾರ, ಮಹೇಶ ಬುರ್ಲಿ ಮೊದಲಾದವರು ಉಪಸ್ಥಿತರಿದ್ದರು. ವೇಣುಗೋಪಾಲ ಶೆಟ್ಟಿ, ಜೆ.ಕೆ. ಶೆಟ್ಟಿ, ಶಾಂತರಾಮ ಶೆಟ್ಟಿ ನಿರ್ವಹಿಸಿದರು.

    ಒಂದು ಸಮಾಜಕ್ಕೆ ಸೀಮಿತರಲ್ಲ

    ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಆರ್.ಎನ್. ಶೆಟ್ಟಿಯವರು ಒಂದು ಸಮಾಜಕ್ಕೆ ಸೀಮಿತರಾಗಿರಲಿಲ್ಲ. ಅವಶ್ಯಕತೆ ಅರಿತು ದಾನ ಮಾಡುವ ಮೂಲಕ ದಾನದ ಮಹತ್ವವನ್ನು ಹೆಚ್ಚಿಸಿದವರು. ಮುರ್ಡೆಶ್ವರ ಅವರ ದೂರದೃಷ್ಟಿಗೆ ಸಾಕ್ಷಿ. ಹುಬ್ಬಳ್ಳಿ-ಧಾರವಾಡಕ್ಕೂ ಅವರ ಕೊಡುಗೆ ಬಹು ದೊಡ್ಡದು. ತಮಗೆ ಇಂಥದ್ದನ್ನು ಮಾಡಿಕೊಡಿ ಎಂದು ಅವರು ಎಂದೂ ಕೇಳುತ್ತಿರಲಿಲ್ಲ, ತಮ್ಮಿಂದ ಏನು ಆಗಬೇಕು ಎಂದು ಕೇಳುತ್ತಿದ್ದರು ಎಂದು ಸ್ಮರಿಸಿಕೊಂಡರು.

    ಮೂಡಬಿದ್ರಿಯಲ್ಲಿ ನಾಮಕರಣ

    ಅತಿಥಿಯಾಗಿ ಪಾಲ್ಗೊಂಡಿದ್ದ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಕೆರೆಯ ನೀರನು ಕೆರೆಗೆ ಚೆಲ್ಲು ಎಂಬಂತೆ ಆರ್.ಎನ್. ಶೆಟ್ಟಿಯವರು ಸಮಾಜ ಋಣ ತೀರಿಸಿ, ಇತಿಹಾಸ ನಿರ್ವಿುಸಿದ ಅಪರೂಪದ ಮಹನೀಯರು. ಅವರು ಕಟ್ಟಿದ ಸಂಸ್ಥೆಗಳಲ್ಲಿ ವರ್ಷಕ್ಕೊಂದು ದಿನ ಸ್ಮರಣೆ ಮಾಡಿ, ಕೊಡುಗೆಗಳನ್ನು ಮೆಲುಕು ಹಾಕಬೇಕು ಎಂದರು. ತಮ್ಮ ಮೂಡಬಿದ್ರಿಯ ಶಿಕ್ಷಣ ಸಂಸ್ಥೆಗಳ ಆವರಣದ ಒಂದು ಕಟ್ಟಡಕ್ಕೆ ಆರ್.ಎನ್. ಶೆಟ್ಟಿಯವರ ಹೆಸರನ್ನು ಇಡುವುದಾಗಿ ಪ್ರಕಟಿಸಿದರು.

    ವಾರ್ಷಿಕ ಪ್ರಶಸ್ತಿ

    ಆರ್.ಎನ್. ಶೆಟ್ಟಿಯವರ ಸ್ಮರಣಾರ್ಥ ಸ್ಥಾಪಿಸುವ ಶಾಶ್ವತ ದತ್ತಿ ವತಿಯಿಂದ ವಿಶೇಷ ಕೆಲಸ ಮಾಡಿದ ವ್ಯಕ್ತಿ ಅಥವಾ ಸಂಸ್ಥೆಗೆ ವಾರ್ಷಿಕ ಪ್ರಶಸ್ತಿ ನೀಡಲಾಗುವುದು ಎಂದು ಸುಭಾಶ್ಚಂದ್ರ ಶೆಟ್ಟಿ ಪ್ರಕಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts